ಬೇಸಿಗೆ ಕಾಲದಲ್ಲಿ ನಿಮ್ಮ ಈ ಒಂದು ಅಭ್ಯಾಸ ಮನೆಗೆ ಹಾವುಗಳನ್ನು ಆಹ್ವಾನಿಸಿದಂತೆ: ತಜ್ಞರ ಎಚ್ಚರಿಕೆ! Snakes

ಬೇಸಿಗೆ ಕಾಲದಲ್ಲಿ ನಿಮ್ಮ ಈ ಒಂದು ಅಭ್ಯಾಸ ಮನೆಗೆ ಹಾವುಗಳನ್ನು ಆಹ್ವಾನಿಸಿದಂತೆ: ತಜ್ಞರ ಎಚ್ಚರಿಕೆ! Snakes
ಬೇಸಿಗೆ ಕಾಲದಲ್ಲಿ ನಿಮ್ಮ ಈ ಒಂದು ಅಭ್ಯಾಸ ಮನೆಗೆ ಹಾವುಗಳನ್ನು ಆಹ್ವಾನಿಸಿದಂತೆ: ತಜ್ಞರ ಎಚ್ಚರಿಕೆ! Snakes
Published on

ಪ್ರಮುಖ ಮುಖ್ಯಾಂಶಗಳು

  • ಹಾವುಗಳನ್ನು ಕಂಡರೆ ಹೆದರಿ ಓಡುವವರೇ ಹೆಚ್ಚು
  • ತುಂಬಾ ಅಪಾಯಕಾರಿ ಜೀವಿಗಳಲ್ಲಿ ಹಾವುಗಳು ಒಂದು
  • ಈ ಜೀವಿ ಶತಮಾನಗಳಿಂದ ಜನರ ಜೀವಕ್ಕೆ ಬೆದರಿಕೆಯಾಗಿದೆ
  • ಬೇಸಿಗೆ ಕಾಲದಲ್ಲಿ ತುಂಬಾ ಎಚ್ಚರಿಕೆ ವಹಿಸುವುದು ತುಂಬಾನೇ ಮುಖ್ಯ.
Snakes : ಹಾವುಗಳನ್ನು ಕಂಡರೆ ಹೆದರಿ ಓಡುವವರೇ ಹೆಚ್ಚು. ತುಂಬಾ ಅಪಾಯಕಾರಿ ಜೀವಿಗಳಲ್ಲಿ ಹಾವುಗಳು ( Snakes ) ಒಂದು. ಈ ಜೀವಿ ಶತಮಾನಗಳಿಂದ ಜನರ ಜೀವಕ್ಕೆ ಬೆದರಿಕೆಯಾಗಿದ್ದು, ಪ್ರಾಚೀನ ಕಾಲದಿಂದಲೂ ಜಗತ್ತಿನಲ್ಲಿ ವಾಸಿಸುತ್ತಿರುವ ಜೀವಿಯಾಗಿದೆ. ಈ ಭೂಮಿಯ ಮೇಲೆ ಸುಮಾರು 3000 ಜಾತಿಯ ಹಾವುಗಳು ವಾಸಿಸುತ್ತಿವೆ. ಆದರೆ, ಎಲ್ಲ ಹಾವುಗಳು ವಿಷಕಾರಿಯಲ್ಲ. ಕೆಲವೊಂದು ಸೌಮ್ಯ ಸ್ವಭಾವಾದ ಹಾವುಗಳಿವೆ. ಕೆಲವು ಜೀವಕ್ಕೆ ಮಾರಕವಾಗುವ ವಿಷವನ್ನು ಹೊಂದಿರುತ್ತವೆ.
ನಮ್ಮ ದೇಶದಲ್ಲಿ ವಿಷಪೂರಿತ ಹಾವು ಕಡಿತದಿಂದ ವರ್ಷಕ್ಕೆ ಸಾವಿರಾರು ಮಂದಿ ಅಸುನೀಗುತ್ತಿದ್ದಾರೆ. ಮನುಷ್ಯರಾದ ನಾವು ತಿಳಿದೋ ಅಥವಾ ತಿಳಿಯದೆಯೋ ಮಾಡುವ ತಪ್ಪುಗಳೇ ಹಾವುಗಳನ್ನು ನಾವಿರುವಲ್ಲಿಗೆ ಆಹ್ವಾನಿಸುತ್ತಿದ್ದೇವೆ. ಅದರಲ್ಲೂ ಇದು ಬೇಸಿಗೆ ಕಾಲವಾದ್ದರಿಂದ ಹಾವುಗಳು ತಂಪಿನ ವಾತಾವರಣ ಹುಡುಕಿ ಬರುವುದು ಸಾಮಾನ್ಯ. ಹೀಗೆ ಒಳ್ಳೆಯ ಸ್ಥಳವನ್ನು ಹುಡುಕಿ ಬರುವಾಗ ಮನೆಗಳ ಒಳಗೂ ಎಂಟ್ರಿ ಕೊಡುತ್ತವೆ. ಹೀಗಾಗಿ, ಬೇಸಿಗೆ ಕಾಲದಲ್ಲಿ ತುಂಬಾ ಎಚ್ಚರಿಕೆ ವಹಿಸುವುದು ತುಂಬಾನೇ ಮುಖ್ಯ.
ನಾವು ಮಾಡುವ ತಪ್ಪುಗಳೆಂದರೆ, ನಾವು ವಾಸಿಸುವ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದಿಲ್ಲ. ಮನೆಯ ಸುತ್ತಲಿನ ಪರಿಸರದಲ್ಲಿ ಕಸ ಸಂಗ್ರಹಣೆ ಮಾಡುವುದು ಮತ್ತು ಬೆಳೆದಿರುವ ಗಿಡಗಂಟಿಗಳನ್ನು ತೆರವು ಮಾಡದೇ ಇರುವುದು. ನಿರುಪಯುಕ್ತ ವಸ್ತುಗಳನ್ನು ಎಲ್ಲೆಂದರಲ್ಲಿ ಬೀಸಾಡುವುದು ಮಾಡುತ್ತೇವೆ. ಈ ಒಂದು ಅಭ್ಯಾಸವೂ ಹಾವುಗಳಿಗೆ ಆಹ್ವಾನ ನೀಡಿದಂತೆ. ಹೀಗಾಗಿ, ಬೇಸಿಗೆ ಕಾಲದಲ್ಲಿ ಹಾವುಗಳು ಇಂತಹ ಜಾಗಗಳಲ್ಲಿ ಆಶ್ರಯ ಪಡೆಯುತ್ತವೆ. ಆ ಸ್ಥಳದಲ್ಲಿ ನಾವು ಓಡಾಡಿದರೆ, ಹಾವು ಕಡಿಯುತ್ತದೆ. ಅಂದಹಾಗೆ, ಹಾವುಗಳು ಸುಖಾಸುಮ್ಮನೇ ಕಡಿಯುವುದಿಲ್ಲ. ತಮ್ಮ ಜೀವಕ್ಕೆ ಅಪಾಯವಿದೆ ಎಂದು ಗೊತ್ತಾದಾಗ ಮಾತ್ರ ಕಚ್ಚುತ್ತವೆ.
ಅಂದಹಾಗೆ, ನಮ್ಮ ಸಮಾಜದಲ್ಲಿ ಹಾವುಗಳ ಬಗ್ಗೆ ಅನೇಕ ಮೂಢನಂಬಿಕೆಗಳು ಮತ್ತು ಪುರಾಣಗಳಿವೆ. ರಾತ್ರಿಯಲ್ಲಿ ಶಿಳ್ಳೆ ಹೊಡೆದರೆ ಹಾವುಗಳು ಮನೆಗೆ ಬರುತ್ತವೆ ಎಂಬುದು ಸಾಮಾನ್ಯ ನಂಬಿಕೆ. ಆದರೆ, ಕುತೂಹಲಕಾರಿ ವಿಷಯವೆಂದರೆ ಇದಕ್ಕೆ ಯಾವುದೇ ವೈಜ್ಞಾನಿಕ ಆಧಾರವಿಲ್ಲ. ಮುಖ್ಯ ವಿಷಯವೆಂದರೆ ನೀವು ಶಿಳ್ಳೆ ಹೊಡೆದಾಗ ಹಾವುಗಳಿಗೆ ಕೇಳಲು ಕಿವಿಗಳಿಲ್ಲ. ಆದ್ದರಿಂದ, ಹಾವುಗಳು ಗಾಳಿಯಲ್ಲಿನ ಶಬ್ದ ತರಂಗಗಳನ್ನು ಗುರುತಿಸಲು ಸಾಧ್ಯವಾಗುವುದಿಲ್ಲ.
ಹಾವುಗಳು ತಮ್ಮ ಸುತ್ತಮುತ್ತಲಿನ ಕಂಪನಗಳಿಂದ ತಮ್ಮ ಸುತ್ತಲೂ ಏನು ನಡೆಯುತ್ತಿದೆ ಎಂಬುದನ್ನು ಗ್ರಹಿಸುತ್ತವೆ. ನೆಲದ ಮೇಲಿನ ಸಣ್ಣದೊಂದು ಚಲನೆಯೂ ಸಹ ಹಾವುಗಳ ದೇಹದಲ್ಲಿ ಕಂಪನಗಳಾಗಿ ಪ್ರತಿಫಲಿಸುತ್ತದೆ. ಅದಕ್ಕಾಗಿಯೇ ಹಾವುಗಳನ್ನು ಹೆದರಿಸಲು ನಡೆಯುವಾಗ ಶಬ್ದ ಮಾಡಬೇಕು ಎಂದು ಹೇಳಲಾಗುತ್ತದೆ. ಹಾವುಗಳು ಮಾನವ ಉಪಸ್ಥಿತಿಯನ್ನು ಗ್ರಹಿಸಿದಾಗ, ಅವು ಮಾಡುವ ಮೊದಲ ಕೆಲಸವೆಂದರೆ ಓಡಿಹೋಗುವುದು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net