Garba At Landslide: ಪ್ರಕೃತಿ ವಿಕೋಪಗಳು ಮತ್ತು ದುರಂತಗಳು ಸಂಭವಿಸಿದಾಗ ಮಾನವೀಯತೆ, ಮರುಕ ಮತ್ತು ಜಾಗರೂಕತೆ ವಹಿಸುವುದು ಸಾಮಾನ್ಯ ನಿಯಮ. ಆದರೆ, ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಪಡೆಯುವ ಹಪಾಹಪಿತನದಿಂದಾಗಿ ಜನರು ಕನಿಷ್ಠ ಸೌಜನ್ಯವನ್ನೂ ಮರೆಯುತ್ತಿದ್ದಾರೆ. ಇದಕ್ಕೆ ಮತ್ತೊಂದು ಕನ್ನಡಿ ಹಿಡಿಯುವಂತಹ ಘಟನೆಯೊಂದು ಇತ್ತೀಚೆಗೆ ನಡೆದಿದ್ದು, ಭೂಕುಸಿತದಿಂದ ತತ್ತರಿಸಿರುವ ಪ್ರದೇಶದ ಬಳಿ ಪ್ರವಾಸಿಗರ ಗುಂಪೊಂದು 'ಗರ್ಬಾ' ನೃತ್ಯ ಮಾಡುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ತೀವ್ರ ಆಕ್ರೋಶಕ್ಕೆ ಈಡಾಗಿದೆ.