ಜುಲೈ 9 ರಂದು ಕಿರುಕುಳದ ತೀವ್ರತೆ ಹೆಚ್ಚಾಗಿದ್ದು, ಆರೋಪಿಯು ಸುಮಾ ಅವರನ್ನು ಅಕ್ರಮವಾಗಿ ತಡೆದು, ಬಲವಂತವಾಗಿ ತನ್ನ ಕೋಣೆಗೆ ಎಳೆದುಕೊಂಡು ಹೋಗಿ ಭೀಕರವಾಗಿ ಹಲ್ಲೆ ಮಾಡಿದ್ದಾನೆ. ಸುಮಾ ಅವರ ಜುಟ್ಟು ಹಿಡಿದು ಎಳೆದಿದ್ದಲ್ಲದೆ, ಕುತ್ತಿಗೆ ಹಿಸುಕಿ ಕೊಲೆ ಮಾಡಲು ಯತ್ನಿಸಿದ್ದಾನೆ. ಅಷ್ಟೇ ಅಲ್ಲದೆ, ಕುತ್ತಿಗೆಗೆ ಚಾಕು ಇಟ್ಟು ಕೋಣೆಯಿಂದ ಹೊರಹೋಗದಂತೆ ಬೆದರಿಕೆ ಹಾಕಿದ್ದಾನೆ. ಈ ವೇಳೆ ಆಕೆಯ ಮೈಮೇಲೆ ಕಾಂಡೋಮ್ ಪ್ಯಾಕೆಟ್‌ಗಳನ್ನು ಎಸೆದಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ತದನಂತರ ಜುಲೈ 10 ರಂದು ಮತ್ತೆ ಹಲ್ಲೆ ನಡೆಸಿ, ಆಕೆಯನ್ನು ಅನುಚಿತವಾಗಿ ಸ್ಪರ್ಶಿಸಲು ಯತ್ನಿಸಿದ್ದಾನೆ ಎನ್ನುವ ಗಂಭೀರ ಆರೋಪವನ್ನು ಸಂತ್ರಸ್ತೆ ಮಾಡಿದ್ದಾರೆ.