ಹೊಸ ನಿಯಮದ ಪ್ರಕಾರ, ರೈಲು ಟಿಕೆಟ್ ಬುಕಿಂಗ್ ಆರಂಭವಾಗುವ ಮೊದಲ ದಿನದಂದು ಬೆಳಿಗ್ಗೆ 8:00 ರಿಂದ ಮಧ್ಯಾಹ್ನ 12:00 ಗಂಟೆಯವರೆಗೆ ಕೇವಲ ಆಧಾರ್ ದೃಢೀಕರಿಸಲ್ಪಟ್ಟ (Aadhaar Authenticated) ಬಳಕೆದಾರರು ಮಾತ್ರ ಆನ್‌ಲೈನ್ ಟಿಕೆಟ್ ಬುಕ್ ಮಾಡಲು ಅವಕಾಶವಿರುತ್ತದೆ. ಆಧಾರ್ ಲಿಂಕ್ ಮಾಡದ ಸಾಮಾನ್ಯ ಬಳಕೆದಾರರು ಮಧ್ಯಾಹ್ನ 12:00 ಗಂಟೆಯ ನಂತರವಷ್ಟೇ ಟಿಕೆಟ್ ಬುಕ್ ಮಾಡಲು ಸಾಧ್ಯವಾಗುತ್ತದೆ.