ಅನುಕಂಪ ಆಧಾರದಲ್ಲಿ ನೇಮಕಗೊಂಡವರು ಉನ್ನತ ಹುದ್ದೆಗೆ ಬೇಡಿಕೆ ಇಡುವಂತಿಲ್ಲ: ಸುಪ್ರೀಂ ಕೋರ್ಟ್ | Supreme Court

Supreme Court
Supreme Court
Published on

ಪ್ರಮುಖ ಮುಖ್ಯಾಂಶಗಳು

  • ಅನುಕಂಪದ ಆಧಾರದ ಮೇಲೆ ಕೆಲಸಕ್ಕೆ ನೇಮಕವಾದ ಬಳಿಕ ಅವರ ಬೇಡಿಕೆ ಈಡೇರಿದಂತೆ. ನಂತರ ಅದನ್ನೇ ಪುನಃ ಚಲಾಯಿಸಿ ಉನ್ನತ ಹುದ್ದೆಗೆ ಬೇಡಿಕೆ ಇಡುವಂತಿಲ್ಲ
  • ಮೃತ ಉದ್ಯೋಗಿಯ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಿದ ನಂತರ, ಅವರ ಹಕ್ಕು ಚಲಾವಣೆಗೆ ಆದಂತೆ
Supreme Court : ಮೃತ ನೌಕರನ ಅವಲಂಬಿತರು ಅನುಕಂಪದ ಆಧಾರದ ಮೇಲೆ ಕೆಲಸಕ್ಕೆ ನೇಮಕವಾದ ಬಳಿಕ ಅವರ ಬೇಡಿಕೆ ಈಡೇರಿದಂತೆ. ನಂತರ ಅದನ್ನೇ ಪುನಃ ಚಲಾಯಿಸಿ ಉನ್ನತ ಹುದ್ದೆಗೆ ಬೇಡಿಕೆ ಇಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌(Supreme Court) ತೀರ್ಪ್​ನ್ನು ನೀಡಿದೆ. ಅನುಕಂಪದ ಆಧಾರದ ಮೇಲೆ ಸ್ವೀಪರ್‌ ಕೆಲಸಕ್ಕೆ ನೇಮಕಗೊಂಡಿದ್ದ ತಮಿಳುನಾಡಿನ ಎಂ.ಜಯಬಾಲ ಮತ್ತು ಎಸ್.ವೀರಮಣಿ ಅವರು ತಮ್ಮನ್ನು ಕಿರಿಯ ಸಹಾಯಕ ಹುದ್ದೆಗೆ ನೇಮಕ ಮಾಡಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದರು. ಮೃತ ಉದ್ಯೋಗಿಯ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ನೀಡಿದ ನಂತರ, ಅವರ ಹಕ್ಕು ಚಲಾವಣೆಗೆ ಆದಂತೆ ನಂತರ, ಉನ್ನತ ಹುದ್ದೆಗೆ ನೇಮಕಾತಿ ಪಡೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇಲ್ಲದಿದ್ದರೆ, ಅದು ಅಂತ್ಯವಿಲ್ಲದ ಅನುಕಂಪದ ಆಧಾರದ ನೇಮಕಾತಿ ಪ್ರಕರಣವಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ರಾಜೇಶ್ ಬಿಂದಾಲ್ ಮತ್ತು ಮನಮೋಹನ್‌ ಅವರ ನ್ಯಾಯಪೀಠ ಹೇಳಿದೆ.
ಅನುಕಂಪದ ಆಧಾರದಲ್ಲಿ ನೇಮಕವಾದ ಅರ್ಜಿದಾರರು ಉನ್ನತ ಹುದ್ದೆಗೆ ಅರ್ಹರಾಗಿದ್ದರೂ ಅದು ಆ ಹುದ್ದೆಯಲ್ಲಿ ನೇಮಕಗೊಳ್ಳುವ ಹಕ್ಕು ಅವರಿಗೆ ಇದೆ ಎಂದರ್ಥವಲ್ಲ ಎಂಬುದಾಗಿ ನ್ಯಾಯಾಲಯ ಹೇಳಿದೆ. ಪ್ರತಿವಾದಿಗಳು ಉನ್ನತ ಹುದ್ದೆಗೆ ಮೊದಲೇ ಅರ್ಜಿ ಸಲ್ಲಿಸಬಹುದಿತ್ತು ಎಂಬ ಅರಿವು ಇರಲಿಲ್ಲ ಎಂಬ ತಿರಸ್ಕರಿಸಿದ ನ್ಯಾಯಾಲಯ ಕಾನೂನಿನ ಅರಿವಿಲ್ಲ ಎಂಬುದು ನೆಪವಾಗಕೂಡದು ಎಂದು ಸ್ಪಷ್ಟಪಡಿಸಿತು. ಆ ಮೂಲಕ ತಮಿಳುನಾಡು ಸರ್ಕಾರದ ಮೇಲ್ಮನವಿ ಪುರಸ್ಕರಿಸಿದ ಅದು ಮದ್ರಾಸ್ ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿತು.(ಏಜನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net