ದೇಶದ ಯುವಜನರ ಧ್ವನಿ ಮತ್ತು ಆಕಾಂಕ್ಷೆ ಝೂಟ್ ಕಿ ಗೂಂಜ್​ ಅನ್ನು ಸೋಲಿಸುತ್ತವೆ: ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ಮೋದಿ ಕಿಡಿ | PM Modi

ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Published on: 
ನವದೆಹಲಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರ 'ಛತ್ರೋಂ ಕಿ ಗೂಂಜ್' ವಿದ್ಯಾರ್ಥಿಗಳ ಸಂಪರ್ಕ ಅಭಿಯಾನವನ್ನು ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ(PM Modi), ದೇಶದ ಯುವಜನರ ಧ್ವನಿ ಮತ್ತು ಆಕಾಂಕ್ಷೆಗಳು ಝೂತ್ ಕಿ ಗೂಂಜ್ ಅನ್ನು ಸೋಲಿಸುತ್ತವೆ ಎಂದು ವಾಗ್ದಾಳಿ ನಡೆಸಿದ್ದಾರೆ.
ವಡೋದರಾದಲ್ಲಿ ನಡೆದ 'ನಮೋ ಫಾರ್ ವಿಕ್ಷಿತ್ ಭಾರತ್' ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಂದು ಬೀದಿ ಮೂಲೆಯಲ್ಲಿಯೂ ಇಂದು ಜನರು ಸುಳ್ಳಿನ ಕೂಗಿನಿಂದ ನಿಮ್ಮನ್ನು ದಾರಿ ತಪ್ಪಿಸಲು ಪ್ರಯತ್ನಿಸುವುದನ್ನು ನೀವು ಕಾಣಬಹುದು. ಆದರೆ, ಭಾರತದ ಯುವಜನತೆ ಸತ್ಯದ ಪ್ರಬಲ ಕರೆಗೆ ಪ್ರೇರೇಪಿತರಾಗಿ ಮುನ್ನಡೆಯುತ್ತಾರೆ. ಅವರು ಆ ಕರೆಯೊಂದಿಗೆ ಸಾಗುತ್ತಾರೆ ಮತ್ತು ಅದಕ್ಕಾಗಿ ಶ್ರಮಿಸುತ್ತಾರೆ ಎಂದಿದ್ದಾರೆ.
ಮಂಗಳವಾರ(ಸೆ. 08) ತಾವು ಉದ್ಘಾಟಿಸಿದ ವೆಸ್ಟರ್ನ್ ಡೆಡಿಕೇಟೆಡ್ ಫ್ರೈಟ್ ಕಾರಿಡಾರ್(ಡಬ್ಲ್ಯೂಡಿಎಫ್‌ಸಿ)ನ ಕೊನೆಯ ಮೂರು ವಿಭಾಗಗಳ ಪೂರ್ಣಗೊಳಿಸುವಿಕೆಯನ್ನು ಎತ್ತಿ ತೋರಿಸಿದ ಅವರು, ಈ ಯೋಜನೆಯು ಕಳೆದ 12 ವರ್ಷಗಳಲ್ಲಿ ಭಾರತದ ಕೆಲಸದ ಸಂಸ್ಕೃತಿಯಲ್ಲಿನ ರೂಪಾಂತರವನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ಕಳೆದ 12 ವರ್ಷಗಳಲ್ಲಿ ದೇಶದ ಕೆಲಸದ ಸಂಸ್ಕೃತಿ ಹೇಗೆ ರೂಪಾಂತರಗೊಂಡಿದೆ ಎಂಬುದಕ್ಕೆ ಮೀಸಲಾದ ಸರಕು ಸಾಗಣೆ ಕಾರಿಡಾರ್ ಸಾಕ್ಷಿಯಾಗಿದೆ. ಈ ಯೋಜನೆಯನ್ನು ಮೊದಲು 2004ರಲ್ಲಿ ಪ್ರಸ್ತಾಪಿಸಲಾಯಿತು. ಮತ್ತು ಅದನ್ನು ಕಾರ್ಯಗತಗೊಳಿಸಲು 2006ರಲ್ಲಿ ವಿಶೇಷ ಕಂಪನಿಯನ್ನು ರಚಿಸಲಾಯಿತು ಎಂಬುದನ್ನು ನೆನಪಿಸಿಕೊಂಡರು.
ಆದಾಗ್ಯೂ 2014ರವರೆಗೂ, ಫೈಲ್‌ಗಳು ಹಿಂದಕ್ಕೆ ಮತ್ತು ಮುಂದಕ್ಕೆ ಚಲಿಸುತ್ತಿದ್ದವು. ಅವು ಒಂದು ಟೇಬಲ್‌ನಿಂದ ಇನ್ನೊಂದು ಟೇಬಲ್‌ಗೆ ಪ್ರಯಾಣಿಸುತ್ತಿದ್ದವು. ವಿಪರ್ಯಾಸವನ್ನು ನೋಡಿ, ಈ ಫೈಲ್‌ಗಳಿಗೂ ಸಹ ಒಂದು ಮೀಸಲು ಕಾರಿಡಾರ್‌ನ (ಪ್ರತ್ಯೇಕ ಮಾರ್ಗದ) ಸೌಲಭ್ಯ ಸಿಗಲಿಲ್ಲ ಎಂದು ಹೇಳಿದ್ದಾರೆ.
ನಮ್ಮ ಯುವ ಪೀಳಿಗೆ AI ಯುಗಕ್ಕೆ ಸಿದ್ಧವಾಗಬೇಕೆಂದು ನಾವು ಬಯಸುತ್ತೇವೆ. AI ಕೌಶಲ್ಯಗಳು ಕೇವಲ ಐಟಿ ವಲಯಕ್ಕೆ ಸೀಮಿತವಾಗಿರಬಾರದು. ವಿವಿಧ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿರುವ ಯುವಕರು ಆರೋಗ್ಯ ರಕ್ಷಣೆಯಲ್ಲಿ ಪರಿಹಾರಗಳನ್ನು ಅಭಿವೃದ್ಧಿಪಡಿಸಲು, ಉತ್ಪಾದನೆಯಲ್ಲಿ ಉತ್ಪಾದಕತೆಯನ್ನು ಸುಧಾರಿಸಲು ಅಥವಾ ರೊಬೊಟಿಕ್ಸ್ ಸ್ಟಾರ್ಟ್‌ಅಪ್‌ಗಳನ್ನು ಪ್ರಾರಂಭಿಸಲು AI ಅನ್ನು ಬಳಸಬಹುದು ಎಂದು ತಿಳಿಸಿದ್ದಾರೆ (ಏಜೆನ್ಸೀಸ್).