ಲಭ್ಯ ಅಂಕಿಅಂಶಗಳ ಪ್ರಕಾರ, ಇಡೀ ಸಂಘರ್ಷದಲ್ಲಿ 7000ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. 40 ಸಾವಿರಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಲೆಬನಾನ್ನಲ್ಲಿ ಹೆಚ್ಚು ಜನ (3593) ಪ್ರಾಣ ಕಳೆದುಕೊಂಡಿದ್ದಾರೆ. ಇರಾನ್ನಲ್ಲಿ 3468 ಜನ ಸಾವಿಗೀಡಾಗಿದ್ದ್ದು, 26500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇರಾನ್ ನಡೆಸಿದ ದಾಳಿಗಳಲ್ಲಿ ಇಸ್ರೇಲ್ನ 26 ನಾಗರಿಕರು, ಅಮೆರಿಕದ ಮಿಲಿಟರಿಯ 13 ಸೈನಿಕರು, ಯುಎಇಯ 12, ಕುವೈತ್ನ 7, ಸೌದಿ ಅರೇಬಿಯಾದ 3, ಬಹ್ರೇನ್ನ 3 ಮತ್ತು ಒಮನ್ನ 3 ಮಂದಿ ಪ್ರಾಣ ಕಳೆದು ಕೊಂಡಿದ್ದಾರೆ. ಜತೆಗೆ, ಜೋರ್ಡಾನ್, ಇರಾಕ್, ಸಿರಿಯಾಗಳಲ್ಲೂ ಸಾವುನೋವು ಸಂಭವಿಸಿವೆ.