ಜನವರಿ 1 ರ ನಂತರದ ಏಳು ದಿನಗಳವರೆಗೆ, ಟಿಟಿಡಿ ಪ್ರತಿದಿನ 15,000 ವಿಶೇಷ ಪ್ರವೇಶ ದರ್ಶನ (300 ರೂ.) ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡುತ್ತದೆ. ಇದರ ಜೊತೆಗೆ 1,000 ಶ್ರೀವಾಣಿ ಟ್ರಸ್ಟ್ ಲಿಂಕ್ಡ್ ಬ್ರೇಕ್ ದರ್ಶನ ಟಿಕೆಟ್‌ಗಳನ್ನು ಸಹ ಬಿಡುಗಡೆ ಮಾಡಲಾಗುತ್ತದೆ. ವೈಯಕ್ತಿಕವಾಗಿ ಭೇಟಿ ನೀಡುವ ಪ್ರೋಟೋಕಾಲ್ ಗಣ್ಯರನ್ನು ಹೊರತುಪಡಿಸಿ, ಈ ದಿನಗಳಲ್ಲಿ ಎಲ್ಲಾ ಶಿಫಾರಸು ಆಧಾರಿತ ದರ್ಶನಗಳನ್ನು ರದ್ದುಗೊಳಿಸಲಾಗುತ್ತದೆ. ತಿರುಮಲ ಸ್ಥಳೀಯರಿಗೆ, ಜನವರಿ 6, 7 ಮತ್ತು 8 ರಂದು ಪ್ರತಿದಿನ 5,000 ಸರ್ವ ದರ್ಶನ ಟೋಕನ್‌ಗಳನ್ನು ಆನ್‌ಲೈನ್‌ನಲ್ಲಿ ನೀಡಲಾಗುತ್ತದೆ ಎಂದು ನಾಯ್ಡು ಹೇಳಿದರು, (ಏಜೆನ್ಸೀಸ್).