ಕೋಲ್ಕತ್ತಾದ ಎಸ್‌ಪ್ಲನೇಡ್‌ನ ‘ವೈ-ಚಾನೆಲ್ ವೃತ್ತದಲ್ಲಿ ಮಮತಾ ತಮ್ಮ ಹಿರಿಯ ನಾಯಕರೊಂದಿಗೆ ಧರಣಿ ಕುಳಿತಿದ್ದಾರೆ. ಮೊದಲು ರಾಣಿ ರಾಶ್ಮೋನಿ ರಸ್ತೆಯಲ್ಲಿ ಪ್ರತಿಭಟನೆಗೆ ಪ್ಲಾನ್ ಮಾಡಲಾಗಿತ್ತಾದರೂ, ಕೋಲ್ಕತ್ತಾ ಪೊಲೀಸರು ಇದಕ್ಕೆ ಕಟ್ಟುನಿಟ್ಟಿನ ಅನುಮತಿ ನಿರಾಕರಿಸಿದ್ದರು. ಪೊಲೀಸರ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಮಮತಾ, ವಿಧಾನಸಭೆ ಚುನಾವಣೆ ಮುಗಿದ ಮೇಲೆ ನಮ್ಮ ೧೨ ಜನ ಟಿಎಂಸಿ ಕಾರ್ಯಕರ್ತರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಸಹಸ್ರಾರು ಜನರನ್ನು ಜೈಲಿಗಟ್ಟಲಾಗಿದ್ದು, ಸಾವಿರಾರು ಕಾರ್ಯಕರ್ತರು ಪ್ರಾಣಭಯದಿಂದ ಮನೆ ಬಿಟ್ಟು ಓಡಿಹೋಗಿದ್ದಾರೆ. ಇಂತಹ ಕಷ್ಟದ ಸಮಯದಲ್ಲಿ ನನ್ನ ಕಾರ್ಯಕರ್ತರನ್ನು ನಾನು ಕೈಬಿಡುವುದಿಲ್ಲ. ಪ್ರಜಾಪ್ರಭುತ್ವದ ಪ್ರತಿಭಟನೆಗಳನ್ನು ಹತ್ತಿಕ್ಕಲಾಗುತ್ತಿದೆ. ನಮ್ಮನ್ನು ಎಲ್ಲಿ ತಡೆಯುತ್ತಾರೋ ಅಲ್ಲೇ ರಸ್ತೆ ಮಧ್ಯೆ ಕುಳಿತುಕೊಳ್ಳುತ್ತೇನೆ, ಬೇಕಿದ್ದರೆ ನನ್ನನ್ನು ಅರೆಸ್ಟ್ ಮಾಡಲಿ ಎಂದು ಸವಾಲು ಹಾಕಿದ್ದಾರೆ.