ಇಂದು ಕೇರಳದ ಹೊಸ ಸಿಎಂ ಆಯ್ಕೆಯ ಕ್ಲೈಮ್ಯಾಕ್ಸ್? ಮಧ್ಯಾಹ್ನ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಘೋಷಣೆ ಸಾಧ್ಯತೆ | Kerala
ವಿಡಿ ಸತೀಶನ್, ರಮೇಶ್ ಚೆನ್ನಿತಲ್ ಹಾಗೂ ಕೆ.ಸಿ.ವೇಣುಗೋಪಾಲ್
Published on:
Copied
Follow Us
ನವದೆಹಲಿ: ಕೇರಳದ(Kerala) ಮುಂದಿನ ಮುಖ್ಯಮಂತ್ರಿ ಆಯ್ಕೆಯ ಪ್ರಕ್ರಿಯೆಯು ಅಂತಿಮ ಹಂತಕ್ಕೆ ತಲುಪಿದ್ದೂ, ಇಂದು(ಮೇ 14) ಮಧ್ಯಾಹ್ನ ನಡೆಯುವ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಅಧಿಕೃತವಾಗಿ ಘೋಷಣೆಯಾಗಲಿದೆ ಎಂದು ವರದಿಯಾಗಿದೆ.
ಬುಧವಾರ ಮಧ್ಯಾಹ್ನ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ನಡುವೆ ನಡೆದ ಸುಮಾರು ಅರ್ಧಗಂಟೆಯ ಚರ್ಚೆಯಲ್ಲಿ ಯಾವುದೇ ಅಂತಿಮ ತೀರ್ಮಾನಕ್ಕೆ ಬಾರದೆ ಅಂತ್ಯಗೊಂಡಿದೆ ಎಂದು ಮೂಲಗಳು ತಿಳಿಸಿವೆ.
ಕೇರಳದ ವಿವಿಧ ಬಣಗಳ ನಡುವೆ ಒಮ್ಮತ ಮೂಡಿಸಲು ಹೈಕಮಾಂಡ್ ಹರಸಾಹಸ ಪಡುತ್ತಿದೆ. ಎ.ಕೆ. ಆಂಟನಿ ಅವರಂತಹ ಹಿರಿಯ ನಾಯಕರ ಸಲಹೆಯನ್ನು ಅಂತಿಮ ಹಂತದಲ್ಲಿ ಪಡೆಯಲು ನಿರ್ಧರಿಸಿರುವುದು ವಿಳಂಬಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ಸಿಎಂ ಪಟ್ಟಕ್ಕೆ ಸತೀಶನ್, ಚೆನ್ನಿತ್ತಲ, ಕೆಸಿವಿ ಪಟ್ಟು
ಕೇರಳ ಸಿಎಂ ರೇಸ್ನಲ್ಲಿ ಮೂವರು ಪ್ರಬಲ ನಾಯಕರ ನಡುವೆ ಭಾರಿ ಪೈಪೋಟಿ ನಡೆದಿದೆ. ಕಾಂಗ್ರೆಸ್ ಹೈಕಮಾಂಡ್ನ ಆಪ್ತರಾಗಿರುವ ಕೆ.ಸಿ.ವೇಣುಗೋಪಾಲ್, ಕೇರಳ ವಿಧಾನಸಭೆಯ ವಿಪಕ್ಷರಾಗಿದ್ದ ವಿ.ಡಿ.ಸತೀಶ್ ಹಾಗೂ ಹಿರಿಯ ನಾಯಕ ರಮೇಶ್ ಚೆನ್ನಿತಲ್ ನಡುವೆ ಹಗ್ಗಜಗ್ಗಾಟ ನಡೆದಿದೆ.
ಕಾಂಗ್ರೆಸ್ನ ಯುವಘಟಕ ಮತ್ತು ಕೊಡಿಕುನ್ನಿಲ್ ಸುರೇಶ್ ಅವರಂತಹ ನಾಯಕರ ಒಲವು ವಿ.ಡಿ. ಸತೀಶನ್ ಪರವಿದ್ರೆ, ಪಕ್ಷದ ಹಳೆಯ ಪಡೆಯ ಬೆಂಬಲ ರಮೇಶ್ ಚೆನ್ನಿತ್ತಲ ಪರವಾಗಿದೆ. ಹಾಗೆಯೇ ವೇಣುಗೋಪಾಲ್ ಅವರಿಗೆ ಹೈಕಮಾಂಡ್ ಆಶೀರ್ವಾದದ ಮೇಲೆ ಸಿಎಂ ಆಗುವ ಸಾಧ್ಯತೆಯಿದೆ (ಏಜೆನ್ಸೀಸ್).