ಇಂದಿಗೂ ಜೀವಂತವಾಗಿದೆ 'ದ್ರೌಪದಿ' ಕಾಲದ ಸಂಪ್ರದಾಯ! ಈ ಗ್ರಾಮದಲ್ಲಿ ಎಲ್ಲಾ ಸಹೋದರರಿಗೆ ಇವಳೇ ಏಕೈಕ ಪತ್ನಿ! | Draupadi

Draupadi
Draupadi
Published on

ಶಿಮ್ಲಾ:ಮಹಾಭಾರತದ ಕಾಲದಲ್ಲಿ ದ್ರೌಪದಿಯು (Draupadi)ಪಂಚ ಪಾಂಡವರನ್ನು ವಿವಾಹವಾಗಿದ್ದಕಥೆಯನ್ನು ನಾವೆಲ್ಲ ಕೇಳಿದ್ದೇವೆ. ಆದರೆ, ಆಧುನಿಕ ಜಗತ್ತಿನಲ್ಲೂ ಇಂತಹದ್ದೊಂದು ಪದ್ಧತಿ ಜೀವಂತವಾಗಿದೆ ಎಂದರೆ ನಂಬಲೇಬೇಕು.

ಹೌದು,ಭಾರತದಹಿಮಾಲಯದ ತಪ್ಪಲಿನಲ್ಲಿರುವ ಕೆಲವು ಗ್ರಾಮಗಳಲ್ಲಿ ಇಂದಿಗೂ ಒಂದು ಕುಟುಂಬದ ಎಲ್ಲಾಸಹೋದರರು ಸೇರಿ ಒಬ್ಬಳೇ ಹುಡುಗಿಯನ್ನುಮದುವೆಯಾಗುವ 'ಬಹುಪತಿತ್ವ' (Polyandry) ಸಂಪ್ರದಾಯ ಅಸ್ತಿತ್ವದಲ್ಲಿದೆ.

ಎಲ್ಲಿನಡೆಯುತ್ತದೆ ವಿಶಿಷ್ಟ ವಿವಾಹ?

ಹಿಮಾಚಲಪ್ರದೇಶದ ಸಿರ್ಮೌರ್ ಜಿಲ್ಲೆಯ ಟ್ರಾನ್ಸ್ ಗಿರಿ ಪ್ರದೇಶ, ಕಿನ್ನೌರ್ಮತ್ತು ಉತ್ತರಾಖಂಡದ ಜೌನ್ಸರ್ ಬಾವರ್ ಪ್ರದೇಶಗಳಲ್ಲಿ ವಿಚಿತ್ರ ಸಂಪ್ರದಾಯವನ್ನುಕಾಣಬಹುದು. ಇತ್ತೀಚೆಗೆ ಹಟ್ಟಿ ಬುಡಕಟ್ಟು ಜನಾಂಗಕ್ಕೆ ಸೇರಿದ ಇಬ್ಬರು ಸಹೋದರರು ಒಬ್ಬಳೇ ಯುವತಿಯನ್ನು ಸಾಂಪ್ರದಾಯಿಕವಾಗಿ ಮದುವೆಯಾಗಿದ್ದು ದೊಡ್ಡ ಸುದ್ದಿಯಾಗಿತ್ತು. ಪದ್ಧತಿಯನ್ನು ಸ್ಥಳೀಯವಾಗಿ"ಜೋಡಿದಾರ್"ಅಥವಾ "ಜಜ್ಡಾ" ಎಂದು ಕರೆಯಲಾಗುತ್ತದೆ.

ಸಂಪ್ರದಾಯದ ಹಿಂದಿರುವ ಅಸಲಿ ಕಾರಣವೇನು?

ಆಸ್ತಿವಿಭಜನೆ ತಡೆ: ಬೆಟ್ಟಗಾಡು ಪ್ರದೇಶಗಳಲ್ಲಿ ಕೃಷಿ ಭೂಮಿ ತುಂಬಾಕಡಿಮೆ ಇರುತ್ತದೆ. ಸಹೋದರರು ಬೇರೆ ಬೇರೆ ಮದುವೆಯಾದರೆಆಸ್ತಿ ಭಾಗವಾಗಿ ಕುಟುಂಬ ಬಡವಾಗುತ್ತದೆ. ಇದನ್ನು ತಡೆಯಲು ಎಲ್ಲರೂ ಒಂದೇ ಕುಟುಂಬವಾಗಿ ಉಳಿಯಲು ದಾರಿ ಕಂಡುಕೊಳ್ಳಲಾಗಿದೆ.

ಕುಟುಂಬದಒಗ್ಗಟ್ಟು:"ಮನೆ ಮುರಿದು ಹೋಗಬಾರದು" ಎಂಬ ಉದ್ದೇಶದಿಂದ ಪದ್ಧತಿ ಇಂದಿಗೂ ಮುಂದುವರಿದಿದೆ.

ಜವಾಬ್ದಾರಿಹಂಚಿಕೆ: ಕಠಿಣ ಹವಾಮಾನದ ಪ್ರದೇಶಗಳಲ್ಲಿಒಬ್ಬ ಸಹೋದರ ಕೃಷಿಗೆ ಹೋದರೆ, ಮತ್ತೊಬ್ಬ ವ್ಯಾಪಾರ ಅಥವಾ ಭದ್ರತೆಗೆ ಹೋಗುತ್ತಾನೆ.ಹೀಗೆ ಕುಟುಂಬದ ನಿರ್ವಹಣೆ ಸುಲಭವಾಗುತ್ತದೆ.

ಕಾನೂನುಮತ್ತು ಸಾಮಾಜಿಕ ಮಾನ್ಯತೆ:

ಭಾರತೀಯಕಾನೂನಿನಲ್ಲಿ ಬಹುಪತ್ನಿತ್ವ ಅಥವಾ ಬಹುಪತಿತ್ವಕ್ಕೆ ಅವಕಾಶವಿಲ್ಲದಿದ್ದರೂ, ಭಾಗದ ಕಂದಾಯ ದಾಖಲೆಗಳಲ್ಲಿ"ಜೋಡಿದಾರ್" ಪದ್ಧತಿಯ ಉಲ್ಲೇಖಗಳಿವೆ. ಸಮಾಜವು ಇದನ್ನು ಗೌರವದಿಂದ ಕಾಣುತ್ತದೆ. ವಿಶೇಷವೆಂದರೆ, ಹುಟ್ಟುವ ಮಕ್ಕಳಿಗೆ ಹಿರಿಯ ಸಹೋದರನೇ ಕಾನೂನುಬದ್ಧ ತಂದೆಯಾಗಿರುತ್ತಾನೆ, ಆದರೆ ಎಲ್ಲಾ ಸಹೋದರರುಮಕ್ಕಳ ಜವಾಬ್ದಾರಿಯನ್ನು ಸಮಾನವಾಗಿ ಹಂಚಿಕೊಳ್ಳುತ್ತಾರೆ,(ಏಜೆನ್ಸೀಸ್‌).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net