ನ್ಯಾಯಾಧೀಶರು ಹಿಂದಿನ ವರ್ಷಗಳಲ್ಲಿ ಅಲ್ಲಿ ದೀಪ ಹಚ್ಚಲಾಗಿದೆಯೇ ಎಂದು ದೃಢಪಡಿಸಿದ ನಂತರವೇ ದೀಪ ಬೆಳಗಿಸಲು ಅವಕಾಶ ನೀಡಬೇಕಿತ್ತು. ಹಿಂದೆ ಮಾಜಿ ಸಿಎಂಗಳಾದ ರಾಜಾಜಿ, ಕೆ ಕಾಮರಾಜ್, ಎಂ ಕರುಣಾನಿಧಿ ಹಾಗೂ ಎಂ ಜಿ ರಾಮಚಂದ್ರನ್ ಅವರ ಆಳ್ವಿಕೆಯಲ್ಲಿ ಅಂತಹ ಯಾವುದೇ ಪುರಾವೆಗಳು ಇರಲಿಲ್ಲ. ಜೆ.ಜಯಲಲಿತಾ ಅವರ ಅವಧಿಯಲ್ಲಿ ದೀಪ ಹಚ್ಚುವಂತೆ ಬೇಡಿಕೆ ಬಂದಿತ್ತು. ಅದಕ್ಕೆ ಅನುಮತಿ ನಿರಾಕರಿಸಲಾಗಿತ್ತು. ಇಂದಿನ ತೀರ್ಪು ಕಾನೂನಿಗೆ ವಿರುದ್ಧವಾಗಿದೆ ಎಂದು ಪ್ರತಿಪಾದಿಸಿದ್ದಾರೆ.