ಪ್ರೊ. ಮೇರ್‌ಹೋಫರ್ ಹೇಳುವಂತೆ, ನಾವು ಇಲ್ಲಿ ರಚಿಸಿರುವ ರಚನೆಯು ತುಂಬಾ ಸೂಕ್ಷ್ಮವಾಗಿದ್ದು, ಅದನ್ನು ಆಪ್ಟಿಕಲ್ ಮೈಕ್ರೋಸ್ಕೋಪ್‌ಗಳಿಂದ ನೋಡಲಾಗುವುದಿಲ್ಲ. ಬದಲಾಗಿ ಎಲೆಕ್ಟ್ರಾನ್ ಮೈಕ್ರೋಸ್ಕೋಪ್‌ನಿಂದ ಮಾತ್ರ ಇದನ್ನು ಗುರುತಿಸಬಹುದು. ಪರಮಾಣುಗಳ ಮಟ್ಟದಲ್ಲಿ ವಿನ್ಯಾಸ ಮಾಡುವುದು ಇಂದು ಸಾಧ್ಯವಿದ್ದರೂ, ಅವುಗಳ ದತ್ತಾಂಶವನ್ನು ಸಂಗ್ರಹಿಸಿಡಲು ಬೇಕಾದ ಸ್ಥಿರತೆಯನ್ನು ಹೊಂದಿರುವುದಿಲ್ಲ. ಆದರೆ ಈ ಸೆರಾಮಿಕ್ ಆಧಾರಿತ ಕೋಡ್ ಅತ್ಯಂತ ಸ್ಥಿರವಾಗಿದೆ ಎಂದು ಬಹಿರಂಗಪಡಿಸಿದರು.