ಭಾರತದ ಈಶಾನ್ಯ ಭಾಗದ ಹೆಬ್ಬಾಗಿಲು ಎಂತಲೂ ಕರೆಸಿಕೊಂಡಿರುವ ಅಸ್ಸಾಂನ ರಾಜಕೀಯ ಇತಿಹಾಸವು ಪ್ರಾದೇಶಿಕ ಮತ್ತು ಪ್ರಾದೇಶಿಕ ಪಕ್ಷಗಳ ಮಧ್ಯದ ತೀವ್ರ ಪೈಪೋಟಿಗೆ ಸಾಕ್ಷಿಯಾಗಿದೆ. 1950ರಿಂದ ಇಲ್ಲಿಯವರೆಗೂ ಹಲವು ಪಕ್ಷಗಳು ಚುಕ್ಕಾಣಿ ಹಿಡಿದು ಅಭಿವೃದ್ಧಿ ಪಡಿಸಿವೆ. ಯಾವೆಲ್ಲ ಪಕ್ಷಗಳು ಹೆಚ್ಚು ಕಾಲ ಇದ್ದವು, ಸೋಲುಂಡವು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.
ಹೆಚ್ಚು ಅಧಿಕಾರದ ಚುಕ್ಕಾಣಿಯಲ್ಲಿದ್ದದ್ದು ಯಾವ ಪಕ್ಷ?
ಇದರಲ್ಲಿ 1952ರಿಂದ 1972ರ ವರೆಗೆ ಕಾಂಗ್ರೆಸ್ ಅಸ್ಸಾಂನಲ್ಲಿ ಅಧಿಕಾರವಹಿಸಿಕೊಂಡಿತ್ತು. 1978ರಿಂದ 2016ರ ವರೆಗೆ ನಡೆದ ಚುನಾವಣೆಯಲ್ಲಿ ಜನತಾ ಪಕ್ಷ ಅಸ್ಸಾಂ ಗಣ ಪರಿಷತ್, ಕಾಂಗ್ರೆಸ್ ಅಧಿಕಾರ ನಡೆಸಿವೆ. 2001ರಿಂದ 2011ರ ವರೆಗೆ ಸತತ ಮೂರು ಬಾರಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿದೆ.
ಅನ್ವರ್ ತೈಮೂರ್
ಭಾರತದ ಮೊದಲ ಮುಸ್ಲಿಂ ಮಹಿಳಾ ಸಿಎಂ ಆಗಿ ಅನ್ವರ್ ತೈಮೂರ್ ಅಸ್ಸಾಂನಲ್ಲಿ ಗದ್ದುಗೆ ಏರಿದ್ದರು. , 6 ಡಿಸೆಂಬರ್ 1980 ರಿಂದ 30 ಜೂನ್ 1981 ರವರೆಗೆ ಅಸ್ಸಾಂನ 8ನೇ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು. 2001 ರಿಂದ 2016 ರವರೆಗೆ ಅಸ್ಸಾಂ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದದ್ದರು.
ತರುಣ್ ಗೊಗೋಯ್
ಅಸ್ಸಾಂನಲ್ಲಿ 15 ವಿಧಾನಸಭಾ ಚುನಾವಣೆಗಳು ನಡೆದಿವೆ. ಇದರಲ್ಲಿ ಶೇ.69ರಷ್ಟು ಕಾಲ ಕಾಂಗ್ರೆಸ್ ಅಧಿಕಾರದಲ್ಲಿತ್ತು. ತರುಣ್ ಗೊಗೋಯ್ ಅವರು 15 ವರ್ಷಗಳ ಕಾಲ ಅಧಿಕಾರ ವಹಿಸಿ ದಾಖಲೆ ಬರೆದಿದ್ದರು ಅವರ ಬೆನ್ನೆಲುಬಾಗಿ ಅಂದು ಇದ್ದದ್ದೇ ಹಿಮಂತ ಬಿಸ್ವ ಶರ್ಮಾ ಅವರು.
2016ರಲ್ಲಿ ಅಧಿಕಾರ ವಹಿಸಿಕೊಂಡ ಬಿಜೆಪಿ
2016 ರಲ್ಲಿ ಸರ್ಬಾನಂದ ಸೋನೊವಾಲ್ ನಾಯಕತ್ವದಲ್ಲಿ ಬಿಜೆಪಿ ಮೊದಲ ಬಾರಿಗೆ ಅಸ್ಸಾಂನಲ್ಲಿ ಅಧಿಕಾರ ಹಿಡಿಯಿತು. 2021ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ ಸತತ ಎರಡು ಬಾರಿ ಆಡಳಿತ ನಡೆಸಿದೆ. 2011ರಲ್ಲಿ ನಡೆದ ಚುನಾವಣೆಯಲ್ಲಿ ಶೇ 76ರಷ್ಟು ಮತದಾನದೊಂದಿಗೆ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿದಿತ್ತು.
2016ರಲ್ಲಿ ಶೇ 84.72ರಷ್ಟು ಮತದಾನವಾಗಿತ್ತು. ಈ ಮೂಲಕ 2011ಕ್ಕಿಂತ ಸುಮಾರು ಶೇ 8ರಷ್ಟು ಹೆಚ್ಚು ಮತದಾನ ನಡೆದಿತ್ತು. 2016ರಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸ್ ಸೋಲಿಸಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೇರಿತ್ತು.
2021ರಲ್ಲಿ ಶೇ 82ರಷ್ಟು ಮತದಾನ ನಡೆದಿತ್ತು. ಶೇ 2ರಷ್ಟು ಮತ ಪ್ರಮಾಣ ಕುಸಿದರೂ ಬಿಜೆಪಿ ಮರಳಿ ಅಧಿಕಾರಕ್ಕೇರಿತ್ತು. ಪ್ರಸ್ತುತ ಹಿಮಂತ ಬಿಸ್ವಾ ಶರ್ಮಾ ಅವರ ನೇತೃತ್ವದಲ್ಲಿ ಬಿಜೆಪಿ ಸತತ ಎರಡನೇ ಅವಧಿಗೆ ಆಡಳಿತ ನಡೆಸುತ್ತಿದೆ.2026ರಲ್ಲಿ ಶೇ 85.64ರಷ್ಟು ಮತದಾನವಾಗಿದೆ. ಈ ಬಾರಿಯೂ ಮತದಾರ ಬಿಜೆಪಿ ಗದ್ದುಗೆಯೇರುವುದು ಖಚಿತವಾಗಿದೆ.
ಎರಡು ಬಾರಿ ಗೆದ್ದಿದ್ದ ಪ್ರಾದೇಶಿ ಪಕ್ಷ
ಅಸೋಮ್ ಗಣ ಪರಿಷತ್ ಇದು ಅಸ್ಸಾಂನ ಪ್ರಮುಖ ರಾಜಕೀಯ ಪ್ರಾದೇಶಿಕ ಪಕ್ಷ. ಅಸ್ಸಾಂ 1985 ರ ಅಸ್ಸಾಂ ಒಪ್ಪಂದದ ಬಳಿಕ ಜನ್ಮತಾಳಿದ ಈ ಪ್ರಾದೇಶಿಕ ಪಕ್ಷವು ರಾಜ್ಯದಲ್ಲಿ ಎರಡು ಬಾರಿ ಅಧಿಕಾರ ನಡೆಸಿದೆ. ಪ್ರಫುಲ್ಲ ಕುಮಾರ್ ಮಹಂತ ಅವರು ಈ ಪಕ್ಷದ ಪ್ರಬಲ ನಾಯಕರಾಗಿ ಸಿಎಂ ಹುದ್ದೆ ಅಲಂಕರಿಸಿದ್ದರು, (ಏಜೆನ್ಸೀಸ್).