ಬಂಗಾಳದಲ್ಲಿ ಮತದಾರರಿಗಿಂತ ಭದ್ರತಾ ಸಿಬ್ಬಂದಿ ಹೆಚ್ಚು; ಕೇಂದ್ರದ ಅತಿಯಾದ ಸಿಬ್ಬಂದಿ ನಿಯೋಜನೆ ವಿರುದ್ಧ ಉದ್ದವ್ ಠಾಕ್ರೆ ವಾಗ್ದಾಳಿ | Uddhav Thackeray

ಶಿವಸೇನೆ(ಯುಬಿಟಿ) ಮುಖ್ಯಸ್ದ ಉದ್ದವ್ ಠಾಕ್ರೆ
ಶಿವಸೇನೆ(ಯುಬಿಟಿ) ಮುಖ್ಯಸ್ದ ಉದ್ದವ್ ಠಾಕ್ರೆ
Published on
ಮುಂಬೈ: ಸಿಎಂ ಮಮತಾ ಬ್ಯಾನರ್ಜಿಯವರು ಬಿಜೆಪಿ ವಿರುದ್ಧ ಧೈರ್ಯಶಾಲಿ ಹೆಣ್ಣು ಹುಲಿಯಂತೆ ಹೋರಾಟ ಮಾಡ್ತಿದ್ದು, ಅವರನ್ನು ಬೆದರಿಸಲು ಕೇಂದ್ರ ಸರ್ಕಾರ ಹಿಂಸಾಚಾರ ಪೀಡಿತ ಮಣಿಪುರಕ್ಕಿಂತ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ಚುನಾವಣೆ ನಡೆಯುವ ಪಶ್ಚಿಮ ಬಂಗಾಳದಲ್ಲಿ ನಿಯೋಜಿಸಿದೆ ಎಂದು ಶಿವಸೇನೆ(ಯುಬಿಟಿ) ಮುಖ್ಯಸ್ದ ಉದ್ದವ್ ಠಾಕ್ರೆ(Uddhav Thackeray) ವಾಗ್ದಾಳಿ ನಡೆಸಿದ್ದಾರೆ.
ಶಿವಸೇನೆ (ಯುಬಿಟಿ)ಯ ಕಾರ್ಮಿಕರ ಸಂಘದ 48ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಕೇಂದ್ರ ಮೀಸಲು ಪೊಲೀಸ್ ಪಡೆಗಳನ್ನು ನಿಯೋಜಿಸಿದೆ. ಆದರೆ ಮಣಿಪುರದಲ್ಲಿ ಕೇವಲ 30,000 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಪಶ್ಚಿಮ ಬಂಗಾಳದ ಜನರು ಟಿಎಂಸಿಗೆ ಮತ ಹಾಕಿ ಮತ್ತೊಮ್ಮೆ ಅವರನ್ನು ಆಯ್ಕೆ ಮಾಡಬೇಕು ಎಂದು ಕರೆ ನೀಡಿದ್ದಾರೆ.
ಇನ್ನೂ ಬಂಗಾಳದಲ್ಲಿ ಮತದಾನದ ದಿನದಂದು ಮತದಾರರಿಗಿಂತ ಹೆಚ್ಚಿನ ಭದ್ರತಾ ಸಿಬ್ಬಂದಿ ಇರುತ್ತಾರೆ. ಹಾಗಾದರೆ, ಮತದಾರರು ನಿರ್ಭಯವಾಗಿ ಹೊರಬಂದು ಮತ ಚಲಾಯಿಸುವುದು ಹೇಗೆ? ಮತದಾರರ ಮನಸ್ಸಿನಲ್ಲಿ ಭದ್ರತೆ ಅಥವಾ ಭಯವನ್ನು ಮೂಡಿಸಲು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಕೇಂದ್ರವನ್ನು ಪ್ರಶ್ನಿಸಿದ್ದಾರೆ.
ನಾವು ಯಾವುದೇ ರಾಜ್ಯದಲ್ಲಿ ಇಂತಹ ವಾತಾವರಣವನ್ನು ನೋಡಿಲ್ಲ. ಬಿಜೆಪಿಗೆ ಕೊಕ್ಕೆ ಅಥವಾ ವಂಚನೆಯಿಂದ ಚುನಾವಣೆ ಗೆಲ್ಲುವ ಏಕೈಕ ಉದ್ದೇಶವಿದೆ. ಬಿಜೆಪಿಗೆ ಪ್ರಜಾಪ್ರಭುತ್ವ ಮತ್ತು ಪ್ರಜಾಸತ್ತಾತ್ಮಕ, ಮುಕ್ತ ಮತ್ತು ನ್ಯಾಯಯುತ ಚುನಾವಣಾ ಪ್ರಕ್ರಿಯೆಯ ಬಗ್ಗೆ ಯಾವುದೇ ಗೌರವವಿಲ್ಲ. ಇದು ಎಲ್ಲಾ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ದುರ್ಬಲಗೊಳಿಸಿದೆ ಎಂದು ಕಿಡಿಕಾರಿದ್ದಾರೆ.
ಚುನಾವಣಾ ಆಯೋಗ ಮತ್ತು ಇತರ ಸಂಸ್ಥೆಗಳ ಸಹಾಯದಿಂದ ಬಿಜೆಪಿಯು ಚುನಾವಣೆಗಳನ್ನು ತಿರುಚಿರುವುದರಿಂದ ಚುನಾವಣೆಗಳು ನ್ಯಾಯಯುತವಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿರುವ ಅವರು, ಮಮತಾ ಬ್ಯಾನರ್ಜಿ ಚುನಾವಣೆಯಲ್ಲಿ ಸೋತರೆ, ಪ್ರಧಾನಿ ಅಥವಾ ಮುಖ್ಯಮಂತ್ರಿ ಅಥವಾ ಬಿಜೆಪಿಗೆ ಸಹಾಯ ಮಾಡುತ್ತಿರುವ ಕೇಂದ್ರ ಸಂಸ್ಥೆಗಳು ಯಾರು ಕ್ರೆಡಿಟ್ ತೆಗೆದುಕೊಳ್ಳುತ್ತಾರೆ? ಎಂದಿದ್ದಾರೆ.
ಮಹಾರಾಷ್ಟ್ರದಲ್ಲಿ ಸ್ವಯಂ ಘೋಷಿತ ಬಾಬಾಗಳು ಮಹಿಳೆಯರನ್ನು ಶೋಷಿಸುತ್ತಿದ್ದಾರೆ. ಗಂಭೀರ ಕಾನೂನು ಸುವ್ಯವಸ್ಥೆ ಸಮಸ್ಯೆ ಇದೆ. ಆದರೆ ನಮ್ಮ ಮುಖ್ಯಮಂತ್ರಿ ಪಶ್ಚಿಮ ಬಂಗಾಳದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಅವರ ಆದ್ಯತೆ ಏನಾಗಿರಬೇಕು, ಅವರ ಸ್ವಂತ ರಾಜ್ಯ ಅಥವಾ ಚುನಾವಣೆ ನಡೆಯುತ್ತಿರುವ ಇನ್ನೊಂದು ರಾಜ್ಯ? ಎಂದು ಸಿಎಂ ದೇವೆಂದ್ರ ಫಡ್ನವೀಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net