ಮುಸ್ಲಿಂ ಪ್ರದೇಶದಲ್ಲಿ ಟಿಎಂಸಿ ಹಿನ್ನಡೆ ಅಸಾಧ್ಯ; ಇವಿಎಂ ಹ್ಯಾಕ್ ಆರೋಪ ಮಾಡಿದ ಟಿಎಂಸಿ ಅಭ್ಯರ್ಥಿ | TMC candidate

ಟಿಎಂಸಿ ಅಭ್ಯರ್ಥಿ ಮಧುಪರ್ಣ ಠಾಕೂರ್
ಟಿಎಂಸಿ ಅಭ್ಯರ್ಥಿ ಮಧುಪರ್ಣ ಠಾಕೂರ್
Published on
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಮತ ಎಣಿಕೆ ಮುಂದುವರೆದಿದ್ದು, ವಿಪಕ್ಷ ಬಿಜೆಪಿ ಭಾರಿ ಮುನ್ನಡೆ ಸಾಧಿಸಿದ್ದು, ಆಡಳಿತರೂಢ ಟಿಎಂಸಿ ಹಿನ್ನಡೆ ಅನುಭವಿಸಿದೆ. ಆದರೆ ಮುಸ್ಲಿಂ ಬಾಹುಳ್ಯ ಪ್ರದೇಶದಲ್ಲಿ ಟಿಎಂಸಿ ಹಿನ್ನಡೆಯಾಗಿದ್ದನ್ನು ಪ್ರಶ್ನಿಸಿರುವ ಟಿಎಂಸಿ ಅಭ್ಯರ್ಥಿಯೊಬ್ಬರು, ಇವಿಎಂ ಹ್ಯಾಕ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಭಾರಿ ಗೆಲುವಿನತ್ತ ದಾಪುಗಾಲಿಡುತ್ತಿದ್ದು, 198 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಆಡಳಿತರೂಢ ಟಿಎಂಸಿ 89 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್​ 4 ಸ್ಥಾನಗಲ್ಲಿ ಮುನ್ನಡೆಯಲ್ಲಿದೆ.
ಬಾಗ್ಡಾದ ಟಿಎಂಸಿ ಅಭ್ಯರ್ಥಿ ಮಧುಪರ್ಣ ಠಾಕೂರ್, ಇವಿಎಂ ಕುರಿತು ಪ್ರಶ್ನೆ ಎತ್ತಿದ್ದು, ಮುಸ್ಲಿಂ ಮತಗಟ್ಟೆಗಳಲ್ಲಿ ಟಿಎಂಸಿಗೆ ಹಿನ್ನಡೆಯಾಗಲು ಸಾಧ್ಯವಿಲ್ಲ. ಅಂತಹ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ ಅಂದ್ರೆ ಇವಿಎಂಗಳನ್ನು ಹ್ಯಾಕ್ ಮಾಡಲಾಗಿದೆ ಎಂದರ್ಥ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದ 293 ಸ್ಥಾನಗಳಲ್ಲಿ, ಶೇಕಡಾ 50 ಕ್ಕಿಂತ ಹೆಚ್ಚು ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ಸುಮಾರು 43 ಕ್ಷೇತ್ರಗಳಲ್ಲಿ ಭಾರಿ ಬದಲಾವಣೆ ಕಂಡು ಬಂದಿದೆ. ಟಿಎಂಸಿ ಮತ್ತು ಅದರ ಮಿತ್ರಪಕ್ಷಗಳು ಪ್ರಸ್ತುತ ಈ ಸ್ಥಾನಗಳಲ್ಲಿ 30 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿವೆ. ಹಿಂದಿನ ಸ್ಥಾನಗಳಿಗೆ ಹೋಲಿಸಿದರೆ ಸುಮಾರು 12 ಸ್ಥಾನಗಳು ಕಡಿಮೆಯಾಗಿದೆ. 2021ರ ಚುನಾವಣೆಯಲ್ಲಿ 44ರಲ್ಲಿ ಟಿಎಂಸಿ 43 ಸ್ಥಾನಗಳಲ್ಲಿ ಗೆದ್ದಿತ್ತು.

ಮತ ಕೇಂದ್ರ ಬಿಡದಂತೆ ಮಮತಾ ಬ್ಯಾನರ್ಜಿ ಮನವಿ

Xನಲ್ಲಿ ವಿಡಿಯೋ ಸಂದೇಶವೊಂದನ್ನು ಹಂಚಿಕೊಂಡಿರುವ ಸಿಎಂ ಮಮತಾ ಬ್ಯಾನರ್ಜಿ, ಚುನಾವಣಾ ಪ್ರಕ್ರಿಯೆಯ ಮೇಲೆ ಸಂಶಯ ವ್ಯಕ್ತಪಡಿಸಿದ್ದಾರೆ. ನಮ್ಮ ಅಭ್ಯರ್ಥಿಗಳು ಮತ್ತು ಏಜೆಂಟ್‌ಗಳು ಸ್ಟ್ರಾಂಗ್ ರೂಮ್ ಬಿಟ್ಟು ಬರಬಾರದು. ಬಿಜೆಪಿಯ ಮತಗಳನ್ನು ಮೊದಲು ಎಣಿಕೆ ಮಾಡಲಾಗುತ್ತಿದೆ ಎಂದು ನಾನು ಮೊದಲೇ ಹೇಳಿದ್ದೆ. ಇದು ವ್ಯವಸ್ಥಿತ ಪಿತೂರಿ ಎಂದು ಗುಡುಗಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net