ಮುಟ್ಟಿದರೆ ಸಾಕು ಸಾವು ಗ್ಯಾರಂಟಿ! ರೆಕ್ಕೆಯಲ್ಲೇ ಯಮನನ್ನು ಅಡಗಿಸಿಟ್ಟುಕೊಂಡಿದೆ ಈ ಸುಂದರ ಹಕ್ಕಿ.. Hooded Pitohui

Hooded Pitohui ಸಾಂದರ್ಭಿಕ ಚಿತ್ರ
Hooded Pitohui ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ವಿಶ್ವದ ಅತ್ಯಂತ ವಿಷಕಾರಿ ಜೀವಿಗಳ ಬಗ್ಗೆ ಮಾತನಾಡುವಾಗ ಸಾಮಾನ್ಯವಾಗಿ ನಮ್ಮ ಕಣ್ಣಮುಂದೆ ಬರುವುದು ಸರೀಸೃಪಗಳು
  • ಆಕಾಶದಲ್ಲಿ ಹಾರಾಡುವ ಸುಂದರ ಪಕ್ಷಿಗಳಲ್ಲಿ ಪ್ರಾಣಾಂತಿಕ ವಿಷ ಹೊಂದಿದೆ ಎಂದು ನೀವು ಕೇಳಿದ್ದೀರಾ?
  • ಹೂಡೆಡ್ ಪಿಟೋಹುಯಿ ಬ್ಯಾಟ್ರೋಟಾಕ್ಸಿನ್ ಎಂಬ ಅತ್ಯಂತ ವಿಷಕಾರಿ ವಸ್ತುವನ್ನು ಹೊಂದಿರುತ್ತದೆ
Hooded Pitohui: ವಿಶ್ವದ ಅತ್ಯಂತ ವಿಷಕಾರಿ ಜೀವಿಗಳ ಬಗ್ಗೆ ಮಾತನಾಡುವಾಗ ಸಾಮಾನ್ಯವಾಗಿ ನಮ್ಮ ಕಣ್ಣಮುಂದೆ ಬರುವುದು ಹೆಬ್ಬಾವು, ಕಾಳಿಂಗ ಸರ್ಪ, ಚೇಳು ಅಥವಾ ಕೆಲವು ಜಾತಿಯ ಕೀಟಗಳು ಮತ್ತು ಜೇಡಗಳು. ಆದರೆ, ಕೇವಲ ಸರೀಸೃಪಗಳು ಅಥವಾ ಕೀಟಗಳು ಮಾತ್ರವಲ್ಲ, ಆಕಾಶದಲ್ಲಿ ಹಾರಾಡುವ ಸುಂದರ ಪಕ್ಷಿಗಳೂ ಸಹ ಪ್ರಾಣಾಂತಿಕ ವಿಷವನ್ನು ಹೊಂದಿರಬಹುದು ಎಂದರೆ ಯಾರು ತಾನೆ ಆಘಾತಕ್ಕೊಳಗಾಗುವುದಿಲ್ಲ? ಹೌದು, ಪ್ರಕೃತಿಯ ಈ ಅದ್ಭುತ ಮತ್ತು ನಿಗೂಢ ಸೃಷ್ಟಿಗೆ ಸಾಕ್ಷಿಯೇ ‘ಹೂಡೆಡ್ ಪಿಟೊಹುಯಿ’ (Hooded Pitohui) ಪಕ್ಷಿ. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿಯೂ ಇದು ವಿಶ್ವದ ಅತ್ಯಂತ ವಿಷಕಾರಿ ಪಕ್ಷಿ ಎಂದು ದಾಖಲಾಗಿದೆ.
ವಿಜ್ಞಾನಿ ಜ್ಯಾಕ್ ಡಂಬೇಕರ್ ಈ ಪಕ್ಷಿ ಮತ್ತು ಪ್ರಕೃತಿಯ ಈ ಅದ್ಭುತವನ್ನು ಹುಡುಕಲು ಹೊರಟರು. 1980 ರ ದಶಕದಲ್ಲಿ, ಅವರು ನ್ಯೂಗಿನಿಯಾವನ್ನು ಅನ್ವೇಷಿಸುತ್ತಿದ್ದರು. ನಂತರ, ಅವರು ಈ ವಿಶಿಷ್ಟ ಪಕ್ಷಿಯನ್ನು ನೋಡಿ ತಮ್ಮ ಕೈಯಲ್ಲಿ ಹಿಡಿದುಕೊಂಡು ಚಿತ್ರವನ್ನು ತೆಗೆದುಕೊಂಡರು. ಸ್ವಲ್ಪ ಸಮಯದ ನಂತರ, ಅವರ ಕಣ್ಣುಗಳು, ಕೈಗಳು ಮತ್ತು ಬಾಯಿ ಉರಿಯಲು ಪ್ರಾರಂಭಿಸಿತು. ಶೀಘ್ರದಲ್ಲೇ, ಅವರ ಸ್ಥತಿ ಗಂಭೀರವಾಯಿತು. ಅವರ ದೇಹ ಇದ್ದಕ್ಕಿಂದಂತಲೇ ಮರಗಟ್ಟಿದವು. ಸಕಾಲಿಕ ಚಿಕಿತ್ಸೆಯಿಂದ ಅವರು ಬದುಕಿದರು. ತದನಂತರ ಈ ಹಕ್ಕಿಯ ರಕ್ಕೆಗಳು ಮತ್ತು ಚರ್ಮದಲ್ಲಿ ವಿಷವಿದೆ ಎಂಬುದನ್ನು ಅರಿತುಕೊಂಡರು.
ಡಂಬೇಕರ್ ಮತ್ತು ಅವರ ತಂಡವು ಮೊದಲು 1992 ರ ಸಂಶೋಧನಾ ಪ್ರಬಂಧದಲ್ಲಿ ಪಕ್ಷಿಯ ಬಗ್ಗೆ ವಿವರಿಸಿದರು. ಹೂಡೆಡ್ ಪಿಟೋಹುಯಿ ಬ್ಯಾಟ್ರೋಟಾಕ್ಸಿನ್ ಎಂಬ ಅತ್ಯಂತ ವಿಷಕಾರಿ ವಸ್ತುವನ್ನು ಹೊಂದಿರುತ್ತದೆ. ಈ ವಿಷವು ದಟ್ಟ ಕಾಡುಗಳಲ್ಲಿರುವ ಕೆಲವು ಕಪ್ಪೆಗಳಲ್ಲಿಯೂ ಕಂಡುಬರುತ್ತದೆ. ಈ
ಈ ವಿಷವು ಪಕ್ಷಿಯನ್ನು ಪರಭಕ್ಷಕಗಳಿಂದ ರಕ್ಷಿಸುತ್ತದೆ. ಹಾಗಾಗಿ ಇತರ ಪ್ರಾಣಿಗಳು ಮತ್ತು ಪಕ್ಷಿಗಳು ಹೂಡೆಡ್ ಪಿಟೋಹುಯಿಯನ್ನು ಹಿಂಬಾಲಿಸುವುದಿಲ್ಲ. ಒಂದು ವೇಳೆ ಯಾವುದೇ ಒಂದು ಪ್ರಾಣಿ ಅಥವಾ ಪಕ್ಷಿ ಅದನ್ನು ಬೇಟೆಯಾಡಲು ಪ್ರಯತ್ನಿಸಿದರೆ, ಅದು ಬದುಕುಳಿಯುವುದಿಲ್ಲ.
ಸಂಶೋಧನೆಯ ಪ್ರಕಾರ, ಈ ವಿಷವು ಈ ಹಕ್ಕಿಯ ದೇಹದಲ್ಲಿ ಉತ್ಪತ್ತಿಯಾಗುವುದಿಲ್ಲ. ಬದಲಾಗಿ ಈ ಹಕ್ಕಿ ಮೆಲಿರಿಡ್ ಜೀರುಂಡೆಗಳು ಎಂದು ಕರೆಯಲ್ಪಡುವ ವಿಷಕಾರಿ ಕೀಟಗಳನ್ನು ತಿನ್ನುತ್ತದೆ. ಈ ಕೀಟಗಳು ಬ್ಯಾಟ್ರೋಟಾಕ್ಸಿನ್ ಅನ್ನು ಹೊಂದಿರುವುದರಿಂದ ಈ ಹಕ್ಕಿ ಈ ಕೀಟವನ್ನು ತಿಂದಾಗ ಅದರ ಚರ್ಮ ಮತ್ತು ರೆಕ್ಕೆಗಳಲ್ಲಿ ವಿಷವು ಉತ್ಪತ್ತಿಯಾಗುತ್ತದೆ.
ಮನುಷ್ಯರು ಇದನ್ನು ಮುಟ್ಟುವುದು ಕೂಡ ಅಪಾಯಕಾರಿ. ಆರಂಭಿಕವಾಗಿ ಚಿಕಿತ್ಸೆ ನೀಡದಿದ್ದರೆ, ಆ ವ್ಯಕ್ತಿ ಪ್ರಜ್ಞಾಹೀನನಾಗುತ್ತಾನೆ ಮತ್ತು ಚೇತರಿಸಿಕೊಳ್ಳುವ ಸಾಧ್ಯತೆಗಳು ತುಂಬಾ ಕಡಿಮೆ. ಆದಾಗ್ಯೂ, ಈ ಹಕ್ಕಿ ಪ್ರಕಾಶಮಾನವಾದ ಕಪ್ಪು ಮತ್ತು ಕಿತ್ತಳೆ ಬಣ್ಣವನ್ನು ಹೊಂದಿದೆ. ಈ ಬಣ್ಣವು ಇತರ ಪ್ರಾಣಿಗಳು ಮತ್ತು ಪಕ್ಷಿಗಳನ್ನು ಎಚ್ಚರಿಸುತ್ತದೆ. ನ್ಯೂ ಗಿನಿಯಾದ ಸ್ಥಳೀಯ ಜನರು ಸಹ ಈ ಹಕ್ಕಿಯನ್ನು ಬೆನ್ನಟ್ಟುವುದಿಲ್ಲ. ಸ್ಥಳೀಯ ಬುಡಕಟ್ಟು ಜನಾಂಗದವರು ಈ ಹಕ್ಕಿಯನ್ನು ಕಸದ ಹಕ್ಕಿ ಎಂದು ಕರೆಯುತ್ತಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net