ಬಂಡಾಯಗಾರರ ನೇತೃತ್ವ ವಹಿಸಿರುವ ಸಂಸದೆ ಕಾಕೋಲಿ ಘೋಷ್ ದಸ್ತಿದಾರ್ ಅವರು, ಲೋಕಸಭೆಯಲ್ಲಿ ನಮ್ಮ ಬಣಕ್ಕೆ ಪ್ರತ್ಯೇಕ ಮನ್ನಣೆ ಸಿಕ್ಕ ತಕ್ಷಣ, ನಾವು ಸಂಸತ್ತಿನಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟಕ್ಕೆ ಬೆಂಬಲ ನೀಡಲಿದ್ದೇವೆ ಎಂದು ಮುಕ್ತವಾಗಿ ಘೋಷಿಸಿದ್ದಾರೆ. ಇದು ದೆಹಲಿ ಮಟ್ಟದಲ್ಲಿ ಮಮತಾ ಬ್ಯಾನರ್ಜಿ ಅವರ ರಾಜಕೀಯ ಶಕ್ತಿಯನ್ನು ಸಂಪೂರ್ಣವಾಗಿ ಕುಗ್ಗಿಸಿದೆ. ಪಕ್ಷದೊಳಗೆ ನಡೆದಿರುವ ಈ ದ್ರೋಹದ ಬಗ್ಗೆ ಟಿಎಂಸಿಯ ಹಿರಿಯ ರಾಜ್ಯಸಭಾ ಸಂಸದರೊಬ್ಬರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಮಮತಾ ದೀದಿ ಅವರು ಹಾಲು, ಜೇನು ಉಣಿಸಿ ಸಾಕಿದವರೆಲ್ಲಾ ಕೊನೆಗೆ ಹಾವಾಗಿ ಕಚ್ಚುತ್ತಿದ್ದಾರೆ ಎಂದು ಬಂಡಾಯವೆದ್ದ 20 ಸಂಸದರ ವಿರುದ್ಧ ಮಾರ್ಮಿಕವಾಗಿ ಕಿಡಿಕಾರಿದ್ದಾರೆ. ಸದ್ಯ ಮಮತಾ ಬ್ಯಾನರ್ಜಿ ಕೇವಲ ತಮ್ಮ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಸೇರಿದಂತೆ ಕೇವಲ 8 ಸಂಸದರ ಬೆಂಬಲವನ್ನು ಮಾತ್ರ ಉಳಿಸಿಕೊಂಡಿದ್ದಾರೆ.