Number Plates: ಭಾರತೀಯ ವಾಹನಗಳಲ್ಲಿ ಕಂಡುಬರುವ ಇಂತಹ ನಂಬರ್ ಪ್ಲೇಟ್ಗಳು ಬಹಳ ವಿಶೇಷವಾಗಿವೆ. ಸಾಮಾನ್ಯವಾಗಿ ಆಯಾ ರಾಜ್ಯಗಳ ಹೆಸರಿನಲ್ಲಿರುವ ಅಕ್ಷರಗಳನ್ನೇ ಮೊದಲಗಿಡುವ ಸರ್ಕಾರಗಳು, ಈ ವಾಹನ ತಮ್ಮ ರಾಜ್ಯಕ್ಕೆ ಸೇರಿದ್ದು ಎಂಬುದನ್ನು ಪೊಲೀಸರಿಗೆ ಹಾಗೂ ಸವಾರರಿಗೆ ಸುಲಭವಾಗಿ ಪತ್ತೆಹಚ್ಚಲು ಸಹಕಾರಿ. ಕೇವಲ ಒಂದು ನಂಬರ್ ಪ್ಲೇಟ್ನಿಂದಲೇ ಈ ವಾಹನ ಯಾವ ರಾಜ್ಯದಿಂದ ಬಂದಿದ್ದು, ಯಾಕಾಗಿ ಇಲ್ಲಿಗೆ ಬಂತು? ಯಾರಿಗೆ ಸೇರಿದ್ದು ಎಂಬ ಸಂಪೂರ್ಣ ಮಾಹಿತಿ ಕ್ಷಣಮಾತ್ರದಲ್ಲಿ ಸಿಕ್ಕಿಬಿಡುತ್ತದೆ. ಅಷ್ಟು ಮಾಹಿತಿಯನ್ನು ಒಳಗೊಂಡಿರುವ ಈ ಸಂಖ್ಯೆಗಳ ಹಿಂದೆ ನಿಮಗೆ ಗೊತ್ತಿರದ ಕೆಲವು ಕುತೂಹಲಕಾರಿ ವಿಷಯಗಳು ಇಲ್ಲಿವೆ ನೋಡಿ.