ಕ್ಲಾಸ್​ರೂಮ್​ ಒಳಗೆ ವಿದ್ಯಾರ್ಥಿನಿಗೆ ಗುಂಡಿಟ್ಟು ತಾನೂ ಸಾವಿಗೆ ಶರಣಾದ ಸಹಪಾಠಿ! ಲಾ ಕಾಲೇಜಿನಲ್ಲೇ ದುರ್ಘಟನೆ! Student

ಕ್ಲಾಸ್​ರೂಮ್​ ಒಳಗೆ ವಿದ್ಯಾರ್ಥಿನಿಗೆ ಗುಂಡಿಟ್ಟು ತಾನೂ ಸಾವಿಗೆ ಶರಣಾದ ಸಹಪಾಠಿ!
ಕ್ಲಾಸ್​ರೂಮ್​ ಒಳಗೆ ವಿದ್ಯಾರ್ಥಿನಿಗೆ ಗುಂಡಿಟ್ಟು ತಾನೂ ಸಾವಿಗೆ ಶರಣಾದ ಸಹಪಾಠಿ!
Published on

ಪ್ರಮುಖ ಮುಖ್ಯಾಂಶಗಳು

  • ಯುವಕನೊಬ್ಬ ವಿದ್ಯಾರ್ಥಿನಿಯೊಬ್ಬಳಿಗೆ ಗುಂಡು ಹಾರಿಸಿ ಹತ್ಯೆಗೈದಿರುವ ಘಟನೆ ನಡೆದಿದೆ
  • ಪಂಜಾಬ್‌ನ ತರಣ್ ತರಣ್​ ಸಾಹೀಬ್​ ಜಿಲ್ಲೆಯ ಉಸ್ಮಾ ಗ್ರಾಮದಲ್ಲಿ ನಡೆದಿದೆ
  • ವಿದ್ಯಾರ್ಥಿನಿಗೆ ಗುಂಡಿಟ್ಟು ಕೊಂದ ಬೆನ್ನಲ್ಲೇ ಯುವಕನು ಕೂಡ ಗುಂಡಿಟ್ಟುಕೊಂಡು ಸಾವಿಗೆ ಶರಣಾಗಿದ್ದಾನೆ
ಚಂಡೀಗಢ: ಯುವಕನೊಬ್ಬ ವಿದ್ಯಾರ್ಥಿನಿಯೊಬ್ಬಳಿಗೆ ( Student ) ಗುಂಡು ಹಾರಿಸಿ ಹತ್ಯೆಗೈದಿರುವ ಆಘಾತಕಾರಿ ಘಟನೆ ಪಂಜಾಬ್‌ನ ತರಣ್ ತರಣ್​ ಸಾಹೀಬ್​ ಜಿಲ್ಲೆಯ ಉಸ್ಮಾ ಗ್ರಾಮದಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿನಿಯನ್ನು ನೌಶೇರಾ ಪನುವಾ ಗ್ರಾಮದ ಸಂದೀಪ್ ಕೌರ್ ಎಂದು ಗುರುತಿಸಲಾಗಿದೆ. ಕೌರ್​ಗೆ ಗುಂಡಿಟ್ಟು ಕೊಂದ ಬೆನ್ನಲ್ಲೇ ಮಾಲಿಯಾ ಗ್ರಾಮದ ಯುವಕ ಪ್ರಿನ್ಸ್ ರಾಜ್ ಸಿಂಗ್ ಕೂಡ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾನೆ. ಇಬ್ಬರು ಪ್ರಥಮ ವರ್ಷದ ಕಾನೂನು ವಿದ್ಯಾರ್ಥಿಗಳಾಗಿದ್ದರು.
ಇಂದು (ಫೆ.09) ಬೆಳಗ್ಗೆ ತರಗತಿ ಆರಂಭವಾಗುವ ಮೊದಲು ಆರೋಪಿ ರಾಜ್​ ಸಿಂಗ್​ ಕ್ಲಾಸ್​ರೂಮ್​ಗೆ ಬಂದು, ತನ್ನ ಬ್ಯಾಗ್‌ನಿಂದ ಪಿಸ್ತೂಲ್ ತೆಗೆದು ಸಂದೀಪ್ ಕೌರ್‌ ತಲೆಗೆ ಗುರಿಯಿಟ್ಟು ಗುಂಡಿಟ್ಟಿದ್ದಾನೆ. ಇದರಿಂದ ಕೌರ್​ ಸ್ಥಳದಲ್ಲೇ ಮೃತಪಟ್ಟಳು. ಇದಾದ ಬಳಿಕ ರಾಜಾ ಸಿಂಗ್​, ತಾನೂ ಗುಂಡಿಟ್ಟುಕೊಂಡು ಸಾವಿಗೆ ಶರಣಾಗಿದ್ದಾನೆ. ಇಡೀ ಘಟನೆ ಕ್ಲಾಸ್‌ರೂಮ್‌ನ CCTV ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕಾರಣ ಏನು?

ಈ ಘಟನೆಗೆ ಕಾರಣ ಏನು ಅನ್ನೋದು ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಕೆಲವು ವರದಿಗಳ ಪ್ರಕಾರ, ರಾಜಾ ಸಿಂಗ್​ನದ್ದು​ ಒನ್​ ಸೈಡ್​ ಲವ್ ಆಗಿತ್ತು ಎನ್ನಲಾಗಿದೆ. ಆತ ಸಂದೀಪ್​ಗೆ ಹಿಂಸೆ ನೀಡುತ್ತಿದ್ದ ಎಂಬ ಆರೋಪಗಳಿವೆ. ಆತ ಬಹು ದಿನಗಳಿಂದ ಸಂದೀಪ್​ಗೆ ತೊಂದರೆ ಕೊಡುತ್ತಿದ್ದ. ಈ ಬಗ್ಗೆ ಕಾಲೇಜು ಅಧಿಕಾರಿಗಳಿ ದೂರು ನೀಡಿದರೂ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಸಂತ್ರಸ್ತೆಯ ಕುಟುಂಬಸ್ಥರು ಸಹ ಆರೋಪ ಮಾಡಿದ್ದಾರೆ.
ಈ ಘಟನೆಯ ಸುದ್ದಿ ಕ್ಯಾಂಪಸ್‌ನಲ್ಲಿ ಹರಡಿದ ಕೂಡಲೇ, ಮಾಹಿತಿ ತಿಳಿದು ಕಾಲೇಜು ಆಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿತು. ಪೊಲೀಸ್ ತಂಡಗಳು ಸ್ಥಳಕ್ಕೆ ಆಗಮಿಸಿ, ಶವಗಳನ್ನು ಹೊರತೆಗೆದು ಮರಣೋತ್ತರ ವರದಿಗಾಗಿ ಆಸ್ಪತ್ರಗೆ ರವಾನಿಸಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿರುವುದಾಗಿ ತರಣ್ ತರಣ್ ಸಾಹೀಬ್​ ಎಸ್‌ಎಸ್‌ಪಿ ಸುರೇಂದ್ರ ಲಂಬಾ ತಿಳಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net