ಚೆನ್ನೈ: ಮೇ 3 ರಂದು ನಡೆಯಬೇಕಿದ್ದ ನೀಟ್ ಪ್ರವೇಶ ಪರೀಕ್ಷೆಯು ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ಹಿನ್ನೆಲೆಯಲ್ಲಿ ರದ್ದಾಗಿದೆ. ಈ ನಿರ್ಧಾರವು ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಕಾರ್ಮೋಡ ಕವಿಯುವಂತೆ ಮಾಡಿದ್ದು, ಇಡೀ ದೇಶಾದ್ಯಂತ ಆಕ್ರೋಶದ ಕಟ್ಟೆ ಒಡೆದಿದೆ. ಈ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿರುವ ನಟ ಕಮಲ್ ಹಾಸನ್(Kamal Haasan), ಇದು ಕೇವಲ ಪರೀಕ್ಷೆ ರದ್ದತಿಯಲ್ಲ, ಲಕ್ಷಾಂತರ ಮಕ್ಕಳ ಕನಸುಗಳ ಮೇಲೆ ನಡೆದ ಕ್ರೂರ ಅಪರಾಧ ಸಂಚು ಎಂದು ಕೇಂದ್ರದ ವಿರುದ್ಧ ಕಿಡಿಕಾರಿದ್ದಾರೆ.