ಮಮತಾ ಬ್ಯಾನರ್ಜಿ ಬಣದ ನಾಯಕರು, ಅರೂಪ್ ಬಿಸ್ವಾಸ್ ಈಗ ಪಕ್ಷದ ಖಜಾಂಚಿ ಅಲ್ಲ ಎಂದು ಹೇಳಿದ್ದಾರೆ. ಜೂನ್ 5ರಂದು ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸುಭಾಶಿಶ್ ಚಕ್ರವರ್ತಿ ಅವರನ್ನು ಹೊಸ ಖಜಾಂಚಿಯಾಗಿ ನೇಮಕ ಮಾಡಲಾಗಿದೆ ಎಂದು ಟಿಎಂಸಿ ನಾಯಕ ಕುನಾಲ್ ಘೋಷ್ ತಿಳಿಸಿದ್ದಾರೆ. ಈ ಬೆಳವಣಿಗೆಯಿಂದ ಟಿಎಂಸಿಯ ಒಳಜಗಳ ಈಗ ಹಣಕಾಸಿನ ತನಿಖೆಯ ಹಂತಕ್ಕೆ ತಲುಪಿದ್ದು, ಮುಂದಿನ ದಿನಗಳಲ್ಲಿ ಪ್ರಕರಣ ಮತ್ತಷ್ಟು ರಾಜಕೀಯ ಮಹತ್ವ ಪಡೆಯುವ ಸಾಧ್ಯತೆ ಇದೆ,(ಏಜೆನ್ಸೀಸ್).