ಸಣ್ಣ ಡಿಕ್ಕಿಗೆ ರೊಚ್ಚಿಗೆದ್ದ ಪುಂಡರು: ಪ್ರವಾಸಕ್ಕೆ ಹೊರಟಿದ್ದ ಯುವತಿಯರ ಕಾರಿನ ಮೇಲೆ ಕಲ್ಲೆಸೆದ ಕಿರಾತಕರು; ವಿಡಿಯೋ ವೈರಲ್! Road Rage in Jharkhand
ಸಣ್ಣ ಡಿಕ್ಕಿಗೆ ರೊಚ್ಚಿಗೆದ್ದು ಯುವತಿಯರ ಕಾರನ್ನು 10 ಕಿ.ಮೀ ಬೆನ್ನಟ್ಟಿ, ಗಾಜು ಪುಡಿ ಮಾಡಿ ಅಟ್ಟಹಾಸ ಮೆರೆದ ಕಿರಾತಕರು
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಜಾರ್ಖಂಡ್ನಲ್ಲಿ ಆಘಾತಕಾರಿ ರೋಡ್ ರೇಜ್!
ಸಣ್ಣ ಡಿಕ್ಕಿಗೆ ರೊಚ್ಚಿಗೆದ್ದು ಯುವತಿಯರ ಕಾರನ್ನು 10 ಕಿ.ಮೀ ಬೆನ್ನಟ್ಟಿ, ಗಾಜು ಪುಡಿ ಮಾಡಿ ಅಟ್ಟಹಾಸ ಮೆರೆದ ಕಿರಾತಕರು
ವಿಡಿಯೋ ಮಾಡಿ ಇಬ್ಬರು ಪುಂಡರನ್ನು ಜೈಲಿಗಟ್ಟಿದ ದಿಟ್ಟ ಯುವತಿಯರು!
ವೈರಲ್: ಜಮ್ಶೆಡ್ಪುರದಿಂದ ಹಜಾರಿಬಾಗ್ಗೆ ಪ್ರವಾಸಕ್ಕೆ ಹೊರಟಿದ್ದ ಯುವತಿಯರ ಕಾರಿನ ಮೇಲೆ ಕಿರಾತಕರು ದಾಳಿ ನಡೆಸಿದ ಘಟನೆ ಜಾರ್ಖಂಡ್ನಲ್ಲಿ (Road Rage in Jharkhand) ವರದಿಯಾಗಿದೆ.
ಯುಕರಿದ್ದ ಕಾರಿಗೆ ಯುವತಿಯ ಕಾರು ಸ್ವಲ್ಪ ಡಿಕ್ಕಿಯಾದ ಕಾರಣಕ್ಕೆ ಸುಮಾರು 8-10 ಕಿ.ಮೀ ಅಟ್ಟಾಡಿಸಿಕೊಂಡು ಬಂದು ಯುವತಿಯರಿದ್ದ ಕಾರಿನ ಗಾಜನ್ನು ಪುಡಿ ಮಾಡಿ, ಬಲವಂತವಾಗಿ ಪ್ರವೇಶಿಸಲು ಯತ್ನಿಸಿದ ಘಟನೆ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದೆ.
ಮಾಹಿತಿ ಪ್ರಕಾರ, ಈ ಘಟನೆ ಮಂಗಳವಾರ ನಡೆದಿದ್ದು, ಯುವತಿಯರ ಗುಂಪೊಂದು ಜಮ್ಶೆಡ್ಪುರ ಮಾರ್ಗದಿಂದ ಹಜಾರಿಬಾಗ್ಗೆ ಪ್ರವಾಸಕ್ಕೆ ಹೊರಟ್ಟಿದ್ದರು.
ಹತ್ತಿರದ ಢಾಬಾದಲ್ಲಿ ತಿಂಡಿ ಸೇವಿಸಿ ಪ್ರಯಾಣ ಮುಂದುವರಿಸಿದ ಮಹಿಳೆಯರು ದರ್ಶಂ ಫಾಲ್ಸ್ ಬಳಿ ವೇಗವಾಗಿ ಬಂದ ಎಸ್ಯುವಿ ಕಾರೊಂದು ಡಿಕ್ಕಿ ಮಾಡಿದೆ. ನಂತರ ಇಬ್ಬರು ಕಾರಿನಿಂದ ಹೊರಬಂದು ವಿವಾದವನ್ನು ಅಲ್ಲಿಗೆ ಕೊನೆಗೊಳಿಸಿದ್ದಾರೆ.
ಆದರೆ ಯುವತಿಯರ ಕಾರನ್ನು ಬೆನ್ನಟ್ಟಿದ ಯುವಕರ ಕಾರು ಸುಮಾರು 8 ರಿಂದ 10 ಕಿ.ಮೀ ವರೆಗೆ ಯುವತಿಯರ ಕಾರನ್ನು ಬೆನ್ನಟ್ಟಿ, ನಿಲ್ಲಿಸಿ, ಕಾರಿನ ಮೇಲೆ ಕಲ್ಲನ್ನು ಎತ್ತಿಹಾಕಿದ್ದು, ಯುವತಿಯರ ಕಾರನ್ನು ಅಕ್ರಮವಾಗಿ ಪ್ರವೇಶಿಸಲು ಮುಂದಾಗಿದ್ದಾರೆ.
ಯುವಕರ ಈ ಪುಂಡಾಟವನ್ನು ವಿಡಿಯೋ ಮಾಡಿಕೊಂಡ ಯುವತಿಯರು, ಕೂಡಲೇ 112 ನಂಬರ್ಗೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು, ರಾಜ್ಕುಮಾರ್ ಮಹತೋ ಮತ್ತು ಶೋಯೆಬ್ ರಜಾ ಎಂಬುವವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದು ಬಂದಿದೆ, (ಏಜನ್ಸೀಸ್).