ಸತತ ಮೂರು ಅವಧಿಗೆ ಟಿಎಂಸಿಯನ್ನು ಅಧಿಕಾರಕ್ಕೆ ತಂದ ಮಮತಾ, ನಾಲ್ಕನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಎಡವಿದ್ದಾರೆ. ಇದಕ್ಕೆ ಅವರ ವಿರುದ್ಧ ಕೇಳಿಬಂದ ಸಾಲು ಸಾಲು ಆರೋಪಗಳು ಸೋಲಿಗೆ ಒಂದು ಪ್ರಮುಖ ಕಾರಣ ಎನ್ನಲಾಗಿದೆ. ಆರ್.ಜಿ ಕರ್ ಟ್ರೈನಿ ವೈದ್ಯೆಯ ಅತ್ಯಾಚಾರ ಪ್ರಕರಣ ಬಂಗಾಳದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಯಿತು. ರೇಪ್ಗೆ ಬಲಿಯಾದ ಯುವತಿಯ ತಾಯಿ ಮಮತಾ ಸರ್ಕಾರದ ವಿರುದ್ಧ ಹೊರಿಸಿದ ಗಂಭೀರ ಆರೋಪಗಳು ಅಲ್ಲಿನ ಮತದಾರರ ದಿಕ್ಕನ್ನು ಬದಲಿಸಿತು ಎಂದೇ ಹೇಳಬಹುದು. ಹೀಗಾಗಿ, ಈ ಬಾರಿ ಟಿಎಂಸಿ ಪಕ್ಷವನ್ನು ದೂರವಿಟ್ಟರು ಎಂಬುದಕ್ಕೆ ಭಾರೀ ಅಂತರದ ಗೆಲುವೇ ಸಾಕ್ಷಿ ಎನ್ನಬಹುದು. ಇದರೊಟ್ಟಿಗೆ ಫುಟ್ಬಾಲ್ ದಂತಕಥೆ ಲಿಯೋನಲ್ ಮೆಸ್ಸಿ ಬಂಗಾಳಕ್ಕೆ ಆಗಮಿಸಿದಾಗ, ಸರಿಯಾದ ವ್ಯವಸ್ಥೆ ಮಾಡದೆ, ಕ್ರೀಡಾಂಗಣದಲ್ಲಿ ದೊಡ್ಡ ಗಲಾಟೆ ಭುಗಿಲೆದ್ದ ಕಾರಣ, ಆಡಳಿತರೂಢ ಪಕ್ಷದ ವಿರುದ್ಧ ಅನೇಕರು ಆಕ್ರೋಶ ಹೊರಹಾಕಿದ್ದರು. ಸೋಲಿಗೆ ಇದೂ ಕೂಡ ಒಂದು ಕಾರಣವಾಗಿರಬಹುದು.