ತಿರುಪತಿ ಪೊಲೀಸರ ಮಾಹಿತಿ ಪ್ರಕಾರ, ವಿಶ್ವನಾಥ್ ಅತ್ಯಂತ ಚಾಣಾಕ್ಷನಾಗಿದ್ದ. ಈತ ಮೊದಲು ಒಂಟಿ ಮಹಿಳೆಯರಿರುವ ಮನೆಗಳನ್ನು ಗುರುತಿಸುತ್ತಿದ್ದ. ಬಳಿಕ ಯಾವುದಾದರೂ ನೆಪವೊಡ್ಡಿ ಅವರ ವಿಶ್ವಾಸ ಗಳಿಸಿ ಮನೆಗೆ ನುಗ್ಗುತ್ತಿದ್ದ. ಅವರ ನಂಬಿಕೆ ಗಳಿಸಿದ ನಂತರವೇ ತನ್ನ ಅಸಲಿ ರೂಪ ತೋರಿಸುತ್ತಿದ್ದ ಈತ, ಮಹಿಳೆಯರನ್ನು ಬರ್ಬರವಾಗಿ ಕೊಲೆ ಮಾಡಿ ಅವರು ಧರಿಸಿದ್ದ ಚಿನ್ನಾಭರಣಗಳೊಂದಿಗೆ ಪರಾರಿಯಾಗುತ್ತಿದ್ದ. ಈ ಕ್ರಿಮಿನಲ್ ಕೃತ್ಯಕ್ಕೆ ಈತ 'ಆಟೋ ರಿಕ್ಷಾ'ವನ್ನು ಬಳಸುತ್ತಿದ್ದ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.