ಸಿಎಂ ವಿಜಯ್ ಧ್ವಜಾರೋಹಣಕ್ಕೆ ನಟಿ ತ್ರಿಷಾ ಸಾಕ್ಷಿ: ಇಂಟರ್ನೆಟ್‌ನಲ್ಲಿ ಹಲ್‍ಚಲ್ ಎಬ್ಬಿಸಿದ ವೈರಲ್ ವಿಡಿಯೋ! Trisha Krishnan

Trisha Krishnan (ಚಿತ್ರ X)
Trisha Krishnan (ಚಿತ್ರ X)
Published on

ಚೆನ್ನೈ: ತಮಿಳುನಾಡಿನ ಐತಿಹಾಸಿಕ ಫೋರ್ಟ್ ಸೇಂಟ್ ಜಾರ್ಜ್‌ನಲ್ಲಿ ನಡೆದ 80 ನೇ ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಧ್ವಜಾರೋಹಣ ನೆರವೇರಿಸುವುದಕ್ಕೂ ಮುನ್ನವೇ ಸಭಾಂಗಣದ ಮುಂಚೂಣಿ ಸಾಲಿನಲ್ಲಿ ನಟಿ ತ್ರಿಷಾ ಕೃಷ್ಣನ್​(

Trisha Krishnan )

 ಉಪಸ್ಥಿತರಿದ್ದು, ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. 

ಸಿಎಂ ವಿಜಯ್ ತಂದೆ ಪಕ್ಕದಲ್ಲೇ ಆಸನ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋಗಳಲ್ಲಿ ನಟಿ ವಿಜಯ್​ ಅವರ ತಂದೆ ನಿರ್ದೇಶಕ ಎಸ್‌ಎಸ್‌ ಚಂದ್ರಶೇಖರ್ ಅವರ ಪಕ್ಕದಲ್ಲೇ ಕೂತಿರುವುದನ್ನು ಕಾಣಬಹುಹುದು. ಆದಾಗ್ಯೂ, ನಟಿ ಸುತ್ತಮುತ್ತಲಿನ ಗಣ್ಯರೊಂದಿಗೆ ನಗುಮುಖದಿಂದ ಸಂಭಾಷಣೆ ನಡೆಸಿದ್ದಾರೆ. 
ಈ ವಿಶೇಷ ಸಂದರ್ಭಕ್ಕಾಗಿ ತ್ರಿಷಾ ಸಾಂಪ್ರದಾಯಿಕ ಶೈಲಿಯ ಗೋಲ್ಡ್​ ಸೀರೆಯನ್ನುಟ್ಟು ತಲೆಗೆ ಮಲ್ಲಿಗೆ ಮುಡಿದು ಅತ್ಯಂತ ಸರಳ ಹಾಗೂ ಕಲಾತ್ಮಕ ಉಡುಪಿನಲ್ಲಿ ಕಂಗೊಳಿಸುತ್ತಿದ್ದರು. 

ವಿಜಯ್-ತ್ರಿಷಾ ಕೆಮಿಸ್ಟ್ರಿ

ತಮಿಳು ಚಿತ್ರರಂಗದಲ್ಲಿ ಆನ್‌ಸ್ಕ್ರೀನ್ ಮತ್ತು ಆಫ್‌ಸ್ಕ್ರೀನ್ ಜೋಡಿಗಳ ವಿಷಯ ಬಂದಾಗ ನೆನಪಾಗುವ ಪ್ರಮುಖ ಹೆಸರುಗಳೆಂದರೆ ನಟ ವಿಜಯ್ ಹಾಗೂ ನಟಿ ತ್ರಿಷಾ ಕೃಷ್ಣನ್. ಬೆಳ್ಳಿಪರದೆಯ ಮೇಲೆ ತಮ್ಮ ಅದ್ಭುತ ಅಭಿನಯ ಮತ್ತು ಕೆಮಿಸ್ಟ್ರಿ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದ ಈ ಜೋಡಿಯ ಬಗ್ಗೆ ಹಲವು ವರ್ಷಗಳಿಂದ ಗಾಸಿಪ್‌ಗಳು ಹರಿದಾಡುತ್ತಲೇ ಇವೆ.
2004ರಲ್ಲಿ ತೆರೆಕಂಡ 'ಗಿಲ್ಲಿ' ಚಿತ್ರದ ಮೂಲಕ ವಿಜಯ್ ಮತ್ತು ತ್ರಿಷಾ ಜೋಡಿ ಭಾರತೀಯ ಚಿತ್ರರಂಗದಲ್ಲೇ ಹೊಸ ಸಂಚಲನ ಸೃಷ್ಟಿಸಿತ್ತು. ಇದಾದ ಬಳಿಕ ಬಂದ 'ತಿರುಪಾಚಿ' (2005), 'ಆದಿ' (2006) ಹಾಗೂ 'ಕುರುವಿ' (2008) ನಂತಹ ಸಾಲು ಸಾಲು ಬ್ಲಾಕ್‌ಬಸ್ಟರ್ ಸಿನಿಮಾಗಳ ಮೂಲಕ ಈ ಜೋಡಿ ತಮಿಳು ಚಿತ್ರರಂಗದ ಅತ್ಯಂತ ಯಶಸ್ವಿ ಆನ್‌ಸ್ಕ್ರೀನ್ ಪೇರ್ ಆಗಿ ಹೊರಹೊಮ್ಮಿತು.

ಆದರೆ, 2008ರ 'ಕುರುವಿ' ಚಿತ್ರದ ಯಶಸ್ಸಿನ ನಂತರ ಈ ಜೋಡಿ ಇದ್ದಕ್ಕಿದ್ದಂತೆ ಒಟ್ಟಿಗೆ ನಟಿಸುವುದನ್ನೇ ನಿಲ್ಲಿಸಿತು. ಇದು ಗಾಸಿಪ್‌ಗಳಿಗೆ ಮತ್ತಷ್ಟು ಪುಷ್ಟಿ ನೀಡಿತು. 'ಗಿಲ್ಲಿ' ಚಿತ್ರದ ಸಮಯದಿಂದಲೇ ಬೆಳೆದಿದ್ದ ಇವರ ಆತ್ಮೀಯತೆಯೇ ಇದಕ್ಕೆ ಕಾರಣ ಎಂಬ ಮಾತುಗಳು ಕೇಳಿಬಂದವು. ಅಷ್ಟೇ ಅಲ್ಲದೆ, 'ಕುರುವಿ' ನಂತರ ವಿಜಯ್ ಅವರ ಕುಟುಂಬವೇ ತ್ರಿಷಾ ಅವರಿಂದ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಿತ್ತು ಎಂಬ ವದಂತಿಗಳೂ ಕಾಲಿವುಡ್ ಅಂಗಳದಲ್ಲಿ ಹಬ್ಬಿದ್ದವು.

ನಾವು ಕೇವಲ ಆತ್ಮೀಯ ಸ್ನೇಹಿತರು

ಈ ಎಲ್ಲಾ ಗಾಸಿಪ್‌ಗಳಿಗೆ ಮತ್ತು ಪ್ರಣಯದ ವದಂತಿಗಳಿಗೆ ಇಬ್ಬರೂ ತಾರೆಯರು ಕಾಲಕಾಲಕ್ಕೆ ತೆರೆ ಎಳೆಯುವ ಕೆಲಸ ಮಾಡುತ್ತಲೇ ಬಂದಿದ್ದಾರೆ. ತಾವು ನಿಜ ಜೀವನದಲ್ಲಿ ಯಾವುದೇ ಪ್ರೇಮ ಸಂಬಂಧದಲ್ಲಿಲ್ಲ, ಕೇವಲ ಉತ್ತಮ ಸ್ನೇಹಿತರು ಎಂದು ಇಬ್ಬರೂ ಹಲವು ವೇದಿಕೆಗಳಲ್ಲಿ ಸ್ಪಷ್ಟಪಡಿಸಿದ್ದಾರೆ.
ಆದಾಗ್ಯೂ, ದಶಕಗಳು ಕಳೆದರೂ ಈ ಹಿಟ್ ಜೋಡಿಯ ನಡುವಿನ ಬಾಂಧವ್ಯ ಮತ್ತು ಸುದ್ದಿ-ವದಂತಿಗಳು ತಮಿಳು ಚಿತ್ರರಂಗದಲ್ಲಿ ಇಂದಿಗೂ ಬಿಸಿಬಿಸಿ ಚರ್ಚೆಯ ವಸ್ತುವಾಗಿಯೇ ಉಳಿದಿವೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net