ವಿಶ್ವಕಪ್ ಹೊತ್ತಲ್ಲೇ ತಿಲಕ್ ವರ್ಮಾಗೆ ಶಸ್ತ್ರಚಿಕಿತ್ಸೆ: 2026 ಟಿ20 ಕಣಕ್ಕಿಳಿಯುವ ಕನಸು ಭಗ್ನವಾಗುತ್ತಾ?..Tilak Varma

Image Credit: Tilak Varma /Social Media
Image Credit: Tilak Varma /Social Media
Published on
ನವದೆಹಲಿ: ( Tilak Varma )  ಭಾರತ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್ ಮತ್ತು ಏಷ್ಯಾ ಕಪ್ ಹೀರೋ ತಿಲಕ್ ವರ್ಮಾ ಅನಾರೋಗ್ಯದಿಂದ  ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಂಬರುವ ನ್ಯೂಜಿಲೆಂಡ್ ಸರಣಿ ಹಾಗೂ ಮುಂದಿನ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್ 2026 ಕ್ಕೆ ಅವರು ಲಭ್ಯವಿರುತ್ತಾರೆಯೇ ಎಂಬ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ.
ರಾಜಕೋಟ್‌ನಲ್ಲಿ ತಿಲಕ್ ವರ್ಮಾ ಅವರು ವಿಜಯ್ ಹಜಾರೆ ಟೂರ್ನಮೆಂಟ್‌ಗಾಗಿ ಹೈದರಾಬಾದ್ ತಂಡದ ಭಾಗವಾಗಿರುವ ರಾಜ್‌ಕೋಟ್‌ನಲ್ಲಿ ತೀವ್ರವಾದ ವೃಷಣ ನೋವು ಕಾಣಿಸಿಕೊಂಡಿದೆ. ಅವರನ್ನು ಗೋಕುಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಸ್ಕ್ಯಾನ್‌ನಲ್ಲಿ ವೃಷಣ ತಿರುಚುವಿಕೆ ( Testicular Torsion ) (ಹಠಾತ್, ತೀವ್ರವಾದ ನೋವು) ಇರುವುದು ಪತ್ತೆಯಾಗಿದ್ದು, ತಕ್ಷಣ ಶಸ್ತ್ರಚಿಕಿತ್ಸೆಗೆ ಒಳಪಡಿಸಲು ಸೂಚಿಸಲಾಗಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.  
ಕಳೆದ ವರ್ಷದಿಂದ ಟಿ20ಐಗಳಲ್ಲಿ ತಿಲಕ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್ ಫೈನಲ್‌ನಲ್ಲಿ ಅವರು ಗಳಿಸಿದ ಅಜೇಯ 69 ರನ್‌ಗಳು ಅವರನ್ನು ತಂಡದ ಪ್ರಮುಖ ಆಟಗಾರನನ್ನಾಗಿ ಮಾಡಿದೆ.ಜನವರಿ 21 ರಿಂದ ಆರಂಭವಾಗುವ ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಗೆ ತಿಲಕ್ ವರ್ಮಾ ಹೊರಗುಳಿಯುವ ಸಾಧ್ಯತೆಯಿದೆ.  ಅವರ ಅನುಪಸ್ಥಿತಿಯು ತಂಡದ ಸಮತೋಲನವನ್ನು ಕಸಿದುಕೊಳ್ಳುತ್ತದೆ ಎನ್ನುವ ಮಾತು ಕೇಳಿ ಬರುತ್ತಿದೆ. 
ಈ ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಳ್ಳಲು ಕನಿಷ್ಠ 3 ರಿಂದ 4 ವಾರಗಳು ಬೇಕಾಗುತ್ತದೆ. ಇದರಿಂದಾಗಿ ತಿಲಕ್ ವಿಶ್ವಕಪ್‌ನ ಆರಂಭಿಕ ಪಂದ್ಯಗಳಿಗೆ ಲಭ್ಯವಾಗುವುದು ಕಷ್ಟಕರವಾಗಿದೆ. ಫಿಟ್ನೆಸ್ ಸಾಧಿಸಿದರೂ, ಪಂದ್ಯ ಅಭ್ಯಾಸದ ಕೊರತೆಯು ಆಯ್ಕೆದಾರರಿಗೆ ಸವಾಲಾಗಿ ಪರಿಣಮಿಸುತ್ತದೆ.
ನ್ಯೂಜಿಲೆಂಡ್ ಸರಣಿಗೆ ತಿಲಕ್ ವರ್ಮಾ ಬದಲಿಗೆ ಯಾರು ಬರಲಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ. ಶ್ರೇಯಸ್ ಅಯ್ಯರ್ ಅಥವಾ ರಿಯಾನ್ ಪರಾಗ್ , ಶುಭ್ಮನ್ ಗಿಲ್ ಅವರ ಹೆಸರನ್ನು ಸಹ ಪರಿಗಣಿಸುವ ಸಾಧ್ಯತೆಯಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net