ಸಾಮಾನ್ಯವಾಗಿ ಭಾರತದಲ್ಲಿ ಹಲವರು ವಿಮೆಯನ್ನು ಹೂಡಿಕೆ ಎಂದು ಭಾವಿಸುತ್ತಾರೆ. ಏಕೆಂದರೆ ಇದರಲ್ಲಿ ಲಾಭ ಮತ್ತು ರಕ್ಷಣೆ ಎರಡನ್ನೂ ನಿರೀಕ್ಷೆ ಮಾಡುತ್ತಾರೆ. ಲಾಂಗ್ ಟರ್ಮ್ ಯೋಜನೆ ಅಥವಾ ಸಂಪೂರ್ಣ ಜೀವ ವಿಮೆ ಪಾಲಿಸಿಗಳನ್ನು ಖರೀದಿಸುತ್ತಾರೆ. ಆದರೆ, ಈ ಆಯ್ಕೆಗಳು ಸಾಕಷ್ಟು ರಕ್ಷಣೆ ಮತ್ತು ಲಾಭ ಒದಗಿಸುವುದಿಲ್ಲ. ಬದಲಾಗಿ, ಸರಳ ಟರ್ಮ್ ಇನ್ಸೂರೆನ್ಸ್ ತಿಂಗಳಿಗೆ 500 ರೂ ಅಥವಾ 1000 ರೂ ಕಟ್ಟುವ 50 ಲಕ್ಷ ದಿಂದ 2 ಕೋಟಿ ವಿಮೆ ಮಾಡಿಸಿ, ಬಾಕಿ ಹಣವನ್ನು ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಒಳಿತು.