ಕಳೆದ ಎರಡು ತಿಂಗಳಿಂದ ಈ ಕ್ಯಾಂಟೀನ್ನಲ್ಲಿ ನಿರಂತರವಾಗಿ ಕಳವು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಪ್ರತಿಯೊಬ್ಬ ಖದೀಮನು ಹಣ ಅಥವಾ ಬೆಲೆಬಾಳುವ ವಸ್ತುಗಳನ್ನು ಕದ್ದರೆ, ಈ ವಿಚಿತ್ರ ಕಳ್ಳ ಮಾತ್ರ ಪ್ರತಿ ಶನಿವಾರದಂದು ಕ್ಯಾಂಟೀನ್ಗೆ ನುಗ್ಗಿ ದಿನಸಿಗಳನ್ನು ಕದಿಯುತ್ತಾನೆ. ಭಾನುವಾರ ಕ್ಯಾಂಟೀನ್ ಮುಚ್ಚಿರುವುದರಿಂದ, ಸೋಮವಾರ ಬೆಳಗ್ಗೆ ಸಿಬ್ಬಂದಿ ಕೆಲಸಕ್ಕೆ ಬಂದಾಗಷ್ಟೇ ಕಳವು ನಡೆದಿರುವುದು ಗೊತ್ತಾಗುತ್ತದೆ. ಎಣ್ಣೆ, ಮಸಾಲೆ ಪದಾರ್ಥಗಳು, ಗೋಡಂಬಿ, ಈರುಳ್ಳಿ ಹಾಗೂ ಮೆಣಸಿನಕಾಯಿ ಸೇರಿದಂತೆ ಪ್ರತಿ ವಾರ ಸುಮಾರು 4,000 ರೂ. ಮೌಲ್ಯದ ದಿನಸಿ ಸಾಮಗ್ರಿಗಳು ಕಳ್ಳತನವಾಗುತ್ತಿವೆ.