

ಜೈಪುರ:ಸಂಭ್ರಮದ ಮದುವೆ ಮನೆಯಲ್ಲಿ ಅತಿಥಿಯಂತೆ (house thief)ಬಂದ ಕಳ್ಳನೊಬ್ಬ ಕೈಚಳಕತೋರಿ ವಧುವಿನ ಬ್ಯಾಗ್ನ್ನೇ ಹೊತ್ತೊಯ್ದಿರುವ ಘಟನೆರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಈ ಇಡೀ ದೃಶ್ಯಮದುವೆ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜೈಪುರದಮನ್ಸರೋವರ್ ಪ್ರದೇಶದ ಮದುವೆ ಮಂಟಪದಲ್ಲಿ ಈ ಘಟನೆ ಸಂಭವಿಸಿದೆ.ವಧುವಿನ ಕುಟುಂಬಸ್ಥರು ಕಾರ್ಯಕ್ರಮದ ಗಡಿಬಿಡಿಯಲ್ಲಿದ್ದಾಗ, ಕೋಟ್ ಧರಿಸಿ ಅತಿಥಿಯಂತೆಸೋಗು ಹಾಕಿದ್ದ ಕಳ್ಳ ಮೆಲ್ಲನೆ ವೇದಿಕೆಯಸಮೀಪ ಬಂದಿದ್ದಾನೆ.
ಏನಿದೆಬ್ಯಾಗ್ನಲ್ಲಿ?: ಕಳ್ಳತನವಾದ ಬ್ಯಾಗ್ನಲ್ಲಿ ವಧುವಿನ 4 ಲಕ್ಷ ರೂಪಾಯಿ ಮೌಲ್ಯದಬಂಗಾರದ ಆಭರಣಗಳು ಮತ್ತು ದೊಡ್ಡ ಮೊತ್ತದ ನಗದು ಇತ್ತು ಎಂದುದೂರಿನಲ್ಲಿ ತಿಳಿಸಲಾಗಿದೆ.
ಕಳ್ಳನಚಾಣಾಕ್ಷತನ: ಅತಿಥಿಗಳ ನಡುವೆ ಯಾರಿಗೂ ಸಂಶಯ ಬರದಂತೆ ನಡೆದಾಡುತ್ತಿದ್ದಈ ವ್ಯಕ್ತಿ, ಯಾರೂ ಗಮನಿಸದ ಕ್ಷಣದಲ್ಲಿಸೋಫಾದ ಮೇಲಿಟ್ಟಿದ್ದ ಬ್ಯಾಗ್ ಎತ್ತಿಕೊಂಡು ಕ್ಷಣಮಾತ್ರದಲ್ಲಿ ಕಣ್ಮರೆಯಾಗಿದ್ದಾನೆ.
ಸಿಸಿಟಿವಿಯಲ್ಲಿಸೆರೆ
ಮದುವೆಯವಿಡಿಯೋಗ್ರಾಫರ್ ಹಾಗೂ ಮಂಟಪದ ಸಿಸಿಟಿವಿದೃಶ್ಯಗಳನ್ನು ಪರಿಶೀಲಿಸಿದಾಗ ಕಳ್ಳನ ಕೃತ್ಯ ಬಯಲಾಗಿದೆ. ಆರೋಪಿಯು ಬಹಳ ದಿನಗಳಿಂದ ಮದುವೆಮನೆಗಳನ್ನು ಗುರಿಯಾಗಿಸಿಕೊಂಡು ಇಂತಹ ಕೃತ್ಯ ಎಸಗುವವೃತ್ತಿಪರ ಕಳ್ಳನಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಈಗಾಗಲೇಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಯ ಪತ್ತೆಗಾಗಿಬಲೆ ಬೀಸಿದ್ದಾರೆ,(ಏಜೆನ್ಸೀಸ್)