ಮುಂಬೈನಲ್ಲಿ ರಸ್ತೆಗೆ ಮರ ಬಿದ್ದು ಟ್ರಾಫಿಕ್​ ಜಾಮ್; ನಾಲ್ಕು ಬೆಸ್ಟ್​ ಬಸ್​ಗಳ ಪರಸ್ಪರ ಡಿಕ್ಕಿ; ಓರ್ವ ಕಂಡಕ್ಟರ್ ಸಾವು | Mumbai

ಘಟನೆಯ ಸ್ಥಳ
ಘಟನೆಯ ಸ್ಥಳ
Published on
Mumbai: ಮಹಾರಾಷ್ಟ್ರದ ಮುಂಬೈನ ಅಂಧೇರಿ ಪಶ್ಚಿಮ ಅಂಬೋಲಿ ನಾಕ ಬಳಿ ಗುರುವಾರ(ಮೇ 14) ಮಧ್ಯಾಹ್ನ ಮರ ಬಿದ್ದು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿಕೊಂಡು ನಿಂತಿದ್ದ ವಾಹನಗಳ ನಡುವೆ ನಾಲ್ಕು ಬೆಸ್ಟ್ ಬಸ್​ಗಳು ಪರಸ್ಪರ ಡಿಕ್ಕಿ ಹೊಡದು ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ 52 ವರ್ಷದ ಕಂಡಕ್ಟರ್ ಒಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಅಂಬೋಲಿ ನಾಕಾ ಮತ್ತು ರಾಜ್‌ಕುಮಾರ್ ಬಸ್ ನಿಲ್ದಾಣದ ನಡುವೆ ಮಧ್ಯಾಹ್ನ 1.15ರ ಸುಮಾರಿಗೆ ಈ ಘಟನೆ ನಡೆದಿದೆ. ರಸ್ತೆಯ ಮೇಲೆ ಮರ ಬಿದ್ದ ಪರಿಣಾಮ ರಸ್ತೆಯಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿದೆ. ಈ ಹಿನ್ನೆಲೆ ಮಾತೇಶ್ವರಿ ಮಾರ್ಗದ ಮೂರು ಬಸ್‌ಗಳು 266/32 (ಬಸ್ ಸಂಖ್ಯೆ 7783), ರೂಟ್ 242/32 (ಬಸ್ ಸಂಖ್ಯೆ 7774) ಹಾಗೂ ರೂಟ್ 249/33 (ಬಸ್ ಸಂಖ್ಯೆ 7778) ಸರದಿಯಲ್ಲಿ ನಿಂತಿದ್ದವು.
ರೂಟ್ 251ರಲ್ಲಿ MH-01-FE-0620 (ಬಸ್ ಸಂಖ್ಯೆ 4115) ನೋಂದಣಿ ಸಂಖ್ಯೆಯನ್ನು ಹೊಂದಿರುವ PMI ಚಾಲಿತ BEST ಬಸ್ ಹಿಂದಿನಿಂದ ಬಂದು ನಿಂತಿದ್ದ ಬಸ್‌ಗಳಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ 7783 ಬಸ್ ಸಂಖ್ಯೆಯ ಕಂಡಕ್ಟರ್ ಶೇಖರ್ ಬಾಬುರಾವ್ ರಾವಟೆ, ನಿಲ್ಲಿಸಿದ ವಾಹನಗಳ ಹಿಂದೆ ಚಲಿಸುವಾಗ ಬಸ್​ಗಳ ಡಿಕ್ಕಿಯಲ್ಲಿ ಸಿಲುಕಿ ತೀವ್ರ ಗಾಯಗೊಂಡರು, ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿ ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ.
ಘಟನೆಯ ಬಗ್ಗೆ ಪೊಲೀಸರು ಮತ್ತು ಸಾರಿಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಮರ ಬಿದ್ದ ನಂತರ ಸಂಚಾರ ದಟ್ಟಣೆಯಿಂದಾಗಿ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ಮಾಹಿತಿ ಸೂಚಿಸುತ್ತಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net