ರಾತ್ರಿ 12:06 ರ ಸುಮಾರಿಗೆ ಶೋರೂಮ್ ಒಳಗೆ ನುಗ್ಗಿದ ಆ ವ್ಯಕ್ತಿ, ರಿಸೆಪ್ಷನ್‌ನಲ್ಲಿದ್ದ ಕಂಪ್ಯೂಟರ್ ಆನ್ ಮಾಡಿ ಕುರ್ಚಿಯಲ್ಲಿ ಕುಳಿತು ಗಿರಕಿ ಹೊಡೆದಿದ್ದಾನೆ. ಬಳಿಕ ಮಿನಿ ಫ್ರಿಡ್ಜ್‌ನಿಂದ ನೀರು ಕುಡಿದು, ಅಲ್ಲಿದ್ದ ಕಾಫಿ ಯಂತ್ರದ ಸಹಾಯದಿಂದ ಸ್ವತಃ ತಾನೇ ಕಾಫಿ ಮಾಡಿಕೊಂಡು ಕುಡಿದಿದ್ದಾನೆ. ಅಷ್ಟೇ ಅಲ್ಲದೆ, ಶೋರೂಮ್‌ನ ವಾಶ್‌ರೂಮ್‌ಗೆ ತೆರಳಿ ಸ್ನಾನ ಮಾಡಿರುವ ಆ ಕಳ್ಳ, ತನ್ನ ಬಟ್ಟೆಗಳನ್ನು ಬೈಕ್ ಮೇಲೆ ಒಣಗಿಸಿ, ಬೈಕ್ ಕವರ್ ಹರಿದು ಲುಂಗಿಯಂತೆ ಧರಿಸಿಕೊಂಡಿದ್ದಾನೆ. ನಂತರ ಶೋರೂಮ್‌ನಲ್ಲಿ ಜೋರಾಗಿ ಕುಣಿದು ಕುಪ್ಪಳಿಸಿ, ಸಂಗೀತಕ್ಕೆ ತಕ್ಕಂತೆ ನೃತ್ಯ ಮಾಡಿ ಸಂಭ್ರಮಿಸಿದ್ದಾನೆ.