ದೇವಸ್ಥಾನ ಕಟ್ಟೋಕೆ ಬಿಡದವರು ಈಗ ರಾಮನ ಹೆಸ್ರಲ್ಲೇ ರಾಜಕೀಯ ಮಾಡುತ್ತಿದ್ದಾರೆ: ಕಾಂಗ್ರೆಸ್ ವಿರುದ್ಧ ಕಂಗನಾ ರಣಾವತ್ ವಾಗ್ದಾಳಿ! Kangana Ranaut on Congress

ಕಾಂಗ್ರೆಸ್ ವಿರುದ್ಧ ಸಂಸದೆ ಕಂಗನಾ ರಣಾವತ್ ಆಕ್ರೋಶ
ಕಾಂಗ್ರೆಸ್ ವಿರುದ್ಧ ಸಂಸದೆ ಕಂಗನಾ ರಣಾವತ್ ಆಕ್ರೋಶ
Published on

ಪ್ರಮುಖ ಮುಖ್ಯಾಂಶಗಳು

  • ಅಯೋಧ್ಯಾ ರಾಮ ಮಂದಿರದ ದೇಣಿಗೆ ಅಕ್ರಮ ಆರೋಪ
  • ಕಾಂಗ್ರೆಸ್ ವಿರುದ್ಧ ಸಂಸದೆ ಕಂಗನಾ ರಣಾವತ್ ಆಕ್ರೋಶ
  • ರಾಮನನ್ನು ಕಾಲ್ಪನಿಕ ಎಂದವರು ಈಗ ರಾಜಕೀಯ ಮಾಡುತ್ತಿದ್ದಾರೆ ಎಂದು ತಿರುಗೇಟು
ನವದೆಹಲಿ: ಸದ್ಯ ಅಯೋಧ್ಯಾ ರಾಮ ಮಂದಿರದ ದೇಣಿಗೆ ಕಳ್ಳತನ ಆರೋಪ ವಿಚಾರ ದೇಶದೆಲ್ಲಡೆ ಭಾರಿ ಸಂಚಲನಕ್ಕೆ ಕಾರಣವಾಗಿದೆ. ಈ ಪ್ರಕರಣಕ್ಕೆ ಕುರಿತಂತೆ ಎಸ್​ಐಟಿ ತನಿಖೆ ನಡೆಸುತ್ತಿದ್ದು, ಸುಮಾರು ಎಂಟು ಜನ ಆರೋಪಿಗಳನ್ನು ಬಂಧನಕ್ಕೆ ಒಳ ಪಡಿಸಲಾಗಿದೆ.
ಈಗ ಈ ವಿಚಾರದ ಬಗ್ಗೆ ಮಾತನಾಡಿದರುವ ಬಾಲಿವುಡ್​ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ (Kangana Ranaut on Congress)​​, ಯಾರು ಪ್ರಭು ಶ್ರೀರಾಮನನ್ನು ಕಾಲ್ಪನಿಕ ಪಾತ್ರ ಎಂದಿದ್ದರೋ ಅವರೇ ಈಗ ರಾಮನ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆಂದು ಕಾಂಗ್ರೆಸ್​ ವಿರುದ್ಧ ಹರಿಹಾಯ್ದಿದ್ದಾರೆ.

ದೇವಸ್ಥಾನ ಕಟ್ಟಲು ಬಿಡದವರು ಏಕೆ ಮಾತನಾಡುತ್ತಿರಿ?

ಪ್ರಭು ಶ್ರೀರಾಮ ಭಾರತೀಯರ ಅಸ್ಮಿತೆ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಇಷ್ಟು ವರ್ಷ ಒಂದು ವರ್ಗದ ಜನರನ್ನು ಖುಷಿ ಪಡಿಸಲು, ರಾಮನ ದೇವಸ್ಥಾನವನ್ನು ಕಟ್ಟಲು ಬಿಡದವರು ಯಾರೆಂದು ಎಲ್ಲರಿಗೂ ಗೊತ್ತಿದೆ.
ದೇವಸ್ಥಾನ ನಿರ್ಮಾಣಕ್ಕೆ, ರಾಮ ಒಬ್ಬ ಕಾಲ್ಪನಿಕ ಪಾತ್ರ ಎಂದು ಕೋರ್ಟ್​ ಮೇಟ್ಟಿಲೇರಿದ್ದ ಕಾಂಗ್ರೆಸ್​ ಈಗ ರಾಮನ ಹೆಸರಿನಲ್ಲಿ ರಾಜಕೀಯದ ಮೈಲೇಜ್​ ಪಡೆಯಲು ಮುಂದಾಗಿದೆ. ದೇಶದ ಜನ ಇದನ್ನು ಗಮನಿಸುತ್ತಿದ್ದು, ಕಾಂಗ್ರೆಸ್​ನ ಹಣೆಬರಹ ಎಲ್ಲರಿಗೆ ತಿಳಿದಿದೆ ಎಂದು ನಟಿ, ಸಂಸದೆ ಕಂಗನಾ ರಣಾವತ್​ ಆಕ್ರೋಶ ಹೊರಹಾಕಿದ್ದಾರೆ.

ರಾಮನ ದುಡ್ಡನ್ನು ಏಕೆ ತಿಂದರಿ?

ಕೆಲ ದಿನಗಳ ಹಿಂದೆ ಉತ್ತರಾಖಂಡ ರಾಜ್ಯದ ಮುಖ್ಯಮಂತ್ರಿ, ಸುಖವಿಂದರ್ ಸಿಂಗ್ ಸುಖು, ಅಯೋಧ್ಯಾ ರಾಮ ಮಂದಿರದಲ್ಲಿ ನಡೆದಿರುವುದು ಕೇವಲ ಆರ್ಥಿಕ ಅಕ್ರಮವಲ್ಲ, ಇದು ಕೋಟ್ಯಾಂತರ ಭಕ್ತರ ಭಾವನೆಗೆ ಮಾಡಿದ ದ್ರೋಹವೆಂದು ಹೇಳಿದ್ದರು. ಇದೇ ಘಟನೆ ಕಾಂಗ್ರೆಸ್​ ಆಡಳಿತ ಅವಧಿಯಲ್ಲಿ ನಡೆದಿದ್ದರೆ ಬಿಜೆಪಿ ದೇಶದಲ್ಲಿ ದಂಗೆ ವಾತಾವರಣವನ್ನು ಸೃಷ್ಟಿಸಿ ಅರಾಜಕತೆ ಉಂಟು ಮಾಡುತ್ತಿತ್ತು ಎಂದು ಆರೋಪಿಸಿದ್ದರು.
ಸಿಎಂ ಅವರ ಈ ಹೇಳಿಕೆ ಬೆನ್ನಲ್ಲೆ, ಉತ್ತರಾಖಂಡದ ಮಂಡಿ ಲೋಕಸಭಾ ಕ್ಷೇತ್ರದ ಸಂಸದೆ ಕಂಗನಾ ರಣಾವತ್​ ಕೌಂಟರ್​ ನೀಡಿದ್ದಾರೆ. ರಾಮನ ದೇವಸ್ಥಾನ ಕಟ್ಟಲು ಬಿಡದವರು ಈಗ ರಾಮನ ಹೆಸರಿನಲ್ಲಿ ರಾಜಕಾರಣ ಮಾಡಲು ಬರಬೇಡಿ, ಜನ ನೋಡುತ್ತಿದ್ದಾರೆಂದು ಹೇಳಿಕೆ ನೀಡಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net