ಇನ್ನು, ದೇವಸ್ಥಾನಕ್ಕೆ ಹೋದ ಬಳಿಕ ದನಗಳಿಗೆ ನೀಡುವ ಹಸಿರು ಹುಲ್ಲು, ಒಣ ಮೇವು, ಭೂಸಾವನ್ನು ಬುದ್ಧಿರಾಮ್ ನೇರವಾಗಿ ಬಾಯಿಂದಲೇ ತಿನ್ನುತ್ತಾನೆ. ಭಕ್ತರು ಬುದ್ಧಿರಾಮ್ಗೆ ಹೂವಿನ ಹಾರ ಹಾಕಿ, ತಟ್ಟೆಯಲ್ಲಿ ಹುಲ್ಲು, ಬಾಳೆಹಣ್ಣು, ಲಡ್ಡು ಸೇರಿದಂತೆ ವಿವಿಧ ತಿನಿಸುಗಳನ್ನು ನೀಎಇ ಆಶೀರ್ವಾದ ಪಡೆಯುತ್ತಾರೆ. ಈ ದೃಶ್ಯ ನೋಡಲು ಸುತ್ತಮುತ್ತಲಿನ ಗ್ರಾಮಗಳಷ್ಟೇ ಅಲ್ಲದೆ ದೂರದ ಊರುಗಳಿಂದಲೂ ಜನ ಬರುತ್ತಾರೆ.