ತಂತ್ರಜ್ಞಾನದ ಬಳಕೆಯಿಂದ ಸಾಂಪ್ರದಾಯಿಕ ವೈದ್ಯಶಾಸ್ತ್ರಕ್ಕೆ ಬಲ: ಪ್ರಧಾನಿ ಮೋದಿ | Narendra Modi

Narendra Modi |  ಪ್ರಧಾನಿ ನರೇಂದ್ರ ಮೋದಿ
Narendra Modi | ಪ್ರಧಾನಿ ನರೇಂದ್ರ ಮೋದಿ
Published on
Narendra Modi: ಸಾಂಪ್ರದಾಯಿಕ ವೈದ್ಯಶಾಸ್ತ್ರವು ತನಗೆ ತಕ್ಕದಾದ ಸ್ಥಾನ ಪಡೆದುಕೊಂಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ ಮತ್ತು ಅದರ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲು ವಿಜ್ಞಾನದ ಮೂಲಕ ವಿಶ್ವಾಸ ಗಳಿಸಬೇಕು ಎಂದು ಪ್ರತಿಪಾದಿಸಿದ್ದಾರೆ.
ಸಾಂಪ್ರದಾಯಿಕ ಔಷಧದ ಕುರಿತಾದ WHO ಜಾಗತಿಕ ಶೃಂಗಸಭೆ ಉದ್ದೇಶಿಸಿ ಮಾತನಾಡಿದ ಮೋದಿ, ಸಂಶೋಧನೆ, ಡಿಜಿಟಲ್ ತಂತ್ರಜ್ಞಾನಗಳ ಬಳಕೆ ಮತ್ತು ವಿಶ್ವಾಸಾರ್ಹ ನಿಯಂತ್ರಕ ಚೌಕಟ್ಟನ್ನು ಅಭಿವೃದ್ಧಿಪಡಿಸುವುದು ಸಾಂಪ್ರದಾಯಿಕ ಔಷಧವನ್ನು ಮತ್ತಷ್ಟು ಬಲಪಡಿಸುತ್ತದೆ ಎಂದು ಹೇಳಿದರು.
ಹಿಂದಿನ ಕಾಲದಲ್ಲಿ ಸಾಂಪ್ರದಾಯಿಕ ಔಷಧವು ಕೇವಲ ಆರೋಗ್ಯ ಅಥವಾ ಜೀವನಶೈಲಿಗೆ ಸೀಮಿತವಾಗಿದೆ ಎಂಬ ಗ್ರಹಿಕೆ ಇತ್ತು, ಆದರೆ ಈ ಗ್ರಹಿಕೆ ವೇಗವಾಗಿ ಬದಲಾಗುತ್ತಿದೆ. ನಿರ್ಣಾಯಕ ಸಂದರ್ಭಗಳಲ್ಲಿಯೂ ಸಾಂಪ್ರದಾಯಿಕ ಔಷಧವು ಪರಿಣಾಮಕಾರಿ ಪಾತ್ರವನ್ನು ವಹಿಸುತ್ತದೆ ಮತ್ತು ಭಾರತವು ಈ ದೃಷ್ಟಿಕೋನದೊಂದಿಗೆ ಮುಂದುವರಿಯುತ್ತಿದೆ ಎಂದರು.
ಶತಮಾನಗಳಿಂದ ಅಶ್ವಗಂಧವನ್ನು ಭಾರತದ ಸಾಂಪ್ರದಾಯಿಕ ವೈದ್ಯಕೀಯ ವ್ಯವಸ್ಥೆಗಳಲ್ಲಿ ಬಳಸಲಾಗುತ್ತಿದೆ, ಕೋವಿಡ್​ ಸಮಯದಲ್ಲಿ ಅದರ ಜಾಗತಿಕ ಬೇಡಿಕೆ ತೀವ್ರವಾಗಿ ಏರಿದೆ. ದೇಶವು ತನ್ನ ಸಂಶೋಧನೆ ಮತ್ತು ಪುರಾವೆ ಆಧಾರಿತ ಮೌಲ್ಯೀಕರಣದ ಮೂಲಕ ಅಶ್ವಗಂಧವನ್ನು ವಿಶ್ವಾಸಾರ್ಹ ರೀತಿಯಲ್ಲಿ ಮುನ್ನಡೆಸುತ್ತಿದೆ, ಅಂತರರಾಷ್ಟ್ರೀಯ ತಜ್ಞರು ಅದರ ಸುರಕ್ಷತೆ, ಗುಣಮಟ್ಟ ಮತ್ತು ಬಳಕೆಯ ಬಗ್ಗೆ ಆಳವಾಗಿ ಚರ್ಚಿಸಿದ್ದಾರೆ ಎಂದು ಹೇಳಿದರು.
ಇಂತಹ ಕಾಲ ಪರೀಕ್ಷಿತ ಗಿಡಮೂಲಿಕೆಗಳನ್ನು ಜಾಗತಿಕ ಸಾರ್ವಜನಿಕ ಆರೋಗ್ಯದ ಭಾಗವಾಗಿಸಲು ಭಾರತ ಸಂಪೂರ್ಣವಾಗಿ ಬದ್ಧವಾಗಿದ್ದು, ಸಾಂಪ್ರದಾಯಿಕ ಔಷಧದ ಸ್ವೀಕಾರಾರ್ಹತೆಯನ್ನು ವಿಸ್ತರಿಸುವ ಜವಾಬ್ದಾರಿ ಎಲ್ಲಾ ದೇಶಗಳ ಹಂಚಿಕೆಯ ಕರ್ತವ್ಯವಾಗಿದೆ. ಈ ಶೃಂಗಸಭೆಯ ಕಳೆದ ಮೂರು ದಿನಗಳಲ್ಲಿ ಕಂಡುಬಂದ ಭಾಗವಹಿಸುವಿಕೆ, ಸಂವಾದ ಮತ್ತು ಬದ್ಧತೆಯು, ಈ ದಿಕ್ಕಿನಲ್ಲಿ ಜಗತ್ತು ಒಟ್ಟಾಗಿ ಮುಂದುವರಿಯಲು ಸಿದ್ಧವಾಗಿದೆ ಎಂಬ ನಂಬಿಕೆಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಪ್ರಧಾನಿ ಹೇಳಿದರು.
ಪ್ರತಿಯೊಬ್ಬರೂ ಸಾಂಪ್ರದಾಯಿಕ ಔಷಧವನ್ನು ನಂಬಿಕೆ, ಗೌರವ ಮತ್ತು ಜವಾಬ್ದಾರಿಯೊಂದಿಗೆ ಮುನ್ನಡೆಸಲು ಸಂಕಲ್ಪ ಮಾಡಬೇಕು ಎಂದಿರುವ ಪ್ರಧಾನಿ ಮೋದಿ, ಮೈ ಆಯುಷ್ ಇಂಟಿಗ್ರೇಟೆಡ್ ಸರ್ವೀಸಸ್ ಪೋರ್ಟಲ್ (MAISP) ಸೇರಿದಂತೆ ಹಲವಾರು ಆಯುಷ್ ಉಪಕ್ರಮಗಳಿಗೆ ಚಾಲನೆ ನೀಡಿದರು. ಆಯುಷ್ ಉತ್ಪನ್ನಗಳು ಮತ್ತು ಸೇವೆಗಳ ಗುಣಮಟ್ಟಕ್ಕೆ ಜಾಗತಿಕ ಮಾನದಂಡವಾಗಿ ಕಲ್ಪಿಸಲಾಗಿರುವ ಆಯುಷ್ ಮಾರ್ಕ್ ಅನ್ನು ಸಹ ಅನಾವರಣಗೊಳಿಸಿದರು(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net