ನಾನ್​ ಬರ್ತಾ ಇದೀನಿ ಸೈಡಿಗ್​ ಸರ್ಕೊಳ್ಳಿ... ಗೋಡೆ ಮೇಲೆ ಹುಲಿ ಪ್ರತ್ಯಕ್ಷ, ಪ್ರವಾಸಿಗರು ತಬ್ಬಿಬ್ಬು! Tiger

ರಣಥಂಬೋರ್ ಕೋಟೆಯ ಪಾರ್ಕಿಂಗ್ ಪ್ರದೇಶಕ್ಕೆ ಹುಲಿ ಎಂಟ್ರಿ
ರಣಥಂಬೋರ್ ಕೋಟೆಯ ಪಾರ್ಕಿಂಗ್ ಪ್ರದೇಶಕ್ಕೆ ಹುಲಿ ಎಂಟ್ರಿ
Published on

ಪ್ರಮುಖ ಮುಖ್ಯಾಂಶಗಳು

  • ನೋಡಿದ ಕೂಡಲೇ ಎದೆಯಲ್ಲಿ ನಡುಕ ಹುಟ್ಟಿಸುವ ಜೀವಿಗಳಲ್ಲಿ ಹುಲಿ ಕೂಡ ಒಂದು
  • ತನ್ನ ಗಾಂಭೀರ್ಯತೆ, ದೈತ್ಯ ಆಕಾರ ಹಾಗೂ ತನ್ನ ಉಗ್ರ ರೂಪದಿಂದಾಗಿ ಎಂಥವರ ಮುಖದಲ್ಲೂ ವ್ಯಾಘ್ರ ಬೆವರಿಳಿಸಿಬಿಡುತ್ತದೆ
  • ಘರ್ಜಿಸಿದರೆ ಸಾಕು ಮೈಲಿ ದೂರದಲ್ಲಿದವರು ಕೂಡ ಯಾವುದಾದರೊಂದು ಮೂಲೆ ಸೇರಿಬಿಡುತ್ತಾರೆ
  • ರಣಥಂಬೋರ್ ಕೋಟೆಯ ಪಾರ್ಕಿಂಗ್ ಪ್ರದೇಶಕ್ಕೆ ಹುಲಿ ಮರಿಯೊಂದು ಎಂಟ್ರಿ ಕೊಟ್ಟಿತು
ಜೈಪುರ: ನೋಡಿದ ಕೂಡಲೇ ಎದೆಯಲ್ಲಿ ನಡುಕ ಹುಟ್ಟಿಸುವ ಜೀವಿಗಳಲ್ಲಿ ಹುಲಿ ( Tiger ) ಕೂಡ ಒಂದು. ತನ್ನ ಗಾಂಭೀರ್ಯತೆ, ದೈತ್ಯ ಆಕಾರ ಹಾಗೂ ತನ್ನ ಉಗ್ರ ರೂಪದಿಂದಾಗಿ ಎಂಥವರ ಮುಖದಲ್ಲೂ ವ್ಯಾಘ್ರ ಬೆವರಿಳಿಸಿಬಿಡುತ್ತದೆ. ಅದರಲ್ಲೂ, ಘರ್ಜಿಸಿದರೆ ಸಾಕು ಮೈಲಿ ದೂರದಲ್ಲಿದವರು ಕೂಡ ಯಾವುದಾದರೊಂದು ಮೂಲೆ ಸೇರಿಬಿಡುತ್ತಾರೆ. ಹೀಗಿರುವಾಗ ಹುಲಿಯೊಂದು ಜನನಿಬಿಡ ಪ್ರದೇಶದ ಗೋಡೆಯೊಂದರ ಮೇಲೆ ಪ್ರತ್ಯಕ್ಷವಾಗಿಬಿಟ್ಟರೆ ಆ ಪರಿಸ್ಥಿತಿ ಹೇಗಿರಬೇಡ ನೀವೇ ಯೋಚಿಸಿ. ಇಂಥದ್ದೊಂದು ಪ್ರಸಂಗ ರಾಜಸ್ಥಾನದ ರಣಥಂಭೋರ್​ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆದಿದೆ.
ರಣಥಂಭೋರ್​ನಲ್ಲಿ ಒಂದು ಸುಂದರವಾದ ಕೋಟೆ ಇದೆ. ನಿನ್ನೆ ಅಲ್ಲಿಗೆ ಬಂದ ಪ್ರವಾಸಿಗರ ಕಣ್ಣೆದುರೇ ಒಂದು ಪವಾಡ ಸಂಭವಿಸಿತು. ರಾಜಮನೆತನದವರು ವಾಸಿಸುವ ಐತಿಹಾಸಿಕ ರಣಥಂಬೋರ್ ಕೋಟೆಯ ಪಾರ್ಕಿಂಗ್ ಪ್ರದೇಶಕ್ಕೆ ಹುಲಿ ಮರಿಯೊಂದು ಎಂಟ್ರಿ ಕೊಟ್ಟಿತು. ಪಾರ್ಕಿಂಗ್​ ಬಳಿ ಇರುವ ಗೋಡೆಯ ಮೇಲೆ ರಾಜ ಗಾಂಭೀರ್ಯದಿಂದ ಹೆಜ್ಜೆ ಹಾಕಿತು.
ಈ ಮುದ್ದಾದ ವ್ಯಾಘ್ರ, ರಣಥಂಬೋರ್ ಕಾಡಿನ ಪ್ರಸಿದ್ಧ ಹೆಣ್ಣು ಹುಲಿ 'ರಿಧಿ'ಯ ಮರಿ. ಅಮ್ಮ ಇಲ್ಲದ ಸಮಯವನ್ನು ನೋಡಿ, ಈ ಪುಟ್ಟ ಮಗು ವಾಕ್​ ಮಾಡಲು ಬಂದಿತ್ತು. ಮೃದುವಾದ ಪಾದಗಳೊಂದಿಗೆ, ಪಟ್ಟೆ ಶರ್ಟ್ ಧರಿಸಿ, ಬೆಕ್ಕಿನಂತೆ ನಿಧಾನವಾಗಿ ಕೋಟೆಯ ಪಾರ್ಕಿಂಗ್ ಸ್ಥಳಕ್ಕೆ ಹೆಜ್ಜೆ ಹಾಕಿತು. ನನ್ನ ಸುತ್ತಮುತ್ತ ಯಾರಿದ್ದರೇನು ನನಗೆ ನಾನೇ ಸಾಟಿ ಎನ್ನುವಂತೆ ಗೋಡೆಯ ಮೇಲೆ ಹುಲಿರಾಯ ಹೆಜ್ಜೆ ಹಾಕಿದನು.
ಈ ಅಪರೂಪದ ದೃಶ್ಯವನ್ನು ಸಫಾರಿ ಜೀಪ್‌ಗಳಲ್ಲಿದ್ದ ಮಕ್ಕಳು ಮತ್ತು ವಯಸ್ಕರು ಆಶ್ಚರ್ಯದಿಂದ ವಿಡಿಯೋಗಳನ್ನು ತೆಗೆದುಕೊಳ್ಳುತ್ತಿರುವಾಗ, ಈ ಪುಟ್ಟ ಹುಲಿ 'ನಾನು ನಿಮಗೆಲ್ಲರಿಂತಲೂ ಸುಂದರವಾಗಿದ್ದೇನೆ ಎಂಬಂತೆ ಗೋಡೆಯ ಮೇಲೆ ಭವ್ಯವಾಗಿ ನಡೆದುಕೊಂಡು ಹೋಯಿತು. ಈ ಪುಟ್ಟ ಹುಲಿಗೆ ಹೆದರಿದ ಸಫಾರಿ ಜೀಪ್, ಇದ್ದಕ್ಕಿದ್ದಂತೆ ಹಿಂದೆ ತಿರುಗಿ, ಅಲ್ಲಿಂದ ಪರಾರಿಯಾಯಿತು.
ಕೋಟೆಯ ಗೋಡೆಗಳ ಮೇಲೆ ನಡೆಯುತ್ತಾ, ಹಳೆಯ ಕಟ್ಟಡಗಳ ನಡುವೆ ಕಣ್ಣಾಮುಚ್ಚಾಲೆ ಆಟವಾಡುತ್ತಾ, ಈ ಪುಟ್ಟ ಹುಲಿ ಸ್ವಲ್ಪ ಸಮಯ ಕಳೆಯಿತು. ನಂತರ ಕಣ್ಮರೆಯಾಯಿತು. ಇನ್ನು ಇಂತಹ ಕ್ಷಣಗಳು ರಣಥಂಬೋರ್ ಅನ್ನು ವಿಶೇಷವಾಗಿಸುತ್ತವೆ ಎಂದು ರಣಥಂಬೋರ್ ರಾಷ್ಟ್ರೀಯ ಉದ್ಯಾನವನವು ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಿಳಿಸಿದೆ.

ಕಳೆದ ಡಿಸೆಂಬರ್​ನಲ್ಲಿ ಗೋಡೆ ಮೇಲೆ ಕುಳಿತ ಹುಲಿ

2025ರ ಡಿಸೆಂಬರ್​ನಲ್ಲಿ ರಣಥಂಭೋರ್ ಕೋಟೆಯ ಹಳೆಯ ಕಲ್ಲಿನ ಗೋಡೆಯ ಹಿಂದೆಯಿಂದ ಒಂದು ಹುಲಿ ಹಠಾತ್ತನೆ ಪ್ರತ್ಯಕ್ಷವಾಗಿ, ಗೋಡೆಯ ಮೇಲೆ ನಡೆದು ಬಂದು ಆರಾಮವಾಗಿ ಕುಳಿತುಕೊಂಡಿತು. ಕೆಲವು ಅಡಿಗಳ ದೂರದಲ್ಲಿ ಪ್ರವಾಸಿಗರು ಇದ್ದರು! ಹುಲಿ ತಲೆ ತಗ್ಗಿಸಿ ಕುಳಿತು, ಆಕಳಿಸುತ್ತಿತ್ತು. ಈ ದೃಶ್ಯ ಕೂಡ ವಿಡಿಯೋದಲ್ಲಿ ಸೆರೆಯಾಗಿದೆ. ಇದನ್ನು "ಶೇರ್ ಖಾನ್ ಲೆವೆಲ್ ಎಂಟ್ರಿ" ಎಂದು ನೆಟ್ಟಿಗರು ಕರೆದರು. ಈ ವಿಡಿಯೋವನ್ನು ಡಿಸೆಂಬರ್​ 7 ಅಥವಾ 8ರಂದು ಮಯಾಂಕ್ ಶುಕ್ಲಾ ಎಂಬುವರು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net