ಹಣ ಕೊಡದ ಯುವತಿಯ ಮುಖಕ್ಕೆ ಉಗುಳಿದ ಮಂಗಳಮುಖಿ! ವಿಡಿಯೋ ವೈರಲ್​ | Transgender

ಯುವತಿ ಮೇಲೆ ಉಗುಳಿದ ಮಂಗಳಮುಖಿ
ಯುವತಿ ಮೇಲೆ ಉಗುಳಿದ ಮಂಗಳಮುಖಿ
Published on

ಪ್ರಮುಖ ಮುಖ್ಯಾಂಶಗಳು

  • ಹಣ ನೀಡದ ಯುವತಿಯ ಮುಖಕ್ಕೆ ಗುಟ್ಕಾ ಉಗುಳಿದ ಮಂಗಳಮುಖಿ
  • ಮೆಟ್ರೋ ನಿಲ್ದಾಣದಲ್ಲಿ ನಡೆದ ಘಟನೆ
  • ಮುಂಗಳಮುಖಿಯನ್ನು ತರಾಟೆಗೆ ತೆಗೆದುಕೊಂಡ ನೆಟ್ಟಿಗರು
ಮಂಗಳಮುಖಿ: ಭಾರತದಲ್ಲಿನ ಮೆಟ್ರೋ, ರೈಲು ನಿಲ್ದಾಣಗಳು ಯಾವಾಗಲೂ ಜನರಿಂದ ಕಿಕ್ಕಿರಿದು ತುಂಬಿರುತ್ತಾರೆ. ಅಲ್ಲಿ ನಾವು ಭಿಕ್ಷೆ ಕೇಳುವವರು ಅಥವಾ ಹಣಕ್ಕಾಗಿ ಪೀಡಿಸುವ ಮಂಗಳಮುಖಿ (Transgender) ಯರನ್ನು ನೋಡಿರುತ್ತೆವೆ. ಆದರೆ ಇತ್ತೀಚೆಗೆ ನಡೆದ ಒಂದು ಘಟನೆ ಮಾತ್ರ ಇಡೀ ಸೋಷಿಯಲ್ ಮೀಡಿಯಾವನ್ನು ಬೆಚ್ಚಿಬೀಳಿಸಿದ್ದು, ಕೇವಲ ಹಣ ನೀಡಿಲ್ಲ ಎಂಬ ಒಂದೇ ಕಾರಣಕ್ಕೆ ಮಂಗಳಮುಖಿ ಮಹಿಳೆಯೊಬ್ಬಳು ಯುವತಿಯೊಬ್ಬಳ ಮುಖಕ್ಕೆ ಉಗುಳಿರುವ ಅಸಹ್ಯಕರ ಘಟನೆ ನಡೆದಿದೆ.

ಅಸಲಿಗೆ ಅಲ್ಲಿ ಆಗಿದ್ದೇನು? 

ವೈರಲ್ ಆಗುತ್ತಿರುವ ವಿಡಿಯೋ ಪ್ರಕಾರ, ಮೆಟ್ರೋ ನಿಲ್ದಾಣದಲ್ಲಿ ನಿಂತಿದ್ದ ಯುವತಿಯ ಬಳಿ ಟ್ರಾನ್ಸ್ ಮಹಿಳೆಯೊಬ್ಬರು ಬಂದು ಆಶೀರ್ವಾದ ಮಾಡುವ ನಾಟಕವಾಡಿ ಹಣಕ್ಕಾಗಿ ಪೀಡಿಸಿದ್ದಾರೆ. ಆದರೆ ಆ ಯುವತಿ ಹಣ ನೀಡಲು ನಿರಾಕರಿಸಿದ್ದಾರೆ. ಅಷ್ಟಕ್ಕೇ ಸುಮ್ಮನಾಗದ ಟ್ರಾನ್ಸ್ ಮಹಿಳೆ, ಕಿರಿಕಿರಿ ಮಾಡತೊಡಗಿದ್ದಾರೆ. ಪರಿಸ್ಥಿತಿ ಮಿತಿ ಮೀರಿದಾಗ ಯುವತಿ ತನ್ನ ಮೊಬೈಲ್ ತೆಗೆದು ವಿಡಿಯೋ ಮಾಡಲು ಮುಂದಾಗಿದ್ದಾರೆ. ಇದರಿಂದ ಕೆರಳಿದ ಆ ಟ್ರಾನ್ಸ್ ಮಹಿಳೆ, "ನಿನಗೆ ಕಿನ್ನಾರರ ಶಾಪ ತಟ್ಟಲಿ ಎನ್ನುತ್ತಾ ಆಕೆಯ ಮುಖಕ್ಕೆ ಉಗುಳಿದ್ದಾಳೆ.
ಉಗುಳಿದ ಬಳಿಕ ಆ ಮಂಗಳಮುಖಿಯು ಓಡ ತೋಡಗಿದ್ದಾಳೆ. ಆಗ ಆ ಯುವತಿ, ಈಗ ಯಾಕೆ ಮುಖ ಮುಚ್ಚಿಕೊಳ್ತಿದ್ದೀರಾ? ನೀವು ನನ್ನ ಮೇಲೆ ಉಗುಳಿದ್ದು ವಿಡಿಯೋ ಆಗಿದೆ, ಈಗ ನೀವು ವೈರಲ್ ಆಗೋದು ಗ್ಯಾರಂಟಿ ಎಂದು ಆಕ್ರೋಶ ಹೊರಹಾಕಿದ್ದಾರೆ.  ಇಷ್ಟಾದರೂ ಆ ಟ್ರಾನ್ಸ್ ಮಹಿಳೆಯ ಉದ್ಧಟತನ ಕಡಿಮೆಯಾಗಿಲ್ಲ. ನಿನ್ನ ಕಾಲು ಮುರಿದು ಹಾಕುತ್ತೇನೆ ಎಂದು ಯುವತಿಗೆ ಬೆದರಿಕೆ ಹಾಕಿದ್ದಾಳೆ.

ನೆಟ್ಟಿಗರ ಆಕ್ರೋಶ

ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗ ತೊಡಗಿದ ನಂತರ ಮಂಗಳಮುಖಿಯರ ಸಮುದಾಯವನ್ನು ತರಾಟೆಗೆ ತೆಗೆದುಕೊಂಡ ನಟ್ಟಿಗರು ಇದು ಆಶೀರ್ವಾದವೋ ಅಥವಾ ಸುಲಿಗೆಯೋ? ಎಂದು ಒಬ್ಬರು ಕೇಳಿದರೆ, ಇದು ಕೇವಲ ಹಣ ಕೇಳುವ ಕ್ರಮವಲ್ಲ, ಇದು ನೇರವಾದ ಸುಲಿಗೆ ಮತ್ತು ಕಿರುಕುಳ ಎಂದು ಇನ್ನೊಬ್ಬರು ಕಮೆಂಟ್​ ಹಾಕಿದ್ದಾರೆ.
ಮತ್ತೊಬ್ಬ ಬಳಕೆದಾರರು ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ, ನಾವು ವಿದ್ಯಾರ್ಥಿಗಳೇ ಆಗಿರಲಿ ಅಥವಾ ಬಡವರೇ ಇರಲಿ, ಇವರಿಗೆ ಹಣ ಕೊಡದಿದ್ದರೆ ಕೆಟ್ಟದಾಗಿ ಬೈಯುತ್ತಾರೆ ಅಥವಾ ಶಪಿಸುತ್ತಾರೆ, ಇದು ನಿಲ್ಲಬೇಕು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಕಾನೂನು ಎಲ್ಲರಿಗೂ ಒಂದೇ, ಸಾರ್ವಜನಿಕ ಸ್ಥಳದಲ್ಲಿ ಇಂತಹ ಅಸಹ್ಯಕರ ವರ್ತನೆ ತೋರುವವರನ್ನು ಕೂಡಲೇ ಜೈಲಿಗೆ ಹಾಕಬೇಕು ಎಂಬ ಆಗ್ರಹ ಕೇಳಿಬಂದಿದೆ.
ಶಾಪದ ಹೆಸರಲ್ಲಿ ಬೆದರಿಕೆ ಎಷ್ಟು ಸರಿ? ಭಾರತೀಯ ಸಂಸ್ಕೃತಿಯಲ್ಲಿ ಟ್ರಾನ್ಸ್‌ಜೆಂಡರ್‌ಗಳಿಗೆ ಗೌರವವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವರು 'ಶಾಪ' ಕೊಡುವ ಹೆಸರಲ್ಲಿ ಸಾರ್ವಜನಿಕರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿರುವುದು ಆತಂಕಕಾರಿ ವಿಷಯ. ಮೆಟ್ರೋ ನಿಲ್ದಾಣದಂತಹ ಸುರಕ್ಷಿತ ಸ್ಥಳಗಳಲ್ಲೂ ಇಂತಹ ಘಟನೆ ನಡೆದರೆ ಸಾಮಾನ್ಯ ಜನರ ಪಾಡೇನು ಎಂಬ ಪ್ರಶ್ನೆ ಈಗ ಎಲ್ಲಡೆ ಕೇಳಿ ಬರುತ್ತಿದೆ.
ಸದ್ಯಕ್ಕೆ ಈ ಘಟನೆ ಎಲ್ಲಿ ನಡೆದಿದೆ ಎಂಬುದು ಇನ್ನೂ ದೃಢಪಟ್ಟಿಲ್ಲವಾದರೂ ಅಧಿಕಾರಿಗಳು ಇಂತಹ ವರ್ತನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಇವರನ್ನು ಲೈಂಗಿಕ ಅಲ್ಪಸಂಖ್ಯಾತರೆಂದು ಪ್ರತಿಸಲವೂ ಇವರಿಗೆ ಎಚ್ಚರಿಕೆ ನೀಡಿ ಬಿಡುವ ಬದಲು ಸರಿಯಾದ ಶಿಕ್ಷೆಯಾಗಬೇಕು ಎನ್ನುವುದು ಪ್ರತಿಯೊಬ್ಬರ ಆಶಯವಾಗಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net