ಪಶ್ಚಿಮ ಬಂಗಾಳದಲ್ಲಿನ ಟಿಎಂಸಿಯ ಮಹಾ ಜಂಗಲ್ ರಾಜ್ ಆಡಳಿತವನ್ನು ಬಿಜೆಪಿ ಕೊನೆಗೊಳಿಸಲಿದೆ ಎಂದಿರುವ ಪ್ರಧಾನಿ, ರಾಜ್ಯದಲ್ಲಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಓಲೈಕೆಯ ರಾಜಕೀಯ ಆಡಳಿತ ನಡೆಸುತ್ತಿದೆ, ಟಿಎಂಸಿ ಬಿಜೆಪಿಯನ್ನು ವಿರೋಧಿಸಬಹುದು ಆದರೆ ಬಿಹಾರ ಚುನಾವಣಾ ಫಲಿತಾಂಶಗಳು ರಾಜ್ಯದಲ್ಲಿ ಕೇಸರಿ ಪಕ್ಷಕ್ಕೆ ಬಾಗಿಲು ತೆರೆದಿವೆ ಎಂದು ಹೇಳಿದರು. ಬಿಹಾರವು ಜಂಗಲ್ ರಾಜ್ ಆಳ್ವಿಕೆಯನ್ನು ಒಂದೇ ಧ್ವನಿಯಲ್ಲಿ ತಿರಸ್ಕರಿಸಿದ್ದು,0 20 ವರ್ಷಗಳ ಬಳಿಕವೂ ಅಲ್ಲಿನ ಜನ ಬಿಜೆಪಿ ಎನ್ಡಿಎಗೆ ಮೊದಲಿಗಿಂತ ಹೆಚ್ಚಿನ ಸ್ಥಾನಗಳನ್ನು ನೀಡಿದ್ದಾರೆ. ಈಗ ನಾವು ಪಶ್ಚಿಮ ಬಂಗಾಳದಲ್ಲಿ ಮಹಾ ಜಂಗಲ್ ರಾಜ್ನ್ನು ತೊಡೆದುಹಾಕಬೇಕಿದೆ ಎಂದರು.