ಇತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಇತ್ತೀಚೆಗೆ ಸಲ್ಲಿಸಿದ ಸಂಧಾನದ ಪ್ರಸ್ತಾವನೆಯನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ವೈಟ್ ಹೌಸ್‌ನಿಂದ ಫ್ಲೋರಿಡಾಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಇರಾನ್ ಒಪ್ಪಂದ ಮಾಡಿಕೊಳ್ಳಲು ಬಯಸುತ್ತಿದೆ ನಿಜ, ಆದರೆ ಅವರು ಕೇಳುತ್ತಿರುವ ರಿಯಾಯಿತಿಗಳನ್ನು ನೀಡಲು ನಾನು ಸಿದ್ಧನಿಲ್ಲ. ಅವರ ಪ್ರಸ್ತಾವನೆಯಿಂದ ನನಗೆ ತೃಪ್ತಿಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.