Cat Blessing: ಭಾರತೀಯ ಸಂಸ್ಕೃತಿಯಲ್ಲಿ ಹೊಸದಾಗಿ ಕಾರು, ಬೈಕ್ ಅಥವಾ ಯಾವುದೇ ವಾಹನವನ್ನು ಖರೀದಿಸಿದಾಗ ಅದಕ್ಕೆ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವುದು ಒಂದು ಸುಂದರ ವಾಡಿಕೆ. ಸಾಮಾನ್ಯವಾಗಿ ವಾಹನದ ಮುಂಭಾಗದಲ್ಲಿ ಕುಂಕುಮದ ಸ್ವಸ್ತಿಕ ಬಿಡಿಸುವುದು, ನಿಂಬೆಹಣ್ಣು ತುಳಿಸುವುದು ಹಾಗೂ ಮನೆಯಲ್ಲಿ ಸಣ್ಣ ಮಕ್ಕಳಿದ್ದರೆ ಅವರ ಪುಟ್ಟ ಪಾದಗಳಿಗೆ ಕುಂಕುಮ ಹಚ್ಚಿ, ಹೊಸ ವಾಹನದ ಮೇಲೆ ಅವರ ಹೆಜ್ಜೆಗುರುತು ಮೂಡಿಸುವುದು ಒಂದು ಜನಪ್ರಿಯ ಆಚರಣೆಯಾಗಿದೆ.