ಮೃತ ದುರ್ದೈವಿಯನ್ನು ಕಲ್ಪನಾ ಮಿಶ್ರಾ (25) ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ, ಯುವತಿಯನ್ನು ಮಂಗಳವಾರ (ಆ.25) ರೇವಾದ ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಗೆ ದಾಖಲಿಸಲಾಯಿತು. ಮರುದಿನ ಆಕೆಗೆ ಸಿಸೇರಿಯನ್ ಮಾಡಲಾಯಿತು. ಈ ವೇಳೆ, ತಾಯಿ ಮತ್ತು ಮಗು ಇಬ್ಬರೂ ದಾರುಣವಾಗಿ ಸಾವಿಗೀಡಾಗಿದ್ದಾರೆ. ಈ ಮಧ್ಯೆ, ಆಪರೇಷನ್ಗೂ ಮುನ್ನ ಕಲ್ಪನಾ ತೋಡಿಕೊಂಡ ಅಳಲು ವಿಡಿಯೋದಲ್ಲಿ ಸೆರೆಯಾಗಿದೆ. ಅದೇ ಈಗ ಹಲವರ ಆಕ್ರೋಶಕ್ಕೆ ಕಾರಣವಾಗಿದೆ.