ಸುದ್ದಿ ಸಂಸ್ಥೆಯೊಂದಿದೆ ಮಾತನಾಡಿದ ಸಿಎಂ, ತಿರುಪತಿ ಲಾಡು ವಿವಾದ ಒಂದು ಉದ್ದೇಶಪೂರ್ವಕ ಪಿತೂರಿಯಾಗಿದ್ದು, ಈ ಆರೋಪಕ್ಕೆ ಹಿಂದಿನ ಜಗನ್ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಸರ್ಕಾರವೇ ಕಾರಣವೆಂದು ಅವರು ಹೇಳಿದ್ದಾರೆ. ತಿಳಿಯದೆ ತಪ್ಪು ಮಾಡಿದರೆ ಅದನ್ನು ಕ್ಷಮಿಸಬಹುದು, ಆದರೆ ಇದೊಂದು ವ್ಯವಸ್ಥಿತ ಪಿತೂರಿಯಾಗಿದ್ದು, ಉದ್ದೇಶಪೂರ್ವಕವಾಗಿ ಮಾಡಿದ ಅಪರಾಧವಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.