ನೀತಾ ಅಂಬಾನಿ ಅಲ್ಲ... ಈ ಭಾರತೀಯ ಬಿಲಿಯನೇರ್ ಬಳಿ ಇದೆ 126 ಕೋಟಿ ರೂ.ವಜ್ರದ ಉಂಗುರ! | Diamond Ring

Diamond Ring
Diamond Ring
Published on
ಮುಂಬೈ: ವಜ್ರಗಳು ಮತ್ತು ಅಪರೂಪದ ಅಮೂಲ್ಯ ಕಲ್ಲುಗಳ ವಿಷಯಕ್ಕೆ ಬಂದರೆ, ದೇಶದಲ್ಲಿ ಪ್ರಮುಖವಾಗಿ ಕೇಳಿಬರುವ ಒಂದು ಹೆಸರು ಅಂಬಾನಿ ಕುಟುಂಬ ಅದರಲ್ಲಿ ನೀತಾ ಅಂಬಾನಿ ಹೆಸರು ಮೊದಲ ಸಾಲಲ್ಲಿ ನಿಲ್ಲುತ್ತದೆ. ಆದರೆ, ಭಾರತದ ಪ್ರಮುಖ ಬಿಲಿಯನೇರ್ ಕುಟುಂಬಕ್ಕೆ ಸೇರಿದ ನತಾಶಾ ಪೂನಾವಾಲ್ಲಾ ಅವರು 126 ಕೋಟಿ ರೂ. ಮೌಲ್ಯದ ಅಪರೂಪದ ಗುಲಾಬಿ ವಜ್ರದ ಉಂಗುರ ಹೊಂದಿದ್ದಾರೆ.
ಹೌದು, ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಅದಾರ್ ಪೂನಾವಾಲ್ಲಾ ಅವರ ಪತ್ನಿನತಾಶಾ ಪೂನಾವಾಲ್ಲಾ ಜಗತ್ತಿನ ಅತ್ಯಂತ ದುಬಾರಿ ಮತ್ತು ಐತಿಹಾಸಿಕ ಆಭರಣಗಳಲ್ಲಿ ಒಂದನ್ನು ಹೊಂದಿದ್ದಾರೆ. ನೀತಾ ಅಂಬಾನಿ ಅವರ ಹೆಸರು ಇಂತಹ ಲಗ್ಜುರಿ ಆಭರಣಗಳೊಂದಿಗೆ ಹೆಚ್ಚಾಗಿ ಕೇಳಿಬಂದರೂ, ಈ ಬಾರಿ 126 ಕೋಟಿ ಮೌಲ್ಯದ ಅಪರೂಪದ ಗುಲಾಬಿ ವಜ್ರದ ಉಂಗುರದ ಮಾಲೀಕತ್ವ ನತಾಶಾ ಪೂನಾವಾಲ್ಲಾ ಅವರದ್ದಾಗಿದೆ.
ಈ ಉಂಗುರದ 10.38 ಕ್ಯಾರಟ್ ಗುಲಾಬಿ ವಜ್ರವು ಫ್ರಾನ್ಸ್‌ನ ಕೊನೆಯ ರಾಣಿ ಮೇರಿ ಆಂಟೋಯ್ನೆಟ್ ಅವರಿಗೆ ಸೇರಿದ್ದ ಐತಿಹಾಸಿಕ ರತ್ನವಾಗಿದೆ. ಗೋಲ್ಕೊಂಡಾ ರಾಣಿಯಿಂದ ಬಂದಿರುವ ಈ ಅಪರೂಪದ ಗುಲಾಬಿ ವಜ್ರವನ್ನು ಪ್ರಸಿದ್ಧ ಜ್ಯೂಯೆಲರಿ ಡಿಸೈನರ್ ಜೋಯೆಲ್ ಆರ್ಥರ್ ರೋಸೆಂಥಾಲ್ (JAR) ಅವರು ಮರು-ಡಿಸೈನ್ ಮಾಡಿ, ಆಧುನಿಕ ಶೈಲಿ(ಸೆಟ್ಟಿಂಗ್) ನೀಡಿದ್ದಾರೆ.

ನತಾಶಾ ಅವರ ಸೊತ್ತಾಗಿದೆ..

ಫ್ರೆಂಚ್ ಕ್ರಾಂತಿಯ ಸಮಯದಲ್ಲಿ ರಾಣಿಯಿಂದ ರಕ್ಷಿಸಲ್ಪಟ್ಟ ಈ ರತ್ನವು ಯೂರೋಪಿಯನ್ ರಾಯಲ್ ಕುಟುಂಬಗಳ ಮೂಲಕ ಪ್ರಯಾಣಿಸಿ, ಇಂದು ನತಾಶಾ ಅವರ ಸೊತ್ತಾಗಿದೆ. ನತಾಶಾ ಪೂನಾವಾಲ್ಲಾ ಅವರು ಫ್ಯಾಷನ್ ಐಕಾನ್ ಆಗಿ ಪ್ರಸಿದ್ಧರಾಗಿದ್ದು, ಮೆಟ್ ಗಾಲಾ, ಕ್ಯಾನ್ಸ್ ಫಿಲ್ಮ್ ಫೆಸ್ಟಿವಲ್ ಮುಂತಾದ ಅಂತಾರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಈ ಉಂಗುರವನ್ನು ಧರಿಸಿ ಕಂಗೊಳಿಸಿದ್ದಾರೆ. ಈ ಆಭರಣವು ಕೇವಲ ದುಬಾರಿತನಕ್ಕೆ ಮಾತ್ರವಲ್ಲ, ಐತಿಹಾಸಿಕ ಮೌಲ್ಯಕ್ಕೂ ಹೆಸರಾದದ್ದು. ಜಗತ್ತಿನ ಅತ್ಯಂತ ದುರ್ಲಭ ಗುಲಾಬಿ ವಜ್ರಗಳಲ್ಲಿ ಒಂದಾದ ಇದು ಲಗ್ಜುರಿ ಜ್ಯೂಯೆಲರಿ ಪ್ರಿಯರನ್ನು ಮಂತ್ರಮುಗ್ಧಗೊಳಿಸುತ್ತದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net