RCB Fan Sagar Goswami : ಇಂದು ಹೆಚ್ಚಿನ ಮಂದಿಗೆ ಗೊತ್ತಿರುವುದು ಎರಡೇ, ಒಂದು ಇನ್ಸ್ಟಾಗ್ರಾಂ ರೀಲ್ಸ್, ಮತ್ತೊಂದು ಯೂಟ್ಯೂಬ್ ಶಾರ್ಟ್ಸ್. ಆದರೆ, ಇವೆರೆಡು ಬರುವುದಕ್ಕೂ ಮುಂಚೆ ಅನೇಕ ಮಂದಿ ಡಬ್ಸ್ಮ್ಯಾಶ್ ಮೂಲಕ ಜನರನ್ನು ರಂಜಿಸುತ್ತಿದ್ದರು. ಆರಂಭದಲ್ಲಿ ಸಿನಿಮಾ ಡೈಲಾಗ್ಗಳಿಗೆ ಲಿಪ್ ಸಿಂಕ್ ಮಾಡಿ ವಿಡಿಯೋ ಮಾಡುತ್ತಿದ್ದರು. ಈ ಪ್ರಕ್ರಿಯೆ ಸ್ವಲ್ಪ ಕಷ್ಟವಾಗುತ್ತಿತ್ತು. ಆದರೆ, ಯಾವಾಗ ಟಿಕ್ಟಾಕ್ ಪರಿಚಯವಾಯಿತೋ ಆಗ ಎಲ್ಲವೂ ಸರಳವಾಯಿತು. ಒಂದೇ ಸೂರಿನಲ್ಲಿ ಎಲ್ಲವೂ ಲಭ್ಯವಾಯಿತು ಮತ್ತು ವಿಡಿಯೋ ಮಾಡುವುದು ತುಂಬಾ ಸರಳವಾಯಿತು. ಈ ಸಂದರ್ಭದಲ್ಲಿ ಅನೇಕ ಯುವ ಪ್ರತಿಭೆಗಳು ಬೆಳಕಿಗೆ ಬಂದವು. ಅವರಲ್ಲಿ ಸಾಗರ್ ಗೋಸ್ವಾಮಿ ಕೂಡ ಒಬ್ಬರು.