ರಾಜಕೀಯ ಏನೆಂದು ತಿಳಿಯಲು ಮೊದಲು ತ್ರಿಷಾ ಮನೆಯಿಂದ ಹೊರಬನ್ನಿ! ತಳಪತಿಗೆ ಬಿಜೆಪಿ ನಾಯಕನ ವಿವಾದಾತ್ಮಕ ಸವಾಲ್​ | Trisha Krishnan

ತಮಿಳುನಾಡು ಬಿಜೆಪಿ ಮುಖ್ಯಸ್ಥ ನೈನಾರ್ ನಾಗೇಂದ್ರನ್, ನಟಿ ತ್ರಿಷಾ ಕೃಷ್ಣನ್​, ತಳಪತಿ ವಿಜಯ್​
ತಮಿಳುನಾಡು ಬಿಜೆಪಿ ಮುಖ್ಯಸ್ಥ ನೈನಾರ್ ನಾಗೇಂದ್ರನ್, ನಟಿ ತ್ರಿಷಾ ಕೃಷ್ಣನ್​, ತಳಪತಿ ವಿಜಯ್​
Published on

ಪ್ರಮುಖ ಮುಖ್ಯಾಂಶಗಳು

  • ರಾಜಕಾರಣದಲ್ಲಿ ತಳಪತಿ ವಿಜಯ್​ ಅನಾನುಭವಿ
  • ರಾಜಕೀಯದ ಅನುಭವ ಪಡೆಯಲು ವಿಜಯ್​ ಮೊದಲು ನಟಿ ತ್ರಿಷಾ ಮನೆಯಿಂದ ಹೊರಬರಬೇಕು
  • ಬಿಜೆಪಿ ಮಹಿಳೆಯರನ್ನು ಅಗೌರವಿಸಿದೆ: ಡಿಎಂಕೆ
ತಮಿಳುನಾಡು: ರಾಜಕಾರಣದಲ್ಲಿ ತಳಪತಿ ವಿಜಯ್​ ಅನಾನುಭವಿಯಾಗಿದ್ದು, ರಾಜಕೀಯದ ಅನುಭವ ಪಡೆಯಲು, ವಿಜಯ್​ ಮೊದಲು ನಟಿ ತ್ರಿಷಾ (Trisha Krishnan) ಮನೆಯಿಂದ ಹೊರಬರಬೇಕೆಂದು ತಮಿಳುನಾಡು ಬಿಜೆಪಿ ಮುಖ್ಯಸ್ಥ ನೈನಾರ್ ನಾಗೇಂದ್ರನ್ ಹೇಳಿದ್ದಾರೆ.
ನೈನಾರ್ ನಾಗೇಂದ್ರನ್ ನೀಡಿರುವ ಈ ಹೇಳಿಕೆ ಈದೀಗ ತಮಿಳುನಾಡು ರಾಜಕೀಯದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದ್ದು, ಹಲವಾರು ರಾಜಕೀಯ ನಾಯಕರು ಈ ಹೇಳಿಕೆ ನಾಗೇಂದ್ರನ್ ಅವರ ಸಂಕುಚಿತ ಮನಸ್ಥಿತಿಯನ್ನು ತೋರಿಸುತ್ತದೆ ಎಂದಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವಾದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಡಿಎಂಕೆಯ ಏಕೈಕ ಪ್ರತಿಸ್ಪರ್ಧಿಯಾಗಲಿದೆ ಎಂಬ ವಿಜಯ್ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ನೈನಾರ್ ನಾಗೇಂದ್ರನ್, ವಿಜಯ್​ ಒಬ್ಬ ಅನಾನುಭವಿ ನಾಯಕ ಎಂದು ಕರೆದು, ಮನೆಯ ಮೇಲ್ಛಾವಣಿಯನ್ನು ಹತ್ತಲು ಸಾಧ್ಯವಾಗದ ವ್ಯಕ್ತಿ ಸ್ವರ್ಗವನ್ನು ಏರುವ ಕನಸು ಕಾಣುತ್ತಿದ್ದಾನೆ ಎಂದು ಹೇಳಿದರು.
ವಿಜಯ್​ ಒಬ್ಬ ಉತ್ತಮ ನಟ ಎಂದರೆ ಒಪ್ಪಿಕೊಳ್ಳಬಹುದು ಆದರೆ ಅವನಿಗೆ ರಾಜಕೀಯ ಹೊಸದು, ಅವನಿಗೆ ರಾಜಕಾರಣದ ಯಾವುದೇ ಅನುಭವವಿಲ್ಲ, ರಾಜಕಾರಣ ಏನೆಂದು ತಿಳಿಯ ಬಯಸಿದರೆ ಮೊದಲು ಅವನ ಮತ್ತು ತ್ರಿಷಾಳ ಮನೆಯಿಂದ ಹೊರಬರಬೇಕೆಂದು ಹೇಳಿದರು. ನಂತರ, ಅವರ ಹೇಳಿಕೆಗಳನ್ನು ಪ್ರಶ್ನಿಸಿದಾಗ ನಾಗೇಂದ್ರನ್​, ನಾನು ಆ ಮಾತನ್ನು ಕೇವಲ ಒಂದು ಬಾರಿ ಮಾತ್ರ ಹೇಳಿದ್ದೇನೆ ಮತ್ತು ನಾನು ನನ್ನ ಮಾತಿಗೆ ಬದ್ಧನಿದ್ದೆನೆ ಎಂದು ಹೇಳಿದ್ದಾರೆ.

ಬಿಜೆಪಿ ಮಹಿಳೆಯರನ್ನು ಅಗೌರವಿಸಿದೆ: ಡಿಎಂಕೆ 

ನಾಗೇಂದ್ರನ್​ ಅವರ ಈ ಹೇಳಿಕೆಗಳು ತಮಿಳುನಾಡಿನಲ್ಲಿ ಭಾರಿ ಸಂಚಲನವನ್ನು ಸೃಷ್ಟಿಸಿದ್ದು, ಡಿಎಂಕೆ ನಾಯಕರು ಬಿಜೆಪಿಗೆ ಮಹಿಳೆಯರ ಕುರಿತು ಹೇಗೆ ಮಾತನಾಡಬೇಕು ಎನ್ನುವ ಕನಿಷ್ಟ ಸೌಜನ್ಯವಿಲ್ಲ ಎಂದು ಆರೋಪಿಸಿದ್ದಾರೆ.
ಅವರು ಮಹಿಳೆಯರಿಗೆ ಎಂದಿಗೂ ಗೌರವ ನೀಡದ ಮನು ಧರ್ಮವನ್ನು ಪಾಲಿಸುವ ಕಾರಣ, ಸ್ವಾಭಾವಿಕವಾಗಿ ನಾಗೇಂದ್ರನ್​ ಈ ರೀತಿ ಮಾತನಾಡಿದ್ದಾರೆ, ಇದೇ ಕಾರಣಕ್ಕೆ ತಮಿಳುನಾಡಿನ ಜನರು ಬಿಜೆಪಿಯನ್ನು ವಿರೋಧಿಸುತ್ತಾರೆ ಎಂದು ಡಿಎಂಕೆ ವಕ್ತಾರ ಟಿಕೆಎಸ್ ಎಳಂಗೋವನ್ ಹೇಳಿದ್ದಾರೆ.
ತಮಿಳುನಾಡು ಕಾಂಗ್ರೆಸ್ ಸಮಿತಿ ಮುಖ್ಯಸ್ಥ ಸೆಲ್ವಪೆರುಂಥಗೈ ಕೂಡ ಈ ಹೇಳಿಕೆಗಳನ್ನು ಖಂಡಿಸುತ್ತಾ, ತ್ರಿಷಾ ಅವರ ಹೆಸರನ್ನು ರಾಜಕೀಯದಲ್ಲಿ ಏಕೆ ಎಳೆದು ತರಲಾಗಿದೆ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಗೆ ಮಾಡಲು ಏನು ಕೆಲಸವಿಲ್ಲ ಎಂದು ಅನಿಸುತ್ತದೆ, ಅದಕ್ಕೆ ವೈಯಕ್ತಿಕ ಜೀವನದ ಬಗ್ಗೆ ರಾಜಕೀಯ ಮಾಡುತ್ತಿದ್ದಾರೆ, ಈ ರೀತಿಯ ಹೇಳಿಕೆಗಳು ರಾಷ್ಟ್ರೀಯ ಪಕ್ಷಕ್ಕೆ ಶೋಭೆಯಲ್ಲ ಎಂದು ಹೇಳಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net