ಮಹಾರಾಷ್ಟ್ರ: ನಮ್ಮ ದೇಶದಲ್ಲಿ ದೇವರಿಗೆ ವಿಶೇಷ ಸ್ಥಾನಮಾನ, ಗೌರವ, ನಂಬಿಕೆ, ಪೂಜೆ-ಪುನಸ್ಕಾರ ಸಲ್ಲುತ್ತದೆ. ನಮ್ಮ ದೈನಂದಿನ ಕೆಲಸಗಳಲ್ಲಿ ಯಾವುದೇ ಅಡೆ-ತಡೆಗಳು ಎದುರಾಗದೆ ಇರಲಿ ಎಂದು ಶುರುವಾಗುವ ಪ್ರಾರ್ಥನೆಗಳು, ನಮ್ಮ ಇಷ್ಟಾರ್ಥಗಳನ್ನು ಸಿದ್ಧಿಸಿಕೊಳ್ಳುವ ತನಕ ಇರುತ್ತದೆ. ಬಹುತೇಕ ವಿಷಯಗಳಲ್ಲಿ ದೇವರ ಮೊರೆ ಹೋಗುವ ನಮ್ಮ ಜನ, ಸಾಗುವ ದಾರಿ ಮಧ್ಯೆ ಸಿಗುವ ಒಂದಲ್ಲ ಒಂದು ದೇವಸ್ಥಾನಕ್ಕೆ ಕೈಮುಗಿದು, ಭಕ್ತಿಪೂರ್ವಕಾಗಿ ನಮಿಸಿ ಮುಂದೆ ಸಾಗುತ್ತಾರೆ. ಹೀಗಿದ್ದ ಮೇಲೆ, ಈ ಎರಡು ಗ್ರಾಮಗಳಲ್ಲಿ ಮಾತ್ರ ಶ್ರೀರಾಮನ ಬಂಟ ಹನುಮನ ದೇಗುಲಕ್ಕೆ ಜಾಗವಿಲ್ಲ ಎಂಬ ಸಂಗತಿ ನಿಜಕ್ಕೂ ಹಲವರ ಅಚ್ಚರಿಗೆ ಕಾರಣವಾಗಿದೆ.