

ನವದೆಹಲಿ: ಸೋನಿಯಾ ಗಾಂಧಿಯವರ ಪುಸ್ತಕವನ್ನು (Sonia Gandhi Memoir) ಪ್ರಕಟಿಸದಂತೆ ಪೆಂಗ್ವಿನ್ ಸಂಸ್ಥೆಯ ಮೇಲೆ ಸರ್ಕಾರ ಒತ್ತಡ ಹೇರಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದು, ಇದನ್ನು ಬಿಜೆಪಿ ತಳ್ಳಿಹಾಕಿದೆ.
ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಗೆಹ್ಲೋಟ್ ಸಹ ಪೆಂಗ್ವಿನ್ ರ್ಯಾಂಡಮ್ ಹೌಸ್ ಇಂಡಿಯಾ ನಡೆಯನ್ನು ಖಂಡಿಸಿದ್ದು, ಪ್ರಪಂಚದಾದ್ಯಂತ ಅದರ ಅಂಗಸಂಸ್ಥೆಯಿಂದ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಪ್ರಕಟವಾಗುತ್ತಿರುವಾಗ ಭಾರತದಲ್ಲಿ ಪ್ರಕಟಿಸದಂತೆ ಅದನ್ನು ತಡೆಯುತ್ತಿರುವ ಶಕ್ತಿ ಯಾವುದು ಎಂದು ಪ್ರಶ್ನಿಸಿದ್ದಾರೆ. ದೇಶದ ಹಿರಿಯ ನಾಯಕಿ ಶ್ರೀಮತಿ ಸೋನಿಯಾ ಗಾಂಧೀಜಿಯವರ ಪುಸ್ತಕವನ್ನು ಒತ್ತಡದ ಮೇರೆಗೆ ಹತ್ತಿಕ್ಕುವುದು ಅಭಿವ್ಯಕ್ತಿ ಸ್ವಾತಂತ್ರ್ಯದ ಕೊಲೆಗೆ ಸಮಾನವಾಗಿದೆ ಎಂದು ಗೆಹ್ಲೋಟ್ ಕಿಡಿಕಾರಿದ್ದಾರೆ.
ಬಿಜೆಪಿ ನಾಯಕರು ಹೇಳಿದ್ದೇನು..?
ಗೌರವ್ ಗೊಗೊಯ್ ಹೇಳಿಕೆಗೆ ತಿರುಗೇಟು ನೀಡಿರುವ ಕೇಶವನ್, ಶ್ರೀಮತಿ ಸೋನಿಯಾ ಗಾಂಧಿಯವರ ಆತ್ಮಚರಿತ್ರೆಗಳ ಸಂದರ್ಭದಲ್ಲಿ ಚರ್ಚಾಸ್ಪದ ಅಂಶವೆಂದರೆ ಅವರ ಆತ್ಮಚರಿತ್ರೆಯ ಯಾವ ಭಾಗಗಳಿಗೆ ಸತ್ಯಾಸತ್ಯತೆ ಪರಿಶೀಲನೆಯ ಅಗತ್ಯವಿತ್ತು ಮತ್ತು ಏಕೆ...? ಎಂದು ಅವರು ಪ್ರಶ್ನಿಸಿದ್ದಾರೆ.
ಪುಸ್ತಕದಲ್ಲಿ ಸರಿಯಾದ ಸತ್ಯ ಮತ್ತು ಅಂಕಿಅಂಶಗಳನ್ನು ನೀಡದ ಕಾಂಗ್ರೆಸ್ ನಡವಳಿಕೆಯನ್ನು ಬಿಜೆಪಿ ನಾಯಕ ಅಜಯ್ ಅಲೋಕ್ ಟೀಕಿಸಿದ್ದಾರೆ. ಸತ್ಯಾಸತ್ಯತೆ ಪರಿಶೀಲನೆ ಮತ್ತು ವಿಶ್ವಾಸಾರ್ಹತೆ ಕಾಯ್ದುಕೊಳ್ಳಲು ಪ್ರಕಾಶಕರು ಈ ನಿರ್ಧಾರ ತಳೆದಿದ್ದಾರೆಯೇ ಹೊರತು, ಇದು ಯಾರ ಬಳಿಯೂ ತಲೆಬಾಗುವ ವಿಷಯವಲ್ಲ ಎಂದು ಅವರು ಹೇಳಿದ್ದಾರೆ.
ಆರ್‌ಎಸ್‌ಎಸ್, ಚೀನಾ, ಪ್ರಧಾನಿ ಮೋದಿ ಉಲ್ಲೇಖ...?