Maulana Mahmood Madani | ಜಿಹಾದ್ ಇರುತ್ತದೆ..ವಂದೇ ಮಾತರಂ ಸತ್ತ ಸಮುದಾಯದ ಗುರುತು: ಮೌಲಾನಾ ವಿವಾದಾತ್ಮಕ ಹೇಳಿಕೆ

Maulana Mahmood Madani | ಜಮಿಯತ್ ಉಲೇಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಮಹಮೂದ್ ಮದನಿ
Maulana Mahmood Madani | ಜಮಿಯತ್ ಉಲೇಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಮಹಮೂದ್ ಮದನಿ
Published on
ಭೋಪಾಲ್​: ನಮ್ಮ ಮೇಲೆ ದಬ್ಬಾಳಿಕೆ ನಡೆದರೆ ಜಿಹಾದ್ ಇರುತ್ತದೆ ಎಂದು ಜಮಿಯತ್ ಉಲೇಮಾ-ಎ-ಹಿಂದ್ ಅಧ್ಯಕ್ಷ ಮೌಲಾನಾ ಮಹಮೂದ್ ಮದನಿ(Maulana Mahmood Madani) ವಿವಾದತ್ಮಕ ಹೇಳಿಕೆಯನ್ನು ನೀಡಿದ್ದಾರೆ. ಅಲ್ಲದೆ, ದೇಶದಲ್ಲಿರುವ ನ್ಯಾಯಾಂಗ ಮತ್ತು ಸರ್ಕಾರ ಅಲ್ಪಸಂಖ್ಯಾತರ ಹಕ್ಕುಗಳನ್ನು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಮದನಿ, ವಿವಾದಿತ ಕಟ್ಟಡ ಬಾಬರಿ ಮಸೀದಿ ಮತ್ತು ತ್ರಿವಳಿ ತಲಾಖ್ ಪ್ರಕರಣಗಳು ಸೇರಿದಂತೆ ಇತ್ತೀಚಿನ ನ್ಯಾಯಾಲಯದ ತೀರ್ಪುಗಳು ಸರ್ಕಾರದ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಸೂಚಿಸುತ್ತವೆ. ಅಲ್ಲದೆ, ಇತ್ತೀಚಿನ ವರ್ಷಗಳಲ್ಲಿ ಸಂವಿಧಾನದಲ್ಲಿ ಖಾತರಿಪಡಿಸಲಾದ ಅಲ್ಪಸಂಖ್ಯಾತರ ಹಕ್ಕುಗಳನ್ನು ಬಹಿರಂಗವಾಗಿ ಉಲ್ಲಂಘಿಸುವ ಇಂತಹ ಅನೇಕ ನಿರ್ಧಾರಗಳು ಹೊರಹೊಮ್ಮಿವೆ ಎಂದಿದ್ದಾರೆ.

ಉನ್ನತ ನ್ಯಾಯಾಲಯವು ಸುಪ್ರೀಂ ಆಗಲು ಅರ್ಹವಲ್ಲ..?

1991 ರ ಪೂಜಾ ಸ್ಥಳಗಳ ಕಾಯ್ದೆಯ ಹೊರತಾಗಿಯೂ ನಡೆಯುತ್ತಿರುವ ಪ್ರಕರಣಗಳನ್ನು ಉಲ್ಲೇಖಿಸಿದ ಮದನಿ, ಸಂವಿಧಾನವನ್ನು ಅಲ್ಲಿ ರಕ್ಷಿಸುವವರೆಗೆ ಮಾತ್ರ ಸುಪ್ರೀಂಕೋರ್ಟ್ ಅನ್ನು ಸುಪ್ರೀಂ ಎಂದು ಕರೆಯಲು ಅರ್ಹತೆ ಇದೆ. ಅದರೆ, ಅದು ಸಂಭವಿಸದಿದ್ದರೆ, ಸರ್ವೋಚ್ಚ ಎಂದು ಕರೆಯಲು ಅರ್ಹವಲ್ಲ ಎನ್ನುವ ಮೂಲಕ ಮದನಿ ವಿವಾದವನ್ನು ಸೃಷ್ಟಿಸಿದ್ದಾರೆ.
ಭಾರತದಲ್ಲಿ ಮುಸ್ಲಿಮರ ಬಗ್ಗೆ ಸಾರ್ವಜನಿಕ ಭಾವನೆಗಳ ಬಗ್ಗೆ ಮಾತನಾಡಿದ ಮದನಿ, ಶೇ.10 ರಷ್ಟು ಜನರು ಅವರನ್ನು ಬೆಂಬಲಿಸುತ್ತಿದ್ದಾರೆ. ಅಲ್ಲದೆ, ಶೇ.30 ರಷ್ಟು ಜನರು ಅವರನ್ನು ವಿರೋಧಿಸುತ್ತಿದ್ದಾರೆ. ಆದರೆ ಶೇ 60 ರಷ್ಟು ಜನರು ಮೌನವಾಗಿದ್ದಾರೆ. ಈ ಮೂಕವಾಗಿರುವ ಬಹುಸಂಖ್ಯಾತರೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಮುಸ್ಲಿಮರನ್ನು ಒತ್ತಾಯಿಸಿದ್ದಾರೆ. ಅದರೆ, ಈ ಶೇ.60 ರಷ್ಟು ಜನರು ಮುಸ್ಲಿಮರ ವಿರುದ್ಧ ತಿರುಗಿದರೆ, ದೇಶದಲ್ಲಿ ದೊಡ್ಡ ಅಪಾಯ ಎದುರಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಜಿಹಾದ್ ಯಾವಾಗಲೂ ಪವಿತ್ರ - ಮದನಿ

ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಎಜುಕೇಶನ್ ಜಿಹಾದ್ ಮತ್ತು ಸ್ಪಿಟ್ ಜಿಹಾದ್ ಮುಂತಾದ ಪದಗಳನ್ನು ಮುಸ್ಲಿಂ ನಂಬಿಕೆ ಮತ್ತು ಗುರುತನ್ನು ಅವಮಾನಿಸುವ ಉದ್ದೇಶದಿಂದ ಬಳಸಲಾಗುತ್ತಿದೆ. ಇಸ್ಲಾಂ ಮತ್ತು ಮುಸ್ಲಿಮರ ಶತ್ರುಗಳು ಜಿಹಾದ್ ಅನ್ನು ನಿಂದನೆ, ಸಂಘರ್ಷ ಮತ್ತು ಹಿಂಸೆಯ ಸಮಾನಾರ್ಥಕ ಪದವನ್ನಾಗಿ ಮಾಡಿದ್ದಾರೆ. ಅಲ್ಲದೆ, ಸರ್ಕಾರ ಮತ್ತು ಮಾಧ್ಯಮಗಳಲ್ಲಿನ ಜವಾಬ್ದಾರಿಯುತ ಧ್ವನಿಗಳು ಇಂತಹ ಪದಗಳನ್ನು ಬಳಸುವುದರಲ್ಲಿ ನಾಚಿಕೆಪಡುವುದಿಲ್ಲ ಎಂದು ಮದನಿ ಹೇಳಿದ್ದಾರೆ.
ಕುರಾನ್ ಜಿಹಾದ್​ನ್ನು ವೈಯಕ್ತಿಕ ಕರ್ತವ್ಯ ಮತ್ತು ಸಮಾಜದ ಕಲ್ಯಾಣ ಸೇರಿದಂತೆ ಬಹು ಸಂದರ್ಭಗಳಲ್ಲಿ ಉಲ್ಲೇಖಿಸುತ್ತದೆ. ಈ ಪದವು ಯುದ್ಧಕ್ಕೆ ಸಂಬಂಧಿಸಿದ್ದರೂ ಸಹ, ಅದು ದಬ್ಬಾಳಿಕೆಯನ್ನು ಕೊನೆಗೊಳಿಸುವುದಕ್ಕೆ ಸಂಬಂಧಿಸಿದೆ. ಅಲ್ಲದೆ, ಜಿಹಾದ್​ ಅನ್ಯಾಯದ ವಿರುದ್ಧ ಪ್ರತಿರೋಧವು ನಂಬಿಕೆಯ ಅವಿಭಾಜ್ಯ ಅಂಗವಾಗಿದೆ ಎಂದು ಮದನಿ ಪ್ರತಿಪಾದಿಸಿದ್ದಾರೆ.

ವಂದೇ ಮಾತರಂ ಬಗ್ಗೆ ಮದನಿ

ವಂದೇ ಮಾತರಂ ಬಗ್ಗೆ ಹಾಡಿದ ಹೇಳಿಕೆಗಳಿಂದ ತೀವ್ರ ಚರ್ಚೆಗೆ ಕಾರಣವಾಗುತ್ತಿದೆ. ಅವರು ವಂದೇ ಮಾತರಂ ಹೇಳಿ ಎಂದು ಹೇಳಿದರೆ, ಅವರು ಅದನ್ನು ಓದಲು ಪ್ರಾರಂಭಿಸುತ್ತಾರೆ. ಇದು ಸತ್ತ ಸಮುದಾಯದ ಗುರುತು ಆಗಿರುತ್ತದೆ. ನಾವು ಜೀವಂತ ಸಮುದಾಯವಾಗಿದ್ದರೆ, ನಾವು ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಹೇಳುವ ಮೂಲಕ ವಿವಾದವನ್ನು ಸೃಷ್ಟಿಸಿದ್ದಾರೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net