ಪ್ರಧಾನಿ ನರೇಂದ್ರ ಮೋದಿ ಅವರ ಪ್ರೇರಣೆ ಇಲ್ಲದೆ ಇಂತಹ ಘಟನೆಗಳು ನಡೆಯಲು ಸಾಧ್ಯವೇ ಇಲ್ಲ ಎಂದು ನೇರವಾಗಿ ಗುಡುಗಿದ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಕೊಲ್ಲುತ್ತಿದೆ ಮತ್ತು ತನ್ನ ಅಧಿಕಾರ ಬಳಸಿ ಎಲ್ಲೆಡೆ ಆರ್ಎಸ್ಎಸ್ ಕಾರ್ಯಕರ್ತರನ್ನು ತಂದು ಕೂರಿಸುತ್ತಿದೆ ಎಂದು ಆರೋಪಿಸಿದರು. ಇತ್ತೀಚೆಗೆ ಜಾರ್ಖಂಡ್ನಲ್ಲೂ ಇದೇ ರೀತಿಯ ರಾಜಕೀಯ ಹೈಡ್ರಾಮಾ ನಡೆದಿತ್ತು ಎಂದ ಅವರು, ಚುನಾವಣೆಗಳಲ್ಲಿ ಮತ ಖರೀದಿ ಮಾಡುವುದು, ಪಕ್ಷಗಳನ್ನು ವಿಭಜಿಸುವುದು ಮತ್ತು ತಮ್ಮದೇ ಏಜೆಂಟರನ್ನು ಇರಿಸುವುದು ಬಿಜೆಪಿಯ ಅಭ್ಯಾಸವಾಗಿದೆ ಎಂದರು.