28 ವರ್ಷಗಳಿಂದೆ ಹೊಸ ವರ್ಷದ ರೆಸ್ಯೂಲೇಷನ್​ ಹೀಗಿತ್ತು! 1997ರ ಅಪರೂಪದ ವೀಡಿಯೊ ವೈರಲ್..

New Year Resolution
New Year Resolution
Published on
ಬೆಂಗಳೂರು:ಇದೀಗ ಹೊಸ ವರ್ಷ ಆರಂಭವಾಗಿದ್ದು, ಎಲ್ಲರೂ 2026ಕ್ಕೆ ಕಾಲಿಟ್ಟಿದ್ದಾರೆ. ಅಲ್ಲದೇ, ಹೊಸ ವರ್ಷದಿಂದ ಹೊಸ ಜೀವನ ಕಟ್ಟಿಕೊಳ್ಳಲು ಇಲ್ಲವೇ ತಮ್ಮ ಜೀವನ ಸುಂದರವಾಗಿ ಸಾಗಿಸಲು ಒಂದಿಷ್ಟು ಶಪಥಗಳನ್ನು ಅಥವಾ ಸಂಕಲ್ಪಗಳನ್ನು ಮಾಡುತ್ತಾರೆ. ಅದೇ ರೀತಿ 28 ವರ್ಷಗಳ ಹಿಂದಿನ ಒಂದು ಅಪರೂಪದ 1997ರ ವೀಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚೆಗೆ ವೈರಲ್ ಆಗಿದೆ.
 ಈ ವೀಡಿಯೊದಲ್ಲಿ ಸಾಮಾನ್ಯ ಭಾರತೀಯರು ತಮ್ಮ ಹೊಸ ವರ್ಷದ ಸಂಕಲ್ಪಗಳನ್ನು(ರೆಸ್ಯೂಲೇಷನ್​) ಹಾಸ್ಯಮಯವಾಗಿ ಮತ್ತು ಪ್ರಾಮಾಣಿಕವಾಗಿ ಹಂಚಿಕೊಂಡಿದ್ದಾರೆ. ಇದು ಶೇಖರ್ ಸುಮನ್ ಅವರ ಜನಪ್ರಿಯ ಲೇಟ್ ನೈಟ್ ಟಾಕ್ ಶೋ 'Movers and Shakers'ನ ಪೀಪಲ್-ಬೈಟ್ ಸೆಗ್ಮೆಂಟ್‌ನಿಂದ ತೆಗೆದುಕೊಂಡಿದ್ದಾಗಿದೆ.

ವೈರಲ್​ ವಿಡಿಯೋದಲ್ಲೇನಿದೆ..?

ವೀಡಿಯೊದಲ್ಲಿ ಒಬ್ಬ ಮಹಿಳೆ ಸ್ಟ್ರಿಕ್ಟ್ ಡೈಟ್ ಮಾಡುವ ಸಂಕಲ್ಪ ತೆಗೆದುಕೊಂಡು, "ಚಾಟ್, ಸ್ವೀಟ್ ಏನೂ ತಿನ್ನಲ್ಲ" ಎಂದು ಹೇಳುತ್ತಾರೆ. ಆದರೆ ಕೆಲವೇ ಕ್ಷಣಗಳಲ್ಲಿ ಎಕ್ಸ್‌ಟ್ರಾ ಬಟರ್‌ ಸಹಿತ ನಾಲ್ಕು ಪ್ಲೇಟ್ ಪಾವ್ ಭಾಜಿ ಆರ್ಡರ್ ಮಾಡುತ್ತಾರೆ! ಮತ್ತೊಬ್ಬ ಯುವತಿ "ಎಷ್ಟು ಸಾಧ್ಯವೋ ಅಷ್ಟು ಬಾಯ್‌ಫ್ರೆಂಡ್ಸ್ ಮಾಡಿಕೊಳ್ಳಬೇಕು" ಎಂದು ಧೈರ್ಯವಾಗಿ ಹೇಳುತ್ತಾರೆ. ಇನ್ನೊಬ್ಬ ಮಹಿಳೆ ಹಣದ ಬಗ್ಗೆ ಚಿಂತಿಸಿ, "ಕಡಿಮೆ ಖರ್ಚು ಮಾಡಬೇಕು" (I want to spend less) ಎಂದು ಸಂಕಲ್ಪ ಮಾಡುತ್ತಾರೆ. ಇದಕ್ಕೆ ವಿರೋಧವಾಗಿ ಮತ್ತೊಬ್ಬರು "ಹೆಚ್ಚು ಹಣ ಖರ್ಚು ಮಾಡಬೇಕು" ಎಂದು ಹೇಳುತ್ತಾರೆ. ಇನ್ನೂ ಒಬ್ಬ ಪುರುಷ "ಮುಂದಿನ ವರ್ಷದಿಂದ ಜೀನ್ಸ್ ಮತ್ತು ಟೀ-ಶರ್ಟ್ ಧರಿಸುತ್ತೇನೆ" ಎನ್ನುತ್ತಾರೆ. ಸಣ್ಣ ಹುಡುಗ ಒಬ್ಬ "ಶಾಲೆಗೆ ಪುಸ್ತಕಗಳನ್ನು ಒಯ್ಯುವುದಿಲ್ಲ" ಎಂದು ಹೇಳಿ ಎಲ್ಲರನ್ನೂ ನಗಿಸುತ್ತಾನೆ. ಇನ್ನೊಬ್ಬ ಮಹಿಳೆ ಮನೆಯಿಂದ ಓಡಿಹೋಗುವ ಸಂಕಲ್ಪ ತೆಗೆದುಕೊಂಡಿದ್ದೇನೆ ಎಂದು ಹೇಳುವ ವಿಡಿಯೋ ವೈರಲ್​ ಆಗಿದೆ. 
ಇನ್‌ಸ್ಟಾಗ್ರಾಮ್‌ನಲ್ಲಿ @the90sindia ಅಕೌಂಟ್‌ನಿಂದ ಹಂಚಿಕೊಳ್ಳಲ್ಪಟ್ಟ ಈ ವೀಡಿಯೊಗೆ "1997ರ ಅಪರೂಪದ ಪೀಪಲ್-ಬೈಟ್ ಕ್ಲಿಪ್, ಸಾಮಾನ್ಯ ಭಾರತೀಯರು ಹೊಸ ವರ್ಷ ಸಂಕಲ್ಪಗಳ ಬಗ್ಗೆ ಹೇಗೆ ಮಾತನಾಡಿದ್ದರು" ಎಂಬ ಕ್ಯಾಪ್ಷನ್ ಇದೆ. ಈ ವೀಡಿಯೊ ಸಾವಿರಾರು ವೀಕ್ಷಣೆಗಳನ್ನು ಪಡೆದಿದೆ.
ನೆಟ್ಟಿಗರು ಈ ವೀಡಿಯೊಗೆ ಪ್ರತಿಕ್ರಿಯಿಸಿ, "90ರ ದಶಕದ ಜನರು ಎಷ್ಟು ಸಂತೋಷದಿಂದ, ಸಭ್ಯವಾಗಿ ಮಾತನಾಡುತ್ತಿದ್ದರು" ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಒಬ್ಬರು "ಇವರ ಕಣ್ಣುಗಳಲ್ಲಿನ ಸಂತೋಷ ನೋಡಿ!" ಎಂದರೆ, ಮತ್ತೊಬ್ಬರು "ಈಗಿನಂತೆ ವಾಟ್ಸಾಪ್ ಫಾರ್ವರ್ಡ್ ಕಳುಹಿಸುವವರಲ್ಲ ಇವರು" ಎಂದು ತಮಾಷೆ ಮಾಡಿದ್ದಾರೆ.ಹೊಸ ವರ್ಷದ ಸಂಕಲ್ಪಗಳು ಯಾವಾಗಲೂ ಹಾಸ್ಯಮಯವಾಗಿರುತ್ತವೆ ಎಂಬುದಕ್ಕೆ ಈ 28 ವರ್ಷ ಹಳೆಯ ವೀಡಿಯೊ ಸಾಕ್ಷಿಯಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net